More

    ಮೀನುಗಾರಿಕಾ ಕ್ಷೇತ್ರಕ್ಕೂ ಎಫ್‌ಪಿಒ: ದ.ಕ, ಉಡುಪಿ ಜಿಲ್ಲೆಗಳಲ್ಲಿ 7 ಸಂಸ್ಥೆಗಳ ರಚನೆ

    ಮಂಗಳೂರು: ರೈತರು, ಮೀನುಗಾರರು, ನೇಕಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ರಾಜ್ಯದಲ್ಲಿ 750 ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಒ)ಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ಮೀನುಗಾರ ಸಮೂಹವನ್ನು ಉತ್ತೇಜಿಸುವ ಸಲುವಾಗಿ ಮೀನು ಕೃಷಿಕರ ಉತ್ಪಾದಕ ಸಂಸ್ಥೆ ರಚಿಸಲು ಮೀನುಗಾರಿಕಾ ಇಲಾಖೆ ನಿರ್ಧರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಹಾಗೂ ಉಡುಪಿಯಲ್ಲಿ 4 ಮೀನು ಎಫ್‌ಪಿಒಗಳು ಕಾರ್ಯಾರಂಭಿಸಿವೆ.

    ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿರುವ ಪಿಎ್ಒ ಸ್ವರೂಪದಲ್ಲಿ ಮೀನುಗಾರರಿಗೆ ಸೀಮಿತವಾಗಿ ಮೀನು ಕೃಷಿಕರ ಉತ್ಪಾದಕ ಸಂಸ್ಥೆ (ಎ್ಎ್ಪಿಒ) ರಚಿಸಲಾಗುತ್ತದೆ. ಈ ಮೂಲಕ ಮೀನು ಕೃಷಿಕರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಲು ಸಂಸ್ಥೆ ಸಹಕಾರ ನೀಡಲಿದೆ.

    750 ಎಫ್‌ಪಿಒಗಳಲ್ಲಿ ಇಲಾಖಾವಾರು ಹಾಗೂ ವರ್ಷವಾರು ಗುರಿ ನಿಗದಿ ಮಾಡಲಾಗಿದೆ. ಈ ಪೈಕಿ ಮೀನುಗಾರಿಕೆ ಇಲಾಖೆಗೆ ಒಟ್ಟು 93 ಸಂಸ್ಥೆಯ ವಾರ್ಷಿಕ ಗುರಿ ನಿಗದಿ ಮಾಡಲಾಗಿದೆ. ಈಗಾಗಲೇ ವಿವಿಧ ಜಿಲ್ಲೆಗಳಿಂದ 15 ಎ್ಎ್ಪಿಒಗಳು ನೋಂದಣಿಯಾಗಿವೆ.

    ಉತ್ಪನ್ನಗಳಿಗೆ ಮಾರುಕಟ್ಟೆ: ಉತ್ಪಾದಕರಾಗಿರುವ ಮೀನುಗಾರರ ಉತ್ಪನ್ನಗಳಿಗೆ ಹಲವು ಬಾರಿ ಸೂಕ್ತ ಬೆಲೆ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಉತ್ಪಾದಕರ ಸಂಸ್ಥೆಗಳ ರಚನೆಯು ಉತ್ಪಾದಕರ ಸಂಘಟನೆಗೆ ಕಾರಣವಾಗುತ್ತದೆ. ಮತ್ತು ಸಂಧಾನ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒಗ್ಗಟ್ಟಿನಿಂದ ಎದುರಿಸಬಹುದು. ಈ ಮೂಲಕ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಾಧ್ಯ ಹಾಗೂ ಉತ್ಪಾದಕ ಸಂಸ್ಥೆಗಳ ಮೂಲಕ ಗುಣಮಟ್ಟದ ಪರಿಕರ, ಯಂತ್ರಗಳು, ಮೂಲಸೌಕರ್ಯಗಳನ್ನು ಕಲ್ಪಿಸಬಹುದಾಗಿದೆ. ಜತೆಗೆ ಉತ್ಪಾದನೆಗೆ ಸೂಕ್ತ ಬೆಲೆ ದೊರಕಿಸಿ ಸದಸ್ಯರ ಆದಾಯ ಹೆಚ್ಚಿಸಬಹುದು.

    ನೇರವಾಗಿ ಮಾರಾಟ ವ್ಯವಸ್ಥೆ: ಸರ್ಕಾರದ ಅಭಿವೃದ್ಧಿ ಇಲಾಖೆ, ವಿವಿ, ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ-ಖಾಸಗಿ ಪಾಲುದಾರರೊಂದಿಗೆ ಸಂಬಂಧ ವೃದ್ಧಿಸುವ ಮೂಲಕ ಉತ್ಪಾದಕ ಸಂಸ್ಥೆಗಳ ಪ್ರಭಾವ ಹೆಚ್ಚಿಸಬಹುದು. ನವೀನ ಕಲಿಕೆಯನ್ನು ರಾಜ್ಯಕ್ಕೆ ಹಾಗೂ ಸಹಭಾಗಿ ಸಂಸ್ಥೆಗಳಿಗೆ ನೀಡಲು ಪ್ರಖ್ಯಾತ ಸಂಸ್ಥೆಗಳೊಂದಿಗೆ ಸಹಯೋಗ ಬೆಳೆಸಬಹುದು. ಸದ್ಯ ಮೀನುಗಾರ ಸಹಕಾರಿ ಸಂಘಗಳು ಬ್ಯಾಂಕಿಂಗ್ ಸ್ವರೂಪದಲ್ಲಿ ಕಾರ್ಯನಿರ್ವಹಿಸಿದರೆ, ಮೀನು ಕೃಷಿಕರ ಉತ್ಪಾದಕ ಸಂಸ್ಥೆಗಳು ಅವರ ಉದ್ಯಮಕ್ಕೆ ಬೇಕಾಗುವ ಸಲಹೆ-ಸಹಕಾರ ಹಾಗೂ ಮಾರ್ಗದರ್ಶನಕ್ಕಾಗಿ ಮೀಸಲಾಗಿರುತ್ತದೆ. ಉತ್ಪಾದಕ ಸಂಸ್ಥೆಗಳು ತಮ್ಮ ಸದಸ್ಯರಿಗೆ ಅಗತ್ಯವಿರುವ ಗುಣಮಟ್ಟದ ಪರಿಕರಗಳನ್ನು ಖರೀದಿಸುವುದು ಹಾಗೂ ಅವರು ಉತ್ಪಾದಿಸಿದ ಉತ್ಪನ್ನಗಳನ್ನು ತನ್ನ ಸದಸ್ಯರಿಂದ ಖರೀದಿಸಿ ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಮಾರಾಟ ಮಾಡುವ ಮೂಲಕ ಹೆಚ್ಚಿನ ದರ ಪಡೆಯಬಹುದು.

    ಮೀನು ಕೃಷಿಕರ ಉತ್ಪಾದಕ ಸಂಸ್ಥೆ ಸ್ಥಾಪನೆಗೆ ಕನಿಷ್ಠ 100 ಸದಸ್ಯರು ಬೇಕು. ಇದರಲ್ಲಿ ಮೀನು ಕೃಷಿಯ ಉತ್ಪಾದನೆ ಹಾಗೂ ಮಾರಾಟದಿಂದ ಸಂಸ್ಥೆಗೆ ಲಾಭವಾಗಲಿದೆ. ಮೀನುಗಾರಿಕೆ ಇಲಾಖೆಗೆ ಒಟ್ಟು 93 ಸಂಸ್ಥೆಯ ವಾರ್ಷಿಕ ಗುರಿ ನಿಗದಿಯಾಗಿದ್ದು, ದ.ಕ ಹಾಗೂ ಉಡುಪಿಯಲ್ಲಿ ಒಟ್ಟು 7 ಮೀನು ಕೃಷಿಕರ ಉತ್ಪಾದಕ ಸಂಸ್ಥೆ ಅಸ್ಥಿತ್ವಕ್ಕೆ ಬಂದಿದೆ.

    ಎಸ್.ಅಂಗಾರ, ಮೀನುಗಾರಿಕಾ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts