More

    ಜಿಲ್ಲೆಯಲ್ಲಿ 600 ಆಕ್ಸಿಜನ್ ಬೆಡ್ ವ್ಯವಸ್ಥೆ ; ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ

    ತುಮಕೂರು : ಪ್ರಸ್ತುತ ಜಿಲ್ಲೆಯಲ್ಲಿ 600 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಲಭ್ಯವಿರಲಿದ್ದು, ಕರೊನಾ ಸೋಂಕಿತರು ಇನ್ನು ಮುಂದೆ ಭೀತಿಗೊಳಗಾಗುವ ಪ್ರಮೇಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ತುಮಕೂರು ಮರ್ಚೆಂಟ್ ಕ್ರೆಡಿಟ್ ಕೋ-ಆಪರೇಟಿವ್ (ಟಿಎಂಸಿಸಿ) ಬ್ಯಾಂಕ್, ಜಿಲ್ಲಾ ಜಲ್ಲಿ ಕ್ರಷರ್ ಅಸೋಸಿಯೇಷನ್, ಜಿಲ್ಲಾ ರೈಸ್ ಮಿಲ್ ಆಸೋಸಿಯೇಷನ್ ಹಾಗೂ ವಿವಿಧ ಕೈಗಾರಿಕೆ, ಸಂಘ-ಸಂಸ್ಥೆಗಳ ವತಿಯಿಂದ ದೇಣಿಗೆ ರೂಪದಲ್ಲಿ ನೀಡಲಾದ 2 ಕೋಟಿ ರೂಪಾಯಿ ವೆಚ್ಚದ 300 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದರು.

    ಆಮ್ಲಜನಕ ಸಾಂದ್ರಕಗಳ ನೆರವಿನಿಂದಾಗಿ ಕೋವಿಡ್ ನಿರ್ವಹಣೆಗೆ ಹೆಚ್ಚು ಸಹಕಾರಿಯಾಗಿದೆ. ಸರ್ಕಾರ ಹಾಗೂ ದಾನಿಗಳ ನೆರವಿನಿಂದಾಗಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಇದರಿಂದ ಆಮ್ಲಜನಕ ಉತ್ಪಾದನೆಯಲ್ಲಿ ಜಿಲ್ಲಾಡಳಿತ ಸ್ವಾವಲಂಬನೆ ಸಾಧಿಸಲಿದೆ. ಇದರಿಂದಾಗಿ ಕೋವಿಡ್ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ. ಕರೊನಾ 3ನೇ ಅಲೆ ಬಂದರೂ ಸಮರ್ಥವಾಗಿ ನಿಭಾಯಿಸಬಲ್ಲ ಶಕ್ತಿ ಜಿಲ್ಲಾಡಳಿತಕ್ಕೆ ಇದೆ ಎಂದರು.

    ತುಮಕೂರಿನ ಸ್ಮಶಾನದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಆರು ಒಲೆಗಳ ನೆರವನ್ನು ಟಿಎಂಸಿಸಿ ನೀಡಿದೆ. ರುದ್ರ ಭೂಮಿಯ ವ್ಯವಸ್ಥೆಯ ನಿರ್ವಹಣೆಯನ್ನು ಎನ್.ಎಸ್.ಜಯಕುಮಾರ್ ವಹಿಸಿಕೊಂಡಿದ್ದಾರೆ. ಇದರಿಂದ ಮೃತ ಸೋಂಕಿತರ ಸಂಸ್ಕಾರಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.

    ಸಂಸದ ಜಿ. ಎಸ್. ಬಸವರಾಜ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಒ ಡಾ.ಕೆ. ವಿದ್ಯಾಕುಮಾರಿ, ಎಸ್ಪಿ ಡಾ.ಕೆ. ವಂಶಿಕೃಷ್ಟ, ಡಿಎಚ್​ಒ ಡಾ.ನಾಗೇಂದ್ರಪ್ಪ, ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್. ಎಸ್.ಜಯಕುಮಾರ್, ಜಿಲ್ಲಾ ಜಲ್ಲಿ ಕ್ರಷರ್ ಅಸೋಸಿಯೇಷನ್​ನ ಹೆಬ್ಬಾಕ ರವಿ, ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗೇಶ್ ಮತ್ತಿತರರು ಇದ್ದರು.

    2 ಕೆಎಲ್ ಸಾಮಥ್ಯದ ಆಕ್ಸಿಜನ್ ಘಟಕ : ಜಪಾನ್​ನ ಟಿಮ್ಯಾಕ್ ಕಂಪೆನಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ 2 ಕೆಎಲ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದೆ. ತುರುವೇಕೆರೆ ತಾಲೂಕಿನಲ್ಲಿ ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆ 500 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಉತ್ಪದನಾ ಘಟಕ ಸ್ಥಾಪನೆಗೆ ನೆರವು ನೀಡಲಿದೆ. ಅದೇ ರೀತಿ ಗುಬ್ಬಿಯಲ್ಲಿಯೂ ರೋಟರಿ ಸಂಸ್ಥೆ ವತಿಯಿಂದ ಆಮ್ಲಜನಕ ಘಟಕ ಲಭ್ಯವಾಗುತ್ತಿದೆ. ವಿಪೋ›ದವರು ಒಂದು ಘಟಕ ನೀಡಲಿದ್ದಾರೆ. ಇದರಿಂದ ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಆಮ್ಲಜನಕ ಹಾಸಿಗೆಗಳು ಲಭ್ಯವಿರುವಂತೆ ಕ್ರಮವಹಿಸಲಾಗುವುದು ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದರು.

    ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ 0 .4 ಟಿಎಂಸಿ ಹಾಗೂ ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ತಿಪಟೂರು ತಾಲಕುಗಳ ಕೆರೆಗಳಿಗೆ 0.4ಟಿಎಂಸಿ ಸೇರಿದಂತೆ ಒಟ್ಟು 0.8 ಟಿಎಂಸಿ ನೀರನ್ನು ಹಾಸನದ ಗೊರೂರು ಜಲಾಶಯದಿಂದ ಹರಿಸಲು ಕ್ರಮ ವಹಿಸಲಾಗಿದೆ.

    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts