More

    ಉತ್ತರ ಪ್ರದೇಶದಲ್ಲಿ 60 ವರ್ಷದ ಮಹಿಳೆಯ ಹತ್ಯೆ, ಸಹಾಯಕ್ಕೆ ಧಾವಿಸದೆ, ದೃಶ್ಯ ಚಿತ್ರೀಕರಿಸಿದವರಿಗೆ ಆಗಿದ್ದೇನು?

    ಲಖನೌ: ಯಾರಾದರೂ ಏನಾದರೂ ಅಪಾಯದಲ್ಲಿದ್ದಾರೆ ಎಂದರೆ ಜನರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಹಾಯ ಮಾಡಲು ಮುಂದಾಗುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ಕಣ್ಣೆದುರು ನಡೆಯುತ್ತಿದ್ದ 60 ವರ್ಷದ ಮಹಿಳೆಯ ಹತ್ಯೆಯ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಳ್ಳುತ್ತಾ ನಿಂತಿದ್ದ ಜನರು, ಆಕೆಗೆ ಸಹಾಯ ಮಾಡುವ ಕನಿಷ್ಠ ಪ್ರಜ್ಞೆಯನ್ನೇ ಮರೆತಿದ್ದರು.

    ಲಖನೌ ಬಳಿಯ ಕಸ್​ಗಂಜ್​ ಎಂಬಲ್ಲಿ ಈ ಘಟನೆ ನಡೆದಿದೆ. ಮಹಿಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಆಕೆಯ ಎದುರಿಗೆ ಬರುವ ವ್ಯಕ್ತಿ ನಾಡಪಿಸ್ತೂಲ್​ ಅನ್ನು ಆಕೆಯೆಡೆಗೆ ಗುರಿ ಮಾಡುತ್ತಾನೆ. ಆತ ಗುಂಡು ಹೊಡೆಯುವ ಭೀತಿಯಲ್ಲಿ ಮಹಿಳೆ ಯಾವುದೋ ಮನೆಯೊಳಗೆ ಹೋಗಲು ಪ್ರಯತ್ನಿಸುತ್ತಾಳೆ. ಅಷ್ಟರಲ್ಲೇ ಆತ ಮೊದಲ ಗುಂಡು ಹಾರಿಸುತ್ತಾನೆ.

    ಗುಂಡೇಟು ತಿಂದ ಆಕೆ ನೆಲದ ಮೇಲೆ ಬಿದ್ದು, ಸಹಾಯಕ್ಕಾಗಿ ಮೊರೆ ಇಡುತ್ತಾಳೆ. ಆದರೂ ಯಾರೊಬ್ಬರೂ ಆಕೆಯ ಸಹಾಯಕ್ಕೆ ಹೋಗುವುದಿಲ್ಲ. ಅಷ್ಟರಲ್ಲೇ ಆ ವ್ಯಕ್ತಿ ಮತ್ತೊಂದು ಗುಂಡು ಹಾರಿಸಿದಾಗ, ಆಕೆ ಸ್ಥಳದಲ್ಲೇ ಪ್ರಾಣಬಿಡುತ್ತಾಳೆ.
    ಈ ದೃಶ್ಯವನ್ನು ಮೊದಲ ಮಹಡಿಯಲ್ಲಿ ನಿಂತಿರುವ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. 1 ನಿಮಿಷದ ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

    ಅದನ್ನು ಆಧರಿಸಿ ಮೋನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ಆತನನ್ನು ವಿಚಾರಣೆ ಒಳಪಡಿಸಲಾಗಿದೆ. ಕೊಲೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ಸಹಾಯಕ್ಕೆ ಧಾವಿಸದೆ, ದೃಶ್ಯವನ್ನು ಚಿತ್ರೀಕರಿಸಿಕೊಳ್ಳುವಲ್ಲಿ ಮಗ್ನರಾಗಿದ್ದ ಆರೋಪದಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ದಕ್ಷಿಣ ಕಮಾಂಡ್​ನಲ್ಲಿ ತರಬೇತಿನಿರತ ಯೋಧರಿಗಾಗಿ ಸಂಚರಿಸಲಿವೆ ಯೋಧರ ಸ್ಪೆಷಲ್​ ರೈಲುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts