More

    5,6,9ನೇ ತರಗತಿ ಮೌಲ್ಯಂಕನ ಮಾದರಿ ಪ್ರಶ್ನೆಪತ್ರಿಕೆ ಪ್ರಕಟ: ಪ್ರಶ್ನೆಪತ್ರಿಕೆ ಹೇಗಿರಲಿದೆ ಇಲ್ಲಿದೆ ನೋಡಿ

    ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 5,8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೌಲ್ಯಂಕನದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಿದೆ.

    ಪಬ್ಲಿಕ್ ಪರೀಕ್ಷೆ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸುವ ಕ್ರಮಕ್ಕೆ ಮಂಡಳಿ ಮುಂದಾಗಿದೆ. ಪ್ರಶ್ನೆಪತ್ರಿಕೆ ಮಾದರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರಿಂದ ಯಾವ ರೀತಿಯ ಪ್ರಶ್ನೆಗಳು ಬರಲಿವೆಯೋ ಎಂಬ ಆತಂಕ ದೂರವಾಗಲಿದೆ. ವಿದ್ಯಾರ್ಥಿಗಳಲ್ಲಿರುವ ದುಗುಡ ದೂರವಾದಲ್ಲಿ ವಿದ್ಯಾರ್ಥಿಗಳ ನಿಜವಾದ ಪ್ರತಿಭೆ ಹೊರ ಬರಲಿದೆ ಎಂಬುದು ಮಂಡಳಿಯ ಉದ್ದೇಶವಾಗಿದೆ.

    ಮಾದರಿ ಪ್ರಶ್ನೆಪತ್ರಿಕೆ ಹೇಗಿದೆ?

    5ನೇ ತರಗತಿಗೆ 40 ಅಂಕಗಳ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದೆ. 2 ಗಂಟೆಯ ಸಮಯವಿರುತ್ತದೆ. ಒಂದು ಅಂಕದ 14 ಪ್ರಶ್ನೆಗಳು, 2 ಅಂಕದ 4 ಪ್ರಶ್ನೆಗಳು, 3 ಅಂಕದ 2 ಪ್ರಶ್ನೆಗಳು ಮತ್ತು 4 ಅಂಕದ 3 ಪ್ರಶ್ನೆಗಳನ್ನು ನೀಡಲಾಗಿದೆ.

    8ನೇ ತರಗತಿಗೆ 50 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಎರಡೂವರೆ ಗಂಟೆ ಸಮಯ ನೀಡಲಾಗಿದೆ. ಒಂದು ಅಂಕದ 20 ಪ್ರಶ್ನೆಗಳು, 2 ಅಂಕದ 6 ಪ್ರಶ್ನೆಗಳು ಮತ್ತು 3 ಅಂಕದ 3 ಪ್ರಶ್ನೆಗಳು, 4 ಮತ್ತು 5 ಅಂಕದ ತಲಾ ಒಂದು ಪ್ರಶ್ನೆಗಳನ್ನು ನೀಡಿದೆ.

    9ನೇ ತರಗತಿಗೆ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಮೂರೂಕಾಲು ಗಂಟೆ ಸಮಯ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 9ನೇ ತರಗತಿಯಿಂದಲೇ ಅಭ್ಯಾಸವಾಗಲಿ ಎಂಬ ಉದ್ದೇಶದಿಂದ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ.

    ಒಂದು ಅಂಕದ 17 ಪ್ರಶ್ನೆಗಳು, 2 ಅಂಕದ 10 ಪ್ರಶ್ನೆಗಳು, 3 ಅಂಕದ 11 ಪ್ರಶ್ನೆಗಳು, 4 ಅಂಕದ 5 ಪ್ರಶ್ನೆಗಳು ಮತ್ತು 5 ಅಂಕದ 2 ಪ್ರಶ್ನೆಗಳನ್ನು ನೀಡಲಾಗಿದೆ.

    ವಿದ್ಯಾರ್ಥಿಗಳನ್ನು ಪಠ್ಯಕ್ಕೆ ಸೀಮಿತಗೊಳಿಸಬೇಡಿ

    ಈ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿಧಾನವನ್ನು ಮನದಟ್ಟು ಮಾಡಿಸುವಂತೆ ಎಲ್ಲ ಶಾಲೆಗಳಿಗೂ ನಿರ್ದೇಶನ ನೀಡಲಾಗಿದೆ. ಕೇವಲ ಪುಸ್ತಕದಲ್ಲಿ ನೀಡಿರುವ ಪ್ರಶ್ನೆಗಲಿಗೆ ಮಾತ್ರ ಅಥವಾ ಮುಖ್ಯ ವಿಷಯಗಳಿಗೆ ಮಾತ್ರ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ ಸಂಪೂರ್ಣವಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸಿದಾಗ ವಿದ್ಯಾರ್ಥಿಗಳಿಗೆ ಯಾವುದೇ ಪ್ರಶ್ನೆ ನೀಡಿದರೂ ಉತ್ತರ ನೀಡುವಂತಿರಬೇಕು ಎಂದು ಮಂಡಳಿಯು ನಿರ್ದೇಶನ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts