More

    ಮನೆನೂ ಸೇಫ್​ ಅಲ್ವಾ? ಈ 53 ವರ್ಷದ ಮಹಿಳೆಗೆ ಎದುರಾದ ದುರಂತ ನೋಡಿದ್ರೆ ಹಾಗೆ ಅನ್ಸೋದು ಸಹಜ…

    ಭೋಪಾಲ್​: ರಾಷ್ಟ್ರಾದ್ಯಂತ ಕರೊನಾ ಭೀತಿ. ಲಾಕ್​ಡೌನ್​ ನಿಯಮ ಮೀರಿ ಮನೆಯಿಂದ ಹೊರಗೆ ಹೋಗುವಂತಿಲ್ಲ. ಆದರೆ ಕೆಲವು ಸ್ಯಾಡಿಸ್ಟ್​ಗಳಿಗೆ, ರೇಪಿಸ್ಟ್​ಗಳಿಗೆ ಇದೆಲ್ಲ ಅನ್ವಯ ಆಗುವುದೇ ಇಲ್ಲ. ಈಗ ಭೋಪಾಲ್​ನಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ. ಪಾಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.

    ಮೂಲತಃ ರಾಜಸ್ಥಾನದ ಸಿರೋಹಿ ಜಿಲ್ಲೆಯವರಾದ 53 ವರ್ಷದ ಮಹಿಳೆಯೋರ್ವರು ಭೋಪಾಲ್​​ನ ಪಾಶ್​ ಶಹ್​​ಪುರದಲ್ಲಿರುವ ತಮ್ಮ ಫ್ಲಾಟ್​​​​​ನಲ್ಲಿ ಒಬ್ಬರೇ ಇದ್ದರು. ಅವರು ರಾಜ್ಯಸರ್ಕಾರದ ಬ್ಯಾಂಕ್​ವೊಂದರಲ್ಲಿ ಮ್ಯಾನೇಜರ್​. ಪತಿ ಕೆಲವು ದಿನಗಳ ಹಿಂದೆ ರಾಜಸ್ಥಾನಕ್ಕೆ ಹೋದವರು, ಲಾಕ್​ಡೌನ್​ ಇದ್ದುದರಿಂದ ಅವರಿಗೆ ವಾಪಸ್​ ಬರಲು ಆಗಿರಲಿಲ್ಲ. ಹಾಗಾಗಿ ಮಹಿಳೆಯೋರ್ವರೇ ಫ್ಲಾಟ್​​ನಲ್ಲಿ ಇದ್ದರು. ಅವರಿಗೆ ದೃಷ್ಟಿದೋಷ ಕೂಡ ಇದೆ.

    ಆದರೆ ಶುಕ್ರವಾರ ಅವರ ಪಾಲಿಗೆ ಅಶುಭ ಕಾದಿತ್ತು. ಅದ್ಯಾವುದೋ ಅಪರಿಚಿತ ವ್ಯಕ್ತಿಯೋರ್ವ ಮನೆಗೆ ನುಗ್ಗಿ ವಯಸ್ಸಾದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದ. ಇಂಥ ಲಾಕ್​ಡೌನ್​ ಇದೆ. ರಸ್ತೆ ಮೇಲೆ ಜನರು ಓಡಾಡಬಾರದು ಎಂದು ನಿಯಮವೇ ಇದೆ. ಬಹುತೇಕ ಎಲ್ಲ ಏರಿಯಾಗಳಲ್ಲೂ ಪೊಲೀಸ್ ಕಣ್ಗಾವಲು ಇದೆ. ಹಾಗಿದ್ದರೂ ಫ್ಲಾಟ್​​ಗೆ ನುಗ್ಗಿ ಅತ್ಯಾಚಾರ ಮಾಡಿದ್ದಾನೆ.

    ಈತ ಏಣಿಯನ್ನು ಬಳಸಿ ಕಟ್ಟಡದ ಸೆಕೆಂಡ್​ ಫ್ಲೋರ್​ಗೆ ಹೋಗಿ, ನಂತರ ಬಾಲ್ಕನಿಯ ಬಾಗಿಲಿನಿಂದ ಬ್ಯಾಂಕ್​ ಮ್ಯಾನೇಜರ್​ ಮನೆಗೆ ನುಗ್ಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts