More

    500 ಲೀ. ಕಳ್ಳಬಟ್ಟಿ ಸಾರಾಯಿ ವಶ

    ಹಾನಗಲ್ಲ: ಪೊಲೀಸರು, ಅಬಕಾರಿ ಅಧಿಕಾರಿಗಳು ಜಂಟಿ ದಾಳಿ ನಡೆಸಿ 500 ಲೀ. ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡ ಘಟನೆ ತಾಲೂಕಿನ ಹುಲುಗಿನ ಕೊಪ್ಪ ಗ್ರಾಮದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ನಡೆದಿದೆ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಮದ್ಯದಂಗಡಿಗಳು ಬಾಗಿಲು ಮುಚ್ಚಿದ್ದರಿಂದ ತಾಲೂಕಿನಲ್ಲಿ ಕಳ್ಳಬಟ್ಟಿ ಸಾರಾಯಿ ಹಾವಳಿ ಹೆಚ್ಚಾಗಿರುವ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು-ಸಿಬ್ಬಂದಿ ಹುಲುಗಿನಕೊಪ್ಪ ಗ್ರಾಮದ ಅಕ್ರಮ ಕಳ್ಳಬಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು. ಗ್ರಾಮದ ಮಾವಿನ ತೋಪುಗಳಲ್ಲಿ ಅಲ್ಲಲ್ಲಿ ನೆಲದಲ್ಲಿ ಹುದುಗಿಸಿಟ್ಟಿದ್ದ ಪ್ಲಾಸ್ಟಿಕ್ ಡ್ರಂ ಹಾಗೂ ರಬ್ಬರ್ ಟ್ಯೂಬ್​ಗಳಲ್ಲಿ ತುಂಬಿಸಿಟ್ಟಿದ್ದ 1 ಸಾವಿರ ಲೀಟರ್ ಬೆಲ್ಲದ ಕೊಳೆ ನಾಶಪಡಿಸಿದರು. ಅಲ್ಲದೆ, ಕೆಲ ಮನೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಮನೆಯ ಹಿತ್ತಲಿನಲ್ಲಿ ಅಡಗಿಸಿಟ್ಟಿದ್ದ ಸುಮಾರು 500 ಲೀ. ಕಳ್ಳಬಟ್ಟಿ ಸಾರಾಯಿ, ಅದಕ್ಕೆ ಬಳಸುವ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

    ಈ ಕುರಿತು 5 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಂಕ್ರಮ್ಮ ಹನುಮಂತಪ್ಪ ಪೂಜಾರ ಮತ್ತು ಜ್ಯೋತಿ ಬಂಡಿವಡ್ಡರ ಎಂಬ ಇಬ್ಬರು ಆರೋಪಿತರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನುಳಿದ ಲಕ್ಷ್ಮೀ ಈಶ್ವರ ದೊಡ್ಡಮನಿ, ವಿಶಾಲ ಪರಶುರಾಮ ಕುರಿ, ಶಂಕ್ರಪ್ಪ ತಿಮ್ಮಪ್ಪ ಗೌಂಡಿ ಮೂವರು ತಲೆಮರೆಸಿಕೊಂಡಿರುವುದಾಗಿ ಅಬಕಾರಿ ಇಲಾಖೆ ತಿಳಿಸಿದೆ. ದಾಳಿಯಲ್ಲಿ ಹಾವೇರಿ ಅಬಕಾರಿ ಉಪಅಧೀಕ್ಷಕ ಹೊನ್ನಪ್ಪ ಓಲೇಕಾರ, ನಿರೀಕ್ಷಕ ಪರಶುರಾಮ ವಡ್ಡರ, ಸಿಪಿಐ ಪ್ರವೀಣ ನೀಲಮ್ಮನವರ, ಪಿಎಸ್​ಐಗಳಾದ ಬಿ.ಎನ್. ಮಂಜುನಾಥ್, ಎನ್.ಎಚ್. ಆಂಜನೇಯ, ಸಂಪತ್ ಆನಿಕಿವಿ, ವಿಠ್ಠಲ್ ಅಗಾಸಿ, ಈರಣ್ಣ ಲಂಗೋಟಿ, ರಾಜೇಂದ್ರ ಹೂಗಾರ, ಉಪನಿರೀಕ್ಷಕ ಮಹೇಶಗೌಡ ಪಾಟೀಲ, ನಾಗಮ್ಮ ಮಣ್ಣಮ್ಮನವರ, ಅಬಕಾರಿ ಇನ್ಸಪೆಕ್ಟರ್ ಮಲ್ಲಪ್ಪ ಕುಂದಗೋಳ, ಐ.ಆರ್. ಅಗಸಿಬಾಗಿಲ, ಪಿ. ತಿರುಪತಿ, ಸತೀಶ ವಡೆಯರ, ಎನ್.ಜಿ. ಸೋಮಸಾಗರ, ಕುಮಾರ ಹಿರೇಮಠ, ಎಚ್.ಬಿ. ಜಾನಗೇರಿ, ಬಸವರಾಜ ಬಿಕ್ಕಣ್ಣನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts