More

    ಕರೊನಾ ಸಂಕಷ್ಟದಲ್ಲಿ ವಕೀಲರ ಕೈಹಿಡಿದ ಪರಿಷತ್​: 1 ಲಕ್ಷ ರೂ. ವಿಮೆ, ಸೋಂಕಿತರಿಗೆ 50 ಸಾವಿರ ರೂ. ಆರ್ಥಿಕ ನೆರವು

    ಬೆಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ವಕೀಲರ ನೆರವಿಗೆ ಬರಲು ಕರ್ನಾಟಕ ರಾಜ್ಯ ವಕೀಲರ ಪರಿಷತ್​ ಮಹತ್ವದ ನಿರ್ಧಾರ ಕೈಗೊಂಡಿದೆ.

    ಕರೊನಾ ಸೋಂಕಿತ ವಕೀಲರಿಗೆ ಉತ್ತಮ ಚಿಕಿತ್ಸೆ ಪಡೆಯಲು ನೆರವಾಗುವಂತೆ ಪರಿಷತ್​ ನಿಧಿಯಿಂದ ಆರ್ಥಿಕ ನೆರವು ಮತ್ತು ವಿಮಾ ಸೌಲಭ್ಯ ಕಲ್ಪಿಸಲಾಗುವುದು. ಸಂಕಷ್ಟದ ಸಂದರ್ಭದಲ್ಲಿ ವಕೀಲರ ಹಿತ ಕಾಯುವುದು ಪರಿಷತ್​ನ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಪರಿಷತ್​ ಅಧ್ಯಕ್ಷ ಜೆ.ಎಂ.ಅನಿಲ್​ ಕುಮಾರ್​ ತಿಳಿಸಿದ್ದಾರೆ.

    ಇದನ್ನೂ ಓದಿರಿ ಇನ್ಮುಂದೆ ಭಾನುವಾರವೂ ಬಸ್ ಸಂಚಾರ, ರಾತ್ರಿ ವೇಳೆಯೂ ಸಾರಿಗೆ ಸೇವೆ ಲಭ್ಯ

    ರಾಜ್ಯ ವಕೀಲರ ಪರಿಷತ್​ನಲ್ಲಿ ನೋಂದಣಿಯಾಗಿರುವ ವಕೀಲರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಆಥಿರ್ಕ ನೆರವು ಘೋಷಿಸಲಾಗಿದೆ. ಕರೊನಾ ಸೋಂಕಿಗೆ ಒಳಗಾಗಿರುವ ವಕೀಲರಿಗೆ ಉತ್ತಮ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ತಲಾ 50 ಸಾವಿರ ರೂ. ಆಥಿರ್ಕ ನೆರವು ನೀಡಲಾಗುತ್ತದೆ. ಜತೆಗೆ ನೋಂದಣಿಯಾಗಿರುವ ಪ್ರತಿಯೊಬ್ಬ ವಕೀಲರಿಗೂ ಒಂದು ಲಕ್ಷ ರೂ. ವಿಮಾ ಸೌಲಭ್ಯ ಕಲ್ಪಿಸಲು ತೀಮಾರ್ನಿಸಲಾಗಿದೆ ಎಂದು ಜೆ.ಎಂ.ಅನಿಲ್​ ಕುಮಾರ್​ ಹೇಳಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕಡೌನ್​ ಸಡಿಲಗೊಳಿಸಿ ಅನ್​ಲಾಕ್​ 3.0 ನಿಯಮ ಪ್ರಕಟಿಸಿದೆ. ಆದ್ದರಿಂದ, ಕೂಡಲೇ ರಾಜ್ಯದ ಎಲ್ಲ ನ್ಯಾಯಾಲಯಗಳ ಕಾರ್ಯಕಲಾಪಗಳನ್ನು ಪುನರಾರಂಭಿಸಲು ಕ್ರಮ ತೆಗೆದುಕೊಳ್ಳಬೇಕು. ವಿಡಿಯೋ ಕಾನ್ಫರೆನ್ಸ್​ ಬದಲಿಗೆ ಮೊದಲಿನಂತೆ ಭೌತಿಕ ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.

    ವಕೀಲರ ಸಮುದಾಯಕ್ಕೆ ನೆರವು ನೀಡಲು ಸರ್ಕಾರ 5 ಕೋಟಿ ರೂ. ನೆರವು ನೀಡಿದೆ. ಆ ಹಣವನ್ನು ಸಂಕಷ್ಟದಲ್ಲಿರುವ ವಕೀಲರಿಗೆ ಪಾರದರ್ಶಕವಾಗಿ ವಿತರಿಸಲು ಪರಿಷತ್​ ಸಭೆಯಲ್ಲಿ ತೀಮಾರ್ನಿಸಲಾಗಿದೆ ಎಂದು ಅನಿಲ್​ ಕುಮಾರ್​ ತಿಳಿಸಿದರು.

    ಅಧಿಕಾರ, ಹಣಕ್ಕಾಗಿ ಹಲವು ಬಾರಿ ಡಿ.ಕೆ.ಶಿವಕುಮಾರ್​ ನನ್ನ ಕಾಲಿಗೆ ಬಿದ್ದಿದ್ದಾರೆ… ಅದರ ವಿಡಿಯೋ ಇದೆ: ಸಿ.ಪಿ.ಯೋಗೇಶ್ವರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts