More

    ಈ ವರ್ಷ 50 ಸಾವಿರ ಮನೆಗಳ ನಿರ್ಮಾಣ

    ನೆಲಮಂಗಲ: ಪ್ರಸಕ್ತ ವರ್ಷದಲ್ಲಿ 50 ಸಾವಿರ ಮನೆ ಹಾಗೂ ಮುಂದಿನ 3 ವರ್ಷಗಳಲ್ಲಿ 3 ಲಕ್ಷಕ್ಕೂ ಅಧಿಕ ಮನೆ ನಿರ್ವಿುಸುವ ಗುರಿ ಇದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಬೆಂಗಳೂರು ಉತ್ತರ ತಾಲೂಕಿನ ಅಗ್ರಹಾರಪಾಳ್ಯದಲ್ಲಿ ಸೋಮವಾರ ರಾಜೀವ್ ಗಾಂಧಿ ವಸತಿ ನಿಗಮದ ಬೆಂಗಳೂರು ವಸತಿ ಯೋಜನೆಯಡಿ ಬಹುಮಹಡಿ ಮನೆಗಳ ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

    4 ವರ್ಷಗಳ ಹಿಂದೆ ಆಗಿನ ಸಿಎಂ ಸಿದ್ದರಾಮಯ್ಯ 1 ಲಕ್ಷ ಮನೆ ನಿರ್ವಿುಸುವುದಾಗಿ ಘೋಷಿಸಿದ್ದರು. ಆದರೆ, ಕೇಂದ್ರ ಸರ್ಕಾರದ ಅನುದಾನ ಪಡೆದು ಕಾರ್ಯಗತಗೊಳಿಸುವಲ್ಲಿ ವಿಫಲವಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಯೋಜನೆ ಮರು ಪರಿಶೀಲಿಸಿ ಲಕ್ಷ ಮನೆಗಳ ಪೈಕಿ 836 ಮನೆಗಳ ನಿರ್ವಣಕ್ಕೆ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದೀಗ ಅಡಿಗಲ್ಲು ಹಾಕಲಾಗಿದೆ ಎಂದರು.

    ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕ ಬೆಲೆಬಾಳುವ ಸರ್ಕಾರಿ ಜಾಗವಿದೆ. ಬಲಾಢ್ಯರು ಒತ್ತುವರಿ ಮಾಡಿಕೊಳ್ಳುವುದನ್ನು ತಪ್ಪಿಸಿ ಬಡವರಿಗಾಗಿ ಮನೆ ನಿರ್ವಿುಸಲಾಗುತ್ತಿದೆ. ಯಲಹಂಕ ಕ್ಷೇತ್ರಕ್ಕೆ 5 ಸಾವಿರ ಮನೆಗಳನ್ನು ಒದಗಿಸಲು ವಸತಿ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದರು.

    ಕ್ಷೇತ್ರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ ಎಂಬ ವಿಶ್ವಾಸವಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ನನ್ನನ್ನು ಬೆಂಗಳೂರು ನಗರ ಜಿಪಂ ಅಧ್ಯಕ್ಷನಾಗಿ ಮಾಡಿದ ಕೀರ್ತಿ ಶಾಸಕ ಎಸ್.ಆರ್.ವಿಶ್ವನಾಥ್ ಅವರಿಗೆ ಸಲ್ಲಲಿದೆ ಎಂದು ಜಿ.ಮರೀಸ್ವಾಮಿ ತಿಳಿಸಿದರು.

    ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷೆ ಪಾರ್ವತಿಚಂದ್ರಪ್ಪ, ತಾಪಂ ಅಧ್ಯಕ್ಷೆ ಜ್ಯೋತಿಕಲ್ಲೇಶ್, ಉಪಾಧ್ಯಕ್ಷೆ ಜಯಶ್ರೀ ಅಶೋಕ್, ಸದಸ್ಯ ರವಿಕುಮಾರ್, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್​ಕುಮಾರ್​ವಿುೕನಾ, ಜಿಲ್ಲಾಧಿಕಾರಿ ಶಿವಮೂರ್ತಿ, ಜಿಪಂ ಸದಸ್ಯ ರವಿಕುಮಾರ್, ಗೋಪಾಲಪುರ ಗ್ರಾಪಂ ಅಧ್ಯಕ್ಷ ಟಿ.ಎಂ.ಬಸವೇಗೌಡ, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮಪ್ರಸಾದ್​ವುನೋಹರ ವಿ. ಇತರರಿದ್ದರು.

    1 ಮನೆಗೆ 6.5 ಲಕ್ಷ ರೂ.ವೆಚ್ಚ

    ನೆಲಮಹಡಿ ಜತೆಗೆ 3 ಮಹಡಿಗಳ ಕಟ್ಟಡ ಕಟ್ಟಲು ತಿರ್ವನಿಸಿದ್ದು,1 ಮನೆ ನಿರ್ವಣಕ್ಕೆ 6.5 ಲಕ್ಷ ರೂ. ವೆಚ್ಚ ತಗಲಲಿದ್ದು, 3 ರಿಂದ 4 ಲಕ್ಷವರೆಗಿನ ಹಣವನ್ನು ಸರ್ಕಾರದಿಂದಲೇ ಭರಿಸುವ ಯೋಜನೆಯಿದೆ. ಉಳಿದ ಹಣ ತೀರಿಸಲು ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಲಾಗುವುದು. ತಿಂಗಳೊಳಗಾಗಿ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಹುಮಹಡಿ ಮನೆಗಳ ನಿರ್ವಣಕ್ಕೆ ಚಾಲನೆ ದೊರೆಯಲಿದೆ ಎಂದು ವಸತಿ ಸಚಿವ ಸೋಮಣ್ಣ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts