ಶಾಶ್ವತವಾಗಿ 5 ಕೆ.ಜಿ. ಅಕ್ಕಿ ವಿತರಣೆ

1 Min Read
ಶಾಶ್ವತವಾಗಿ 5 ಕೆ.ಜಿ. ಅಕ್ಕಿ ವಿತರಣೆ
ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಸಾರ್ವಜನಿಕರಿಗೆ ಭಾರತ್ ಅಕ್ಕಿ ವಿತರಿಸಿದರು. ಸಂದೇಶ್ ಜವಳಿ, ಅನಿಲ್, ಸಂತೋಷ್ ದೇವಾಡಿಗ ಇತರರಿದ್ದರು.

ತೀರ್ಥಹಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶಾಶ್ವತವಾಗಿ 5 ಕೆ.ಜಿ ಅಕ್ಕಿ ವಿತರಿಸುತ್ತಿದೆ. ಭಾರತ್ ಅಕ್ಕಿ ಯೋಜನೆಯಲ್ಲಿ ಕೆ.ಜಿಗೆ 29 ರೂ.ನಂತೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಸೋಮವಾರ ಪಟ್ಟಣದ ತಾಲೂಕು ಕಚೇರಿ ಎದುರು ಭಾರತ್ ಅಕ್ಕಿ ವಿತರಿಸಿ ಮಾತನಾಡಿದ ಅವರು, ಈ ದಿನ ತಾಲೂಕಿಗೆ 2000 ಬ್ಯಾಗ್ ಅಕ್ಕಿ ಬಂದಿದ್ದು, ಭಾರತ್ ಅಕ್ಕಿ ಯೋಜನೆಯಲ್ಲಿ ಎಲ್ಲರೂ ಖರೀದಿಸಬಹುದು ಎಂದರು. ಅಕ್ಕಿ ಖರೀದಿಸಲು ಬೆಳಗ್ಗಿನಿಂದಲೇ ಉದ್ದ ಸಾಲು ನಿರ್ಮಾಣವಾಗಿತ್ತು. ಮೊದಲ ಕಂತಿನಲ್ಲಿ ತಾಲೂಕಿಗೆ ಬಂದಿದ್ದ 10 ಕೆಜಿ ತೂಕದ 2000 ಬ್ಯಾಗ್ ಅಕ್ಕಿ ಮಾರಾಟವಾಗಿದೆ. ಪಪಂ ಸದಸ್ಯ ಸಂದೇಶ್ ಜವಳಿ, ಬಿಜೆಪಿ ಮುಖಂಡರಾದ ಟಿ.ಎನ್.ಅನಿಲ್ ಹಾಗೂ ಸಂತೋಷ್ ದೇವಾಡಿಗ ಇದ್ದರು.

See also  ನೆರೆ ಪರಿಹಾರ ಅಕ್ರಮ ತನಿಖೆಗೆ ಆದೇಶ
Share This Article