More

    45 ಅಡಿ ಎತ್ತರಕ್ಕೇರಿದ ಹೈಟೆನ್ಷನ್ ವೈರ್

    ಹುಬ್ಬಳ್ಳಿ: ನಗರದ ಹೊರ ವಲಯದಲ್ಲಿ ನಿರ್ವಿುಸುತ್ತಿರುವ ರಿಂಗ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದ ಹೈಟೆನ್ಷನ್ ವೈರ್ ಅನ್ನು ಕೊನೆಗೂ 15 ಅಡಿಯಿಂದ 45 ಅಡಿ ಎತ್ತರಕ್ಕೆ ಏರಿಸಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಇದ್ದ ಆತಂಕ ನಿವಾರಣೆಯಾಗಿದೆ.
    ನಗರದ ವಾಹನ ದಟ್ಟಣೆ ಕಡಿಮೆ ಮಾಡಲೆಂದು ಕುಸುಗಲ್ ರಸ್ತೆ (ವಿಜಯಪುರ- ಸೊಲ್ಲಾಪುರ), ಗದಗ ರಸ್ತೆ (ಹುಬ್ಬಳ್ಳಿ- ಹೊಸಪೇಟೆ), ಪುಣೆ- ಬೆಂಗಳೂರು ರಸ್ತೆ, ಅಂಚಟಗೇರಿ ಬಳಿಯ ಕಾರವಾರ ರಸ್ತೆ (ಅಂಕೋಲಾ- ಗೂಟಿ) ಈ ನಾಲ್ಕೂ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸಲು ಹೊರ ವಲಯದಲ್ಲಿ ರಿಂಗ್ ರಸ್ತೆ ನಿರ್ವಿುಸಲಾಗುತ್ತಿದೆ. ಈಗಾಗಲೇ ಶೇ.80ರಷ್ಟು ಕಾಮಗಾರಿ ಮುಗಿದಿದ್ದು, ಪುಣೆ- ಬೆಂಗಳೂರು ಹಾಗೂ ಗದಗ ರಸ್ತೆ ನಡುವೆ ಈಗಾಗಲೇ ವಾಹನ ಸಂಚಾರ ಆರಂಭವಾಗಿದೆ. ಆದರೆ, ಗದಗ ರಸ್ತೆಯಿಂದ ಕುಸುಗಲ್ ರಸ್ತೆ ನಡುವಿನ ರಸ್ತೆಯಲ್ಲಿ ಹೈಟೆನ್ಷನ್ ವೈರ್ ಕೇವಲ 12ರಿಂದ 17 ಅಡಿ ಎತ್ತರದಲ್ಲಿದ್ದ ಕಾರಣ ವಿದ್ಯುದಾಘಾತದ ಭೀತಿಯಿಂದ ಇಲ್ಲಿ ಸಂಚಾರ ಆರಂಭವಾಗಿರಲಿಲ್ಲ. ಈ ಕುರಿತು ‘ವರ್ತಳ ರಸ್ತೆ ಸಂಚಾರಕ್ಕೆ ಹೈಟೆನ್ಷನ್!’ ಶೀರ್ಷಿಕೆಯಡಿ ‘ವಿಜಯವಾಣಿ’ ಜೂನ್ 25ರಂದು ವಿಶೇಷ ವರದಿ ಪ್ರಕಟಿಸಿತ್ತು. ಎಚ್ಚೆತ್ತ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಹೈಟೆನ್ಷನ್ ವೈರ್ ಎತ್ತರಕ್ಕೇರಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
    1.20 ಕೋಟಿ ರೂ. ಬಿಡುಗಡೆ: ಹೈಟೆನ್ಷನ್ ವೈರ್ ಶಾಶ್ವತವಾಗಿ ಎತ್ತರಕ್ಕೇರಿಸುವ ಕಾಮಗಾರಿ ಗಾಗಿ ಲೋಕೋಪಯೋಗಿ ಇಲಾಖೆ 1.20 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಕಾಮಗಾರಿಯಿಂದ ಹೈಟೆನ್ಷನ್ ವೈರ್ ಒಟ್ಟು 70 ಅಡಿ ಎತ್ತರಕ್ಕೇರಲಿದೆ. ಕುಸುಗಲ್ ರಸ್ತೆಯಿಂದ ಗದಗ ರಸ್ತೆವರೆಗಿನ ರಿಂಗ್ ರಸ್ತೆ ನಿರ್ವಣದ ಗುತ್ತಿಗೆ ಪಡೆದಿರುವ ಕಾನ್​ಕಾರ್ಡ್ ಅಥವಾ ಬೇರೆ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಇಇ ವಿಜಯಕುಮಾರ ಎಂ. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts