More

    4 ಬಾರಿ ‘ಮಿಸ್ಟರ್ ಇಂಡಿಯಾ’ ಬಾಡಿಬಿಲ್ಡಿಂಗ್ ಚಾಂಪಿಯನ್ ಆಗಿದ್ದ ಆಶಿಶ್ ಸಖರ್ಕರ್ ನಿಧನ

    ನವದೆಹಲಿ: ನಾಲ್ಕು ಬಾರಿ ‘ಮಿಸ್ಟರ್ ಇಂಡಿಯಾ’ ದೇಹದಾರ್ಢ್ಯ ಪ್ರಶಸ್ತಿಯನ್ನು ಗೆದ್ದಿರುವ ದೇಹದಾರ್ಢ್ಯ ಪಟು ಆಶಿಶ್ ಸಖರ್ಕರ್ ಅವರು ಅನಾರೋಗ್ಯದಿಂದ ತಮ್ಮ 43 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

    ಆರೋಗ್ಯ ಸಮಸ್ಯೆಗಳಿಂದಾಗಿ ಸಖರ್ಕರ್ ಮುಂಬೈನಲ್ಲಿ ಒಂದು ವಾರದವರೆಗೆ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಖರ್ಕ ಪತ್ನಿ ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ. ಸಖರ್ಕರ್ ಅವರ ಅಂತಿಮ ವಿಧಿಗಳನ್ನು ಇಂದು ಸಂಜೆ ನೆರವೇರಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.

    ಇದನ್ನೂ ಓದಿ: ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ

    80-ಕೆಜಿ ವಿಭಾಗದಲ್ಲಿ ಬಾಡಿ ಬಿಲ್ಡರ್, ಸಖರ್ಕರ್ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ಮಹಾರಾಷ್ಟ್ರ ಸರ್ಕಾರದ ಶಿವ ಛತ್ರಪತಿ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಇದನ್ನೂ ಓದಿ: ತಂದೆಗೆ ತಕ್ಕ ಮಗಳು; ಹುಟ್ಟುಹಬ್ಬದಂದು ಬಡ ಮಕ್ಕಳಿಗೆ ಸೈಕಲ್ ಗಿಫ್ಟ್​​ ನೀಡಿದ ಮಹೇಶ್ ಬಾಬು ಪುತ್ರಿ ಸಿತಾರಾ

    ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಖರ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, “ಅವರ ನಿರ್ಗಮನದಿಂದ ದೇಹ ನಿರ್ಮಾಣ ಉದ್ಯಮಕ್ಕೆ ಅಪಾರ ನಷ್ಟ ಉಂಟಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ತಂದೆಗೆ ತಕ್ಕ ಮಗಳು; ಹುಟ್ಟುಹಬ್ಬದಂದು ಬಡ ಮಕ್ಕಳಿಗೆ ಸೈಕಲ್ ಗಿಫ್ಟ್​​ ನೀಡಿದ ಮಹೇಶ್ ಬಾಬು ಪುತ್ರಿ ಸಿತಾರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts