More

    ಶಾಕಿಂಗ್​! ಮನೆಯೊಳಗಿದ್ದ 4 ತಿಂಗಳ ಮಗುವನ್ನು ಎತ್ತಿಕೊಂಡು ಹೋದ ಕೋತಿ ಮಾಡಿದ್ದೇನು?

    ಬರೇಲಿ: ಕೆಲವೆಡೆ ಕೋತಿಗಳ ಹಾವಳಿ ಹೆಚ್ಚಾಗಿರುವುದನ್ನು ಕಾಣುತ್ತೇವೆ. ಆಹಾರ ಹುಡುಕಿ ಮನೆಗಳಿಗೆ ನುಗ್ಗುವುದು ಕೂಡ ಸಾಮಾನ್ಯ. ಆದರೆ ಹೀಗೆ ಮನೆಯೊಳಗೆ ನುಗ್ಗಿದ ಕೋತಿ ದೊಡ್ಡ ಅನಾಹುತವೊಂದನ್ನು ಮಾಡಿದೆ. ಸಣ್ಣ ಮಕ್ಕಳನ್ನು ಒಂಟಿಯಾಗಿ ಬಿಟ್ಟರೆ ಏನು ಅನಾಹುತವಾಗಲಿದೆ ಎಂಬುದಕ್ಕೆ ಇದು ದೊಡ್ಡ ಉದಾಹರಣೆ ಎನ್ನಬಹುದು.

    ಮಕ್ಕಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕಿದೆ ಎಂಬ ಹಿರಿಯರ ಮಾತು ಅಕ್ಷರಶಃ ಸತ್ಯ. ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯವಾಗಬಹುದು. ಇಲ್ಲಿಯೂ ಕೂಡ ಇಂತಹ ಘಟನೆಯೊಂದು ನಡೆದಿದೆ.

    ಉತ್ತರ ಪ್ರದೇಶ ಬರೇಲಿಯಲ್ಲಿ ಈ ದುರ್ಘಟನೆಯೊಂದು ಸಂಭವಿಸಿದ್ದು, ಮನೆಯೊಳಗೆ ಬಂದ ಕೋತಿ ನಾಲ್ಕು ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿದ್ದಲ್ಲದೇ ಕಟ್ಟಡದ ಮೇಲಿಂದ ಎಸೆದಿದೆ. ಮೇಲಿಂದ ಬಿದ್ದ ರಭಸಕ್ಕೆ ಹಸುಗೂಸು ಸಾವನ್ನಪ್ಪಿದೆ.

    ಘಟನೆ ಬಳಿಕ ಕೋತಿಗಳ ಹಾವಳಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿದೆ ಎಂದು ಮುಖ್ಯ ಅರಣ್ಯಾಧಿಕಾರಿ ಲಲಿತ್​ ವರ್ಮಾ ತಿಳಿಸಿದ್ದಾರೆ.

    ಬರೇಲಿಯ ಡಂಕಾ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಮಗುವನ್ನು ಬಿಟ್ಟು ತಾಯಿ ಮನೆಕೆಲಸದಲ್ಲಿ ತೊಡಗಿದ್ದ ವೇಳೆ ಮನೆಯೊಳಗೆ ಬಂದ ಕೋತಿ ಮಗುವನ್ನು ಎತ್ತಿಕೊಂಡು ಹೋಗಿದೆ. ಈ ವೇಳೆ ನೋಡಿದ ಮಗುವಿನ ತಂದೆ ಓಡಿಹೋಗಿದ್ದಾರೆ. ತನ್ನನ್ನು ಹೊಡೆಯಲು ಬರುತ್ತಿದೆ ಎಂದು ಭಯಗೊಂಡ ಕೋತಿ ಮೇಲಿನಿಂದ ಕೆಳಕ್ಕೆ ಮಗುವನ್ನು ಎಸೆದಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಗೆಲುವು ನಿಶ್ಚಿತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಸೇತುವೆಯಿಂದ ಏಕಾಏಕಿ ನದಿಗೆ ಉರುಳಿತು ಬಸ್​: 13 ಜನರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts