More

    4 ಸಾವಿರ ಎಕರೆಯಲ್ಲಿ ನೀಲಗಿರಿ ಮರ ತೆರವಿಗೆ ಕ್ರಮ

    ದೇವನಹಳ್ಳಿ: ಅಂತರ್ಜಲಕ್ಕೆ ಮಾರಕವಾದ ನೀಲಗಿರಿ ಮರಗಳ ತೆರವಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ನಿಸರ್ಗ ನಾರಾಯಸ್ವಾಮಿ ಹೇಳಿದರು.

    ಪಟ್ಟಣ ಹೊರವಲಯ ಸಾವಕನಹಳ್ಳಿ ಅರಣ್ಯ ಉದ್ಯಾನವನದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಸಸಿ ನೆಟ್ಟು ಮಾತನಾಡಿದರು.

    ಸರ್ಕಾರಿ ಜಾಗ ಮತ್ತು ಅರಣ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ನೀಲಗಿರಿ ಮರಗಳಿದ್ದು, ಈಗಾಗಲೇ ವರ್ಷದಿಂದ ಬುಡ ಸಮೇತ ತೆಗೆಸಲು ಕ್ರಮವಹಿಸಲಾಗಿದೆ. ಜನಜಾಗೃತಿ ಮೂಡಿಸಿ ರೈತರೇ ಸ್ವಯಂಪ್ರೇರಿತರಾಗಿ ತೆರವುಗೊಳಿಸುವಂತೆ ಮನವೊಲಿಸಲಾಗುವುದು ಎಂದು ಹೇಳಿದರು.

    ನೀಲಗಿರಿ ಮರ ತೆಗೆದ ಬಳಿಕ ಇದೇ ಸ್ಥಳದಲ್ಲಿ ಪ್ರಕೃತಿಗೆ ಹಾಗೂ ರೈತರು ಮತ್ತು ಪ್ರಾಣಿಪಕ್ಷಿಗಳಿಗೆ ಉಪಯೋಗವಾಗಬಲ್ಲ ಸಸಿಗಳನ್ನು ನೆಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಅರಣ್ಯ ಇಲಾಖೆಯ ಎಸಿಎಫ್ ಸುಬ್ಬರಾವ್ ಮಾತನಾಡಿ, ಭಾರತ ಸರ್ಕಾರದಿಂದ ತಾಲೂಕಿನಲ್ಲಿ 2020-21ನೇ ಸಾಲಿನಲ್ಲಿ ಒಂದು ಸಾವಿರ ಎಕರೆಯಲ್ಲಿ ನೀಲಗಿರಿ ಮರ ತೆರವಿಗೆ ಅನುಮತಿ ದೊರೆದಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ರೈತರಿಗೆ ನೀಲಗಿರಿ ತೆರವುಗೊಳಿಸಿ ಅದರ ಬದಲು ಉತ್ತಮ ಲಾಭದಾಯಕ ಮರ ಬೆಳೆಸಲು ಪ್ರೋತ್ಸಾಹಿಸಲಾಗುವುದು ಎಂದರು.

    ಸಬ್ಸಿಡಿಯಲ್ಲಿ 3 ರೂ.ಗೆ ಒಂದು ಸಸಿ ನೀಡಲಾಗುವುದು. ಮೂರು ವರ್ಷ ಗಿಡ ಬದುಕುಳಿದರೆ ಒಂದು ಸಸಿಗೆ 138 ರೂ. ಪ್ರೋತ್ಸಾಹ ಧನವನ್ನು ರೈತರಿಗೆ ನೀಡಲಾಗುವುದು ಎಂದರು.

    ಡಿಸಿಎಫ್ ಆಂಥೋಣಿ ಮರಿಯಪ್ಪ, ವಲಯ ಅರಣ್ಯಾಧಿಕಾರಿ ಧನಲಕ್ಷ್ಮೀ, ಉಪ ವಲಯ ಅರಣ್ಯಾಧಿಕಾರಿಗಳಾದ ರೆಹಮಾನ್, ಬಸವರಾಜ್, ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ವಿಎಸ್‌ಎಸ್‌ಎನ್ ಅಧ್ಯಕ್ಷ ಎನ್.ಸೊಣ್ಣಪ್ಪ, ತಾಲೂಕು ಸೊಸೈಟಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಪಿಎಲ್‌ಡಿಬ್ಯಾಂಕ್ ಅಧ್ಯಕ್ಷ ಮುನಿರಾಜು, ಪುರಸಭಾ ಸದಸ್ಯರಾದ ಜಿ..ರವೀಂದ್ರ ಎಸ್.ನಾಗೇಶ್, ಜೆಡಿಎಸ್ ಯುವ ಅಧ್ಯಕ್ಷ ಆರ್.ಭರತ್, ನರಗಮಹಳ್ಳಿ ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts