More

    ಮನೆ ಸೇರಲೆಂದು ಮಹಾರಾಷ್ಟ್ರದಿಂದ ಹೊರಟ ಕೃಷಿ ವಿದ್ಯಾರ್ಥಿಗಳು ಕೊನೆಗೆ ತಲುಪಿದ್ದು ಎಲ್ಲಿಗೆ ಗೊತ್ತೇ… ಇಲ್ಲಿದೆ ಮಾಹಿತಿ

    ಕಲಬುರಗಿ: ಅವರೆಲ್ಲರೂ ಮಹಾರಾಷ್ಟ್ರದ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಾಕ್​ಡೌನ್​ ಏಪ್ರಿಲ್​ 14ಕ್ಕೆ ಮುಗಿಯುವ ಬದಲು ಮೇ 3ಕ್ಕೆ ವಿಸ್ತರಣೆಗೊಂಡಿದ್ದರಿಂದ ಬೇಸರಗೊಂಡಿದ್ದರು. ಹಾಗಾಗಿ ಕರ್ನಾಟಕದ ತಮ್ಮ ಊರುಗಳಿಗೆ ಕಾಲ್ನಡಿಗೆ ಮೂಲಕ ಮರಳಲು ನಿರ್ಧರಿಸಿದರು.

    ಅದರಂತೆ 15 ವಿದ್ಯಾರ್ಥಿನಿಯರು ಸೇರಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ 39 ವಿದ್ಯಾರ್ಥಿಗಳು ಲಾಥೂರ್​ನಿಂದ ಹೊರಟು ಆಲಂದ ತಾಲೂಕಿನ ಕಾಜುರಿ ಸಮೀಪದ ಅಂತರರಾಜ್ಯ ಚೆಕ್​ಪೋಸ್ಟ್​ ತಲುಪಿದರು. ಅಲ್ಲಿ ಅವರನ್ನು ತಡೆದ ಅಧಿಕಾರಿಗಳು, ವಿಚಾರಣೆ ನಡೆಸಿದರು. ಬಳಿಕ ಆಳಂದದ ಹೊರವಲಯದಲ್ಲಿರುವ ಕೋರಳ್ಳಿ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಕ್ವಾರಂಟೈನ್​ನಲ್ಲಿ ಇರಿಸಲಾಗಿರುವ 39 ವಿದ್ಯಾರ್ಥಿಗಳು ಲಾಥೂರ್​ನ ಕೃಷಿ ಮಹಾವಿದ್ಯಾಲಯದಲ್ಲಿ ಆರು ತಿಂಗಳಿನಿಂದ ನಡೆಯುತ್ತಿದ್ದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲೌಕ್​ಡೌನ್​ ಮೇ 3ಕ್ಕೆ ವಿಸ್ತರಣೆಗೊಂಡ ಹಿನ್ನೆಲೆಯಲ್ಲಿ ಆತಂಕಗೊಂಡು, ಕಾಲ್ನಡಿಗೆಯಲ್ಲೇ ತಮ್ಮ ಊರುಗಳನ್ನು ತಲುಪಲು ನಿರ್ಧರಿಸಿ ಬುಧವಾರ ಲಾಥೂರ್​ನಿಂದ ಹೊರಟಿದ್ದರು. ಗುರುವಾರ ಇವರೆಲ್ಲರೂ ಕಾಜುರಿ ತಲುಪಿದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದು, ಕ್ವಾರಂಟೈನ್​ನಲ್ಲಿ ಇರಿಸಲಾಯಿತು ಎಂದು ಹೇಳಿದ್ದಾರೆ.

    ಪಾಕಿಸ್ತಾನದಿಂದ ಕರೊನಾ ಭಯೋತ್ಪಾದನೆ, ಕಾಶ್ಮೀರಕ್ಕೆ ಕೋವಿಡ್​ 19 ಸೋಂಕಿತ ಉಗ್ರರ ರವಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts