More

    39 ಮಂದಿ ದ್ವಿಚಕ್ರವಾಹನ ಕಳ್ಳರ ಬಂಧನ

    ಬೆಂಗಳೂರು:

    ಮಡಿವಾಳ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ 7 ಮಂದಿ ಅಂತಾರಾಜ್ಯ ಕಳ್ಳರು ಸೇರಿ 39 ಮಂದಿಯನ್ನು ಕಳೆದ ಒಂದೇ ತಿಂಗಳಲ್ಲಿ ಆಗ್ನೇಯ ವಿಭಾಗ ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿಗಳ ಬಂಧನದಿಂದ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 139 ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

    ಕೋರಮಂಗಲದ ಸಿಎಆರ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಾಹನ ಕಳೆದುಕೊಂಡ ಮಾಲೀಕರಿಗೆ ದ್ವಿಚಕ್ರ ವಾಹನ ಹಿಂದಿರುಗಿಸಿ ಮಾತನಾಡಿದರು.
    ಕರ್ನಾಟಕದ 32, ತಮಿಳುನಾಡು 6, ಆಂಧ್ರಪ್ರದೇಶದ ಒಬ್ಬನನ್ನು ಬಂಧಿಸಲಾಗಿದೆ. ಒಂದು ತಿಂಗಳಲ್ಲಿ ಈ ಉಪ ವಿಭಾಗಗಳಲ್ಲಿ 174 ದ್ವಿಚಕ್ರ ವಾಹನಗಳನ್ನು ಕಳವು ಮಾಡಲಾಗಿತ್ತು. ಅವುಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆ ವೇಳೆ 39 ಮಂದಿ ಆರೋಪಿಗಳನ್ನು ಬಂಧಿಸಿ 1.62 ಕೋಟಿ ರೂ. ಮೌಲ್ಯದ 169 ದ್ವಿಚಕ್ರ ವಾಹನ, ಐದು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಮಲ್ ಪಂತ್ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts