More

    33.65 ಕೋಟಿ ರೂ. ನಿಗದಿಪಡಿಸಿ ; ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿದ್ಯಾಕುವಾರಿ ಅಧ್ಯಕ್ಷತೆಯಲ್ಲಿ ನಿರ್ಧಾರ

    ತುಮಕೂರು : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸಕ್ತ ಸಾಲಿಗಾಗಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮ(ಎಸ್‌ಡಿಪಿ)ದಲ್ಲಿ 33.65 ಕೋಟಿ ರೂ. ನಿಗದಿಪಡಿಸಿ ಕ್ರಿಯಾಯೋಜನೆ ತಯಾರಿಸಲು ನಿರ್ಧರಿಸಲಾಯಿತು.

    ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಜಿಪಂ ಸಿಇಒ ಡಾ.ಕೆ.ವಿದ್ಯಾಕುವಾರಿ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

    ಸಿಇಒ ಡಾ.ಕೆ.ವಿದ್ಯಾಕುವಾರಿ ಮಾತನಾಡಿ, ಜಿಲ್ಲೆಯಲ್ಲಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮದಡಿ ಬಿಡುಗಡೆಯಾಗುವ ಅನುದಾನವನ್ನು ಕಳೆದ ಸಾಲಿನಿಂದ ಬಾಕಿ ಉಳಿದು ಮುಂದುವರಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಉಳಿದ ಅನುದಾನದಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

    ಎಸ್‌ಡಿಪಿಯಡಿ ಇರುವ 61 ಮುಂದುವರಿದ ಕಾಮಗಾರಿ ಅಪೂರ್ಣಕ್ಕೆ ಕಾರಣ ನೀಡಬೇಕು, ಕಾಮಗಾರಿಗಳು ಕಾಲಮಿತಿಯೊಳಗೆ ಪೂರ್ಣಗೊಳಿಸದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾಮಗಾರಿಯಾಗಲೀ ಅಗತ್ಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳದೆ ವಿನಾಕಾರಣ ಮುಂದೂಡದೆ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

    ಕೆಟ್ಟು ಹೋದ ಪಂಪು ಮೋಟಾರ್‌ಗಳನ್ನು ಸರಿಪಡಿಸಿ ಮರುಬಳಕೆ ವಾಡುವಂತೆ ಕ್ರಮ ಕೈಗೊಳ್ಳಬೇಕೆಂದಲ್ಲದೆ ಶುದ್ಧ ಕುಡಿಯುವ ನೀರಿನ ಟಕಗಳ ದುರಸ್ತಿಗೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಸಾಕಷ್ಟು ದೂರುಗಳು ಬರುತ್ತಿದ್ದು, ಕುಡಿಯುವ ನೀರಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿದ ಕೂಡಲೇ ಇಂಜಿನಿಯರ್‌ಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

    ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇಇ ಕೆ.ಮುತ್ತಪ್ಪ, ಲೆಕ್ಕಶೀರ್ಷಿಕೆ 4215ರ ವಿಶೇಷ ಅಭಿವೃದ್ಧಿ ಕಾರ್ಯಕ್ರಮದಡಿ ಜಿಲ್ಲೆಯ ಕುಣಿಗಲ್ ತಾಲೂಕಿಗೆ 3.89 ಕೋಟಿ ರೂ., ಮಧುಗಿರಿ4.79 ಕೋಟಿ ರೂ., ಗುಬ್ಬಿ5.97 ಕೋಟಿ ರೂ., ಶಿರಾ 4.97 ಕೋಟಿ ರೂ., ಪಾವಗಡ 5.16 ಕೋಟಿ ರೂ., ತುರುವೇಕೆರೆ 2.58 ಕೋಟಿ ರೂ., ಕೊರಟಗೆರೆ 3.13 ಕೋಟಿ ರೂ. ಹಾಗೂ ಚಿಕ್ಕನಾಯಕನಹಳ್ಳಿ 3.13 ಕೋಟಿ ರೂ. ಸೇರಿ ಒಟ್ಟು 33.65 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಲು ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

    ಪ್ರಸಕ್ತ ಸಾಲಿನಲ್ಲಿ ಎಸ್‌ಡಿಪಿಯಡಿ 61 ಮುಂದುವರಿದ ಕಾಮಗಾರಿ, 9 ವಿದ್ಯುತ್ ಸಂಪರ್ಕ, 6 ಬರ ಕಾಮಗಾರಿ, 64 ಶುದ್ಧ ಕುಡಿಯುವ ನೀರಿನ ಟಕ ದುರಸ್ತಿ ಕಾಮಗಾರಿ, 744 ಹೊಸ ಕಾಮಗಾರಿ ಸೇರಿದಂತೆ ಒಟ್ಟು 884 ಕಾಮಗಾರಿಗಳನ್ನು ಕೈಗೊಳ್ಳಲು 33.65 ಕೋಟಿ ರೂಪಾಯಿ ನಿಗದಿಪಡಿಸಿ ಕ್ರಿಯಾ ಸಲ್ಲಿಸಲಾಗುವುದೆಂದು ಸಭೆಗೆ ತಿಳಿಸಿದರು.

    ಎಇಇ ಮಮತಾ, ರಮೇಶ್, ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾದ ಡಿಡಿಪಿಐ ಸಿ. ನಂಜಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಭಾಗ್ಯಮ್ಮ, ವಾರ್ತಾ ಇಲಾಖೆ ರೂಪಕಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts