More

    4,046 ಬೈಕ್ ಸೀಜ್, 32 ಲಕ್ಷ ರೂ. ದಂಡ ವಸೂಲಿ

    ಬೆಳಗಾವಿ: ಜಿಲ್ಲೆಯಲ್ಲಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಏ.1 ರಿಂದ ಮೇ 23ರ ವರೆಗೆ 4,046 ಬೈಕ್ ಸೀಜ್ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಚಿಕ್ಕೋಡಿ ವಿಭಾಗದಲ್ಲಿ 771, ಅಥಣಿ ವಿಭಾಗದಲ್ಲಿ 970, ಬೈಲಹೊಂಗಲ ವಿಭಾಗದಲ್ಲಿ 591, ರಾಮದುರ್ಗ ವಿಭಾಗದಲ್ಲಿ 1,058, ಗೋಕಾಕ ವಿಭಾಗದಲ್ಲಿ 656 ಬೈಕ್ ಸೀಜ್ ಮಾಡಲಾಗಿದೆ.

    ನಾಲ್ಕು ವಿಭಾಗದಲ್ಲಿ ವಿಪತ್ತು ನಿರ್ವಹಣೆ ಕಾಯ್ದೆಯಡಿ 193 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 56 ಜನರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಮಾಸ್ಕ್ ಧರಿಸದ 17,995 ಜನರಿಂದ 18 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ದೈಹಿಕ ಅಂತರ ಕಾಯ್ದುಕೊಳ್ಳದ 2,955 ವಿರುದ್ಧ ಪ್ರಕರಣ ದಾಖಲಿಸಿ 2.95 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

    ಬೆಳಗಾವಿ ನಗರದಲ್ಲಿ 1,963 ಬೈಕ್‌ಗಳನ್ನು ಸೀಜ್ ಮಾಡಲಾಗಿದೆ. 53 ಜನರ ವಿರುದ್ಧ ವಿಪತ್ತು ನಿರ್ವಹಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಾಸ್ಕ್ ಧರಿಸದ 17,496 ಜನರಿಂದ ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆ ಈ ಎಲ್ಲ ಪ್ರಕರಣದಲ್ಲಿ ನಗರ ಪೊಲೀಸರು 32,93,760 ರೂ. ದಂಡ ವಸೂಲಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts