More

    105 ಪ್ರಕರಣಗಳ ಆರೋಪಿ, ಕುಖ್ಯಾತ ಸರಗಳ್ಳನಿಗೆ 3 ವರ್ಷ ಜೈಲು

    ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಬೈಕ್​ ಏರಿ ಒಂಟಿಯಾಗಿ ಸರ ಕಳವು ಮಾಡುತ್ತಿದ್ದ ಕುಖ್ಯಾತ ಸರಗಳ್ಳನಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ 41ನೇ ಎಸಿಎಂಎಂ ನ್ಯಾಯಾಲಯ ತೀರ್ಪು ನೀಡಿದೆ.

    ಅಪರಾಧಿ ಅಚ್ಯುತ್​ ಕುಮಾರ್​ ಗಣಿ ಅಲಿಯಾಸ್​ ವಿಶ್ವನಾಥ್​ ಕೋಳಿವಾಡ ಶಿಕ್ಷೆಗೆ ಗುರಿಯಾದವ. ಪಲ್ಸರ್​ ಬೈಕಿನಲ್ಲಿ ಒಂಟಿಯಾಗಿ ಬರುತ್ತಿದ್ದ ಅಚ್ಯುತ್​, ನಗರದ ಎಲ್ಲೆಡೆ ಸುತ್ತಾಡಿ ಏಳೆಂಟು ಮಹಿಳೆಯರ ಸರ ಕದ್ದು, ಆನಂತರ ನಗರದಿಂದ ಹೊರಹೋಗುತ್ತಿದ್ದ. ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ.

    ಇದನ್ನೂ ಓದಿ: ಮಾಸ್ಕ್​ ವಿವಾದ : ಗ್ರಾಹಕನ ಮೇಲೆ ಗುಂಡು ಹಾರಿಸಿದ ಸೆಕ್ಯುರಿಟಿ ಗಾರ್ಡ್!

    2018ರ ಜೂನ್​ನಲ್ಲಿ ಕಳ್ಳತನಕ್ಕೆ ಬಂದಾಗ ಜ್ಞಾನಭಾರತಿ ಠಾಣೆ ಕಾನ್​ಸ್ಟೇಬಲ್​ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಆಗಿನ ಇನ್​ಸ್ಪೆಕ್ಟರ್​ ಜೆ.ವೈ.ಗಿರಿರಾಜ್​, ಆರೋಪಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ನಗರದಲ್ಲಿ ನಡೆದಿದ್ದ 105 ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಒಟ್ಟಾರೆ 3.5 ಕೆಜಿಯಷ್ಟು ಚಿನ್ನಾಭರಣ ಜಪ್ತಿ ಮಾಡುವಲ್ಲಿ ಪೊಲೀಸರ ತಂಡ ಯಶಸ್ವಿ ಆಗಿತ್ತು. ಈ ಎಲ್ಲ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

    ಈ ಪೈಕಿ ಸರ್ಜಾಪುರ ರಸ್ತೆ ಗ್ರಾಂಡ್​ ಅಪಾರ್ಟ್​ಮೆಂಟ್​ ಎದುರು ಪತಿ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಪ್ರಿನ್ಸ್​ ಶಿವದಾಸ್​ ಅವರ ಸರ ಕಳವು ಮಾಡಿದ್ದ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ 41ನೇ ಎಸಿಎಂಎಂ ಕೋರ್ಟ್​ ನ್ಯಾಯಾಧೀಶ ಎಸ್​.ಎಸ್​.ಭರತ್ ಅವರು, ವಾದ ಮತ್ತು ಪ್ರತಿವಾದ ಆಲಿಸಿ ಅಪರಾಧಿ ಅಚ್ಯುತ್​ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಹಿರಿಯ ಸಹಾಯಕ ಅಭಿಯೋಜಕರಾದ ಜಿ.ತಾರಾನಾಥ ಪೊಲೀಸರ ಪರ ವಾದ ಮಂಡಿಸಿದ್ದರು.

    ರೈಲು ಹತ್ತಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್

    ಡೆಲ್ಟಾ ಪ್ಲಸ್ ಸೋಂಕಿನಿಂದ ಒಬ್ಬರು ಗುಣಮುಖ: ಸಚಿವ ಸುಧಾಕರ್ ಮಾಹಿತಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts