More

    ಪ್ರೀತಿಸುವಂತೆ ಪೀಡಿಸಿದ ಪ್ರೇಮಿಗೆ 3 ವರ್ಷ ಜೈಲು

    ಬೆಂಗಳೂರು: ಪ್ರೀತಿಸುವಂತೆ ಮೊಬೈಲ್‌ಗೆ ಅಶ್ಲೀಲ ಸಂದೇಶ, ರಸ್ತೆಯಲ್ಲಿ ಕೈ ಹಿಡಿದು ಎಳೆದಾಡಿದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್ ಟಿಎಸ್ ಸಿ-1ನೇ ನ್ಯಾಯಾಲಯ ತೀರ್ಪು ನೀಡಿದೆ.

    ಕಲುಬುರಗಿ ಜಿಲ್ಲೆ ಹಲ್ಲೂರು ಗ್ರಾಮದ ಕಿರಣ್ ಕುಮಾರ್ (22) ಅಪರಾಧಿ. 2020ರಲ್ಲಿ ನೌಕರಿ ಅರಸಿ ನಗರಕ್ಕೆ ಬಂದಿದ್ದ ಕಿರಣ್, 15 ವರ್ಷದ ಬಾಲಕಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಚಿಕ್ಕ ಹುಡುಕಿ ಮತ್ತು ಓದಬೇಕೆಂದು ಎಷ್ಟು ಬಾರಿ ಸಂತ್ರಸ್ತೆ ಹೇಳಿದರೂ ಕಿರಣ್ ಮಾತ್ರ ಕಿರುಕುಳ ಕೊಡುವುದು ಬಿಟ್ಟಿರಲಿಲ್ಲ. ಆಕೆಯ ಮೊಬೈಲ್‌ಗೆ ಅಶ್ಲೀಲ ಸಂದೇಶ ಕಳುಹಿಸುವುದು ಮತ್ತು ಆಕೆಯನ್ನು ಹಿಂಬಾಲಿಸಿ ರಸ್ತೆಯಲ್ಲಿ ಕೈ ಹಿಡಿದು ಎಳೆದಾಡಿ ಕಿರುಕುಳ ನೀಡಿದ್ದ. ಈ ಸಂಬಂಧ ಬಾಲಕಿ ಪಾಲಕರು ಕೊಟ್ಟ ದೂರಿನ ಮೇರೆಗೆ ರಾಜಗೋಪಾಲನಗರ ಠಾಣೆ ತನಿಖಾಧಿಕಾರಿಗಳಾದ ರೋಹಿಣಿ ರೆಡ್ಡಿ ಮತ್ತು ಬಸವಲಿಂಗಪ್ಪ ಪ್ರಕರಣ ದಾಖಲು ಮಾಡಿಕೊಂಡು ಕಿರಣ್‌ನ್ನು ಬಂಧಿಸಿದ್ದರು.

    ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ, ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಕೆ.ಎನ್. ರೂಪಾ ಅವರು, ವಾದ-ಪ್ರತಿವಾದ ಆಲಿಸಿ ಕಿರಣ್ ಕುಮಾರ್ ಅಪರಾಧಿ ಎಂದು ಘೋಷಣೆ ಮಾಡಿದ್ದರು. 3 ವರ್ಷಗಳ ಕಾಲ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದರು. ಸಂತ್ರಸ್ತೆಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಡಿಎಲ್‌ಎಸ್‌ಎಗೆ ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts