More

    ಮರಗಾಲು ಕಟ್ಟಿಕೊಂಡು 101 ಕೆಜಿ ಹೊತ್ತು 3 ಕಿ.ಮೀ. ನಡೆದ ಸಾಹಸಿ ಶರಣಪ್ಪ ಪೂಜಾರಿ

    ದೇವರಹಿಪ್ಪರಗಿ: ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಬ್ಬಗಳ ಸಡಗರದ ಮಧ್ಯೆ ಅಲ್ಲಿ ನಡೆಯುವ ಸಾಹಸ ಕ್ರೀಡೆಗಳದ್ದೂ ಒಂದು ವಿಶೇಷ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ನಡೆಯುವ ಸಾಹಸ ಕ್ರೀಡೆಗಳ ಪ್ರದರ್ಶನ ಎಲ್ಲರ ಗಮನವನ್ನೂ ಸೆಳೆಯುತ್ತದೆ.

    ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಮಂಗಳವಾರ ನಡೆದ ಸಾಹಸ ಪ್ರದರ್ಶನದಲ್ಲಿ ಯುವಕರು ಭಾರಹೊತ್ತು ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಚಿಕ್ಕರೂಗಿ ಗ್ರಾಮದ 21 ವರ್ಷ ವಯಸ್ಸಿನ ಯುವಕ ಶರಣಪ್ಪ ರಾಯಗೊಂಡ ಪೂಜಾರಿ ಎಂಬಾತ ಕಾಲಿಗೆ ಮರಗಾಲನ್ನು ಕಟ್ಟಿಕೊಂಡು ಕಡ್ಲೇವಾಡ ಗ್ರಾಮದಿಂದ ಚಿಕ್ಕರೂಗಿಯವರೆಗೆ ಸುಮಾರು 3 ಕಿ.ಮೀ. ದೂರವನ್ನು 101 ಕೆಜಿ ಭಾರದ ಚೀಲ ಹೊತ್ತು ನಡೆದು ಸಾಧನೆ ಮಾಡಿದರು. ಅವರಿಗೆ ಮುತ್ತಪ್ಪ ಮಲೇಶಿ ಬೆನಕನಹಳ್ಳಿ 5 ಗ್ರಾಂ ಬಂಗಾರವನ್ನು ಬಹುಮಾನವಾಗಿ ನೀಡಿದರು.

    ಅದೇ ರೀತಿಯಾಗಿ ಚಿಕ್ಕರೂಗಿ ಗ್ರಾಮದ ಯುವಕ ಪ್ರಕಾಶ ಭೈರವಾಡಗಿ ಎಂಬಾತ 110 ಕೆ.ಜಿ. ತೂಕದ ಚೀಲವನ್ನು ಹೆಗಲ ಮೇಲೆ ಹೊತ್ತು ಸಮೀಪದ ನಿವಾಳಖೇಡದಿಂದ ಚಿಕ್ಕೂರೂಗಿಯವರೆಗೆ ಅಂದಾಜು 11 ಕಿ.ಮೀ.ವರೆಗೆ ರಾಜ್ಯ ಹೆದ್ದಾರಿಯಲ್ಲಿ ನಡೆದು ಬಂದು ಸಾಧನೆಗೈದರು. ಸಾಹಸಿ ಪ್ರಕಾಶ ಭೈರವಾಡಗಿ ಸಾಧನೆಗೆ ಸತೀಶ ಲಗಮಣ್ಣ ಪೂಜಾರಿ ಎಂಬುವವರು 5 ತೊಲೆ ಬೆಳ್ಳಿ ಕಡೆಯನ್ನು ಬಹುಮಾನವಾಗಿ ನೀಡಿದರು. ಇಬ್ಬರೂ ಸಾಧಕರನ್ನೂ ಗ್ರಾಮಸ್ಥರು ಸನ್ಮಾನಿಸಿ ಮೆರವಣಿಗೆ ನಡೆಸಿದ್ದು, ವಿಶೇಷವಾಗಿತ್ತು.

    ಮಾಳಪ್ಪ ಅಜನಾಳ, ಸದಾಶಿವ ಸಿಂದಗಿ, ಭೀಮಾಶಂಕರ ಸಂಗೋಗಿ, ವಿಠ್ಠಲ ಪೂಜಾರಿ, ವಿಠ್ಠಲ ಅಜನಾಳ, ಮಾಳಪ್ಪ ಕೊಟ್ನಾಳ, ಗುತ್ತೆಪ್ಪ ರೊಟ್ಟಿ, ನಿಂಗಪ್ಪ ಅಂಜುಟಗಿ, ರಾಮಗೊಂಡ ಪೂಜಾರಿ, ಸಂತೋಷ ಸಿಂದಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts