More

    3 ತಿಂಗಳಿಗೊಮ್ಮೆ ಕಡ್ಡಾಯ ಸಭೆ, ಶಾಸಕ ನಿಸರ್ಗ ನಾರಾಯಣಸ್ವಾಮಿ ಭರವಸೆ, ತಾಪಂನಲ್ಲಿ ಎಸ್ಸಿಎಸ್ಟಿ ಕುಂದುಕೊರತೆ ಸಭೆ

    ದೇವನಹಳ್ಳಿ: ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿಕೊಡಿ, ಸೂರಿಲ್ಲದವರಿಗೆ ಆಶ್ರಯ ಯೋಜನೆಯಲ್ಲಿ ನಿವೇಶನ ನೀಡಿ ಮನೆ ಕಟ್ಟಿಸಿಕೊಡಿ, ಕಾಲನಿಗಳು ಕೊಳಕಿನಿಂದ ಗಬ್ಬು ನಾರುತ್ತಿವೆ. ಉತ್ತಮ ರಸ್ತೆ ಚರಂಡಿ ಇಲ್ಲ, ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು ದೂರು ನೀಡಿದರೂ ಪೋಲಿಸರುನ್ಯಾಯಕೊಡಿಸುತ್ತಿಲ್ಲ..

    ಇವು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಂದುಕೊರತೆ ಸಭೆಯಲ್ಲಿ ಕೇಳಿಬಂದ ಅಹವಾಲು.

    ಚೀಮಾಚನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳ ಮೆಲೆ ದೌರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ಠಾಣೆಗೆ ಹೋದರೆ ಶಾಸಕರೇ ನೆರವಿಗೆ ಇದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಎಂದು ದಾಸರಬೀದಿ ಮುರಳಿ ಹಾಗೂ ಶಶಿಕಲಾ ಎಂಬುವರು ಆರೋಪಿಸಿದರು.

    ಈ ವೇಳೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಬದ್ದನಾಗಿದ್ದೇನೆ. ಎಲ್ಲಾ ವರ್ಗದವರು ನನ್ನ ಹೆಸರು ಬಳಸಿಕೊಳ್ಳಲಿ ಅಭ್ಯಂತರವಿಲ್ಲ. ಆದರೆ ಯಾರಿಗೆ ನಿಜವಾಗಿ ಅನ್ಯಾಯವಾಗಿರುತ್ತದೆಯೋ ಅಂತಹವರಿಗೆ ನ್ಯಾಯ ಕೊಡಿಸಲು ನಾನು ಮತ್ತು ಅಧಿಕಾರಿಗಳು ಗಮನಹರಿಸುತ್ತವೆ ಎಂದು ಪ್ರತಿಕ್ರಿಯಿಸಿದರು.

    ತಹಸೀಲ್ದಾರ್ ಪದೇ ಪದೇ ವರ್ಗದಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗಿದೆ ಎಂದು ಪಿ.ವಿ.ಬಿಎಸ್ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್ ದೂರಿದರು.

    ಅಭಿವೃದ್ಧಿ ಮಾತಿಗೆ ಆಕ್ಷೇಪ: ಕುಂದಾಣ ಹೋಬಳಿಯಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಮಾಡಲಾಗಿದೆ ಎಂದು ಶಾಸಕರು ಹೇಳಿದರು. ಕಾಲನಿ ರಸ್ತೆಗಳು ಹದೆಗೆಟ್ಟಿವೆ ನೀವು ಒಮ್ಮೆ ನೋಡಿ ಅಲ್ಲಿ ನಿಮಗೆ ಬೇಕಾದ ಮುಖಂಡನ ಮನೆಯ ದಾರಿಗೆ ಅನುಕೂಲವಾಗಲಿ ಎಂದು ಡಾಂಬರು ಹಾಕಿಸಿದ್ದಿರಿ ಎಂದು ಗ್ರಾ.ಪಂ. ಸದಸ್ಯ ಕೆ.ವಿ. ಸ್ವಾಮಿ ಎಂಬುವರು ಆಕ್ಷೇಪ ವ್ಯಕ್ತಪಡಿಸಿದರು. ದಲಿತ ಮಹಿಳೆಯರು ಚನ್ನರಾಯಪಟ್ಟಣ ಠಾಣೆಗೆ ದೂರು ನೀಡಲು ಹೋದರೆ ಪೋಲಿಸರು ಅವಾಚ್ಯ ಮಾತುಗಳಿಂದ ನಿಂದಿಸುತ್ತಾರೆ ಎಂದು ಶಶಿಕಲಾ ಎಂಬುವರು ಅಳಲು ತೋಡಿಕೊಂಡರು.

    ಸಭೆ ಕಡ್ಡಾಯ ಭರವಸೆ: ಇನ್ನು ಮುಂದೆ ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ಎಸ್ಸಿ, ಎಸ್ಟಿ ಸಭೆ ನಡೆಸಿ ಸಭೆಯೊಳಗೆ ಚರ್ಚೆಯಾದ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವತ್ತ ಗಮನ ನೀಡಲಾಗುವುದು ಎಂದು ಶಾಸಕ ನಿಗರ್ಸ ನಾರಾಯಣಸ್ವಾಮಿ ಭರವಸೆ ನೀಡಿದರು.

    ತಹಸೀಲ್ದಾರ್ ಅಜಿತ್ ರೈ, ಕಾರ್ಯನಿರ್ವಹಣಾಧಿಕಾರಿ ಮುರಡಯ್ಯ, ಪುರಸಭಾ ಮುಖ್ಯಾಧಿಕಾರಿ ಎಚ್,ಸಿ ಹನುಮಂತೇಗೌಡ ಇನ್ಸ್‌ಪೆಕ್ಟರ್ ಸಿದ್ದರಾಜು , ಸಮಾಜ ಕಲ್ಯಾಣಾಧಿಕಾರಿ ಚನ್ನಬಸಪ್ಪ, ತಾ.ಪಂ. ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಟಿಎಪಿಸಿ ಎಂಸಿ ನಿದೇರ್ಶಕ ಕಗ್ಗಲಹಳ್ಳಿ ಗುರಪ್ಪ ಜೆಡಿಎಸ್ ಹಿರಿಯ ಉಪಾಧ್ಯಕ್ಷ ರಡ್ಡಿಹಳ್ಳಿ ಮುನಿರಾಜು, ಪುರಸಭಾ ಮಾಜಿ ಅಧ್ಯಕ್ಷ ಎಂ.ಮೂರ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts