More

    3 ಕೋಟಿ ರೂ. ವಿದ್ಯಾರ್ಥಿ ವೇತನ ಜಮೆ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಅನ್ನದಾತರ ಮಕ್ಕಳ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರಂಭಿಸಿರುವ ಮಹತ್ವಾಕಾಂಕ್ಷಿ `ರೈತ ವಿದ್ಯಾ ನಿಧಿ ಯೋಜನೆ’ ಅಡಿ ಜಿಲ್ಲೆಗೆ ಮೂರು ಕೋಟಿ ರೂಪಾಯಿ ವಿದ್ಯಾರ್ಥಿ ವೇತನ ಆಯಾ ಮಕ್ಕಳ ಖಾತೆಗೆ ಜಮೆ ಆಗಿದೆ.

    ಬೊಮ್ಮಾಯಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ವಿದ್ಯಾರ್ಥಿ ವೇತನ ಯೋಜನೆ ಜಾರಿಗೆ ತಂದಿದ್ದರು. ಈವರೆಗೆ ಜಿಲ್ಲೆಯ 12,207 ಮಕ್ಕಳಿಗೆ 3,00,77,000 ರೂ. ಸ್ಕಾಲರ್ಶಿಪ್ ಜಮೆಯಾಗಿದೆ. ರೈತ ಕುಟುಂಬದ ಪ್ರೌಢಶಾಲೆಯ ಹೆಣ್ಣು ಮಕ್ಕಳು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ನಂತರದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಿದೆ.

    ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಗುರುತಿನ ಚೀಟಿ (ಎಫ್​ಐಡಿ- ಫಾರ್ಮರ್ ಐಡೆಂಟಿಫಿಕೇಷನ್ ನಂಬರ್) ಮಾಡಿಸಿಕೊಂಡಿರಬೇಕು. ಹೀಗೆ ಎಫ್​ಐಡಿ ಇದ್ದ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯಲಿದೆ. ಆಯಾ ಶಿಕ್ಷಣ ಸಂಸ್ಥೆಗಳಿಂದ ನೇರವಾಗಿ ಮಾಹಿತಿ ಪಡೆಯುವ ಸರ್ಕಾರ, ರಾಜ್ಯ ಮಟ್ಟದಿಂದಲೇ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತದೆ.

    ಯಾರಿಗೆಷ್ಟು?: 8ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿನಿಯರಿಗೆ ತಲಾ 2000 ರೂ., ಪಿಯುಸಿ, ಐಟಿಐ, ಡಿಪ್ಲೊಮಾ ಇತರ ಕೋಸರ್್ನ ವಿದ್ಯಾರ್ಥಿಗಳಿಗೆ ತಲಾ 2500 ರೂ., ವಿದ್ಯಾರ್ಥಿನಿಯರಿಗೆ ತಲಾ 3000 ರೂ. ವಿದ್ಯಾರ್ಥಿ ವೇತನ ಸಿಗಲಿದೆ. ಬಿಎ, ಬಿಎಸ್ಸಿ, ಬಿಕಾಂ ಇತರ ಪದವಿ ವಿದ್ಯಾರ್ಥಿಗಳಿಗೆ ತಲಾ 5000 ರೂ., ವಿದ್ಯಾರ್ಥಿನಿಯರಿಗೆ 5500 ರೂ. ಹಾಗೂ ಎಲ್ಎಲ್ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮಾ ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್​ಗಳ ವಿದ್ಯಾರ್ಥಿಗಳಿಗೆ 7500 ರೂ., ವಿದ್ಯಾರ್ಥಿನಿಯರಿಗೆ 8 ಸಾವಿರ ರೂ. ಹಾಗೂ ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ಎಲ್ಲ ಸಾತ್ನಕೋತ್ತರ ಕೋರ್ಸ್​ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ಹಾಗೂ ವಿದ್ಯಾರ್ಥಿನಿಯರಿಗೆ ತಲಾ 11 ಸಾವಿರ ರೂ. ವಿದ್ಯಾರ್ಥಿ ವೇತನ ಸಿಗಲಿದೆ.

    ಬೀದರ್ ತಾಲೂಕಿನಲ್ಲೇ ಅಧಿಕ
    ಜಿಲ್ಲಾದ್ಯಂತ ಎಂಟು ತಿಂಗಳಲ್ಲಿ 12,207 ಮಕ್ಕಳಿಗೆ 3.77 ಕೋಟಿ ರೂ. ವಿದ್ಯಾರ್ಥಿ ವೇತನ ಜಮೆ ಆಗಿದೆ. ಬೀದರ್ ತಾಲೂಕಿಗೆ ಅತ್ಯಧಿಕ ವಿದ್ಯಾರ್ಥಿ ವೇತನ ಬಂದರೆ, ಚಿಟಗುಪ್ಪ ತಾಲೂಕಿನ ಕೇವಲ ಒಬ್ಬ ವಿದ್ಯಾರ್ಥಿಗೆ ಜಮೆ ಆಗಿದೆ. ಬೀದರ್ ತಾಲೂಕಿನ 3494 ಮಕ್ಕಳಿಗೆ 89,22,500 ರೂ., ಹುಮನಾಬಾದ್ನ 2257 ಮಕ್ಕಳಿಗೆ 55,09,500, ಭಾಲ್ಕಿಯ 2623 ಮಕ್ಕಳಿಗೆ 65,09,500, ಔರಾದ್ನ 1387 ಮಕ್ಕಳಿಗೆ 32,25,500, ಕಮಲನಗರದ 92 ಮಕ್ಕಳಿಗೆ 2,53,000 ರೂ. ಹಾಗೂ ಚಿಟಗುಪ್ಪ ತಾಲೂಕಿನ ಒಬ್ಬ ವಿದ್ಯಾಥರ್ಿ ಖಾತೆಗೆ 3000 ರೂ. ವಿದ್ಯಾರ್ಥಿ ವೇತನ ಜಮೆ ಆಗಿದೆ.

    ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 12,207 ಮಕ್ಕಳಿಗೆ ಈವರೆಗೆ 3.77 ಕೋಟಿ ರೂ. ವಿದ್ಯಾಥರ್ಿ ವೇತನ ಬಂದಿದೆ. ಇದರಿಂದ ರೈತರ ಮಕ್ಕಳ ವ್ಯಾಸಂಗಕ್ಕೆ ಬಹಳಷ್ಟು ಅನುಕೂಲವಾಗಿದೆ.
    | ತಾರಾಮಣಿ ಜಿ.ಎಚ್., ಜಂಟಿ ಕೃಷಿ ನಿರ್ದೇಶಕಿ

    ಓದಲು ನೆರವಾಗುವ ನಿಟ್ಟಿನಲ್ಲಿ ಸಕರ್ಾರ ರೈತರ ಮಕ್ಕಳಿಗೆ ವಿದ್ಯಾಥರ್ಿ ವೇತನ ನೀಡುತ್ತಿರುವುದು ಸತಂತದ ವಿಷಯ. ನನ್ನ ಬ್ಯಾಂಕ್ ಖಾತೆಗೆ ಸ್ಕಾಲರ್ಶಿಪ್ ಹಣ ಜಮೆಯಾಗಿದ್ದರಿಂದ ಶಿಕ್ಷಣಕ್ಕೆ ಸಹಕಾರಿಯಾಗಿದೆ. ಈ ವಿದ್ಯಾಥರ್ಿ ವೇತನದ ಮೊತ್ತ ಹೆಚ್ಚಳ ಮಾಡಿದರೆ ಬಡ ಮಕ್ಕಳಿಗೆ ಇನ್ನಷ್ಟು ಅನುಕೂಲವಾಗಲಿದೆ.
    | ಸ್ವಾತಿ ಗೌಡ, ಔರಾದ್ ಸಕರ್ಾರಿ ಪಿಯು ಕಾಲೇಜು ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts