More

    ಕಡೂರು ಪುರಸಭೆಯಲ್ಲಿ 28.59 ಲಕ್ಷ ರೂ.ಉಳಿತಾಯ ಬಜೆಟ್

    ಕಡೂರು: ಪಟ್ಟಣದ ರಸ್ತೆ, ಚರಂಡಿ, ಮೂಲ ಸವಲತ್ತುಗಳು ಹಾಗೂ ಘನ ತಾಜ್ಯ ನಿರ್ವಹಣೆ ವಿಭಾಗಗಳು, ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಮುಂತಾದ ಪ್ರಮುಖ ಅಂಶಗಳ ಒಳಗೊಂಡ 28.59 ಲಕ್ಷ ರೂ.ಗಳ ಉಳಿತಾಯದ ಬಜೆಟ್‌ನ್ನು ಪುರಸಭೆ ಆಡಳಿತಾಧಿಕಾರಿ ತರೀಕೆರೆ ಎಸಿ ಕಾಂತರಾಜ್ ಮಂಡಿಸಿದ್ದಾರೆ.
    ಪುರಸಭೆ ಕಚೇರಿಯಲ್ಲಿ ಶುಕ್ರವಾರ 2024-25ನೇ ಸಾಲಿನ ಅಯವ್ಯಯದ ಬಜೆಟ್ ಮಂಡಿಸಿದ ಅವರು, ಪ್ರಸಕ್ತ ಸಾಲಿನ ಪುರಸಭೆ ಆಯ-ವ್ಯಯದಲ್ಲಿ 38.53 ಕೋಟಿ ರೂ. ಆದಾಯ ಮತ್ತು 38.25 ಕೋಟಿ ರೂ. ವೆಚ್ಚದ ನಿರೀಕ್ಷೆ ಹೊಂದಲಾಗಿದೆ. ಪುರಸಭೆ ಸ್ವಂತ ಮೂಲಗಳಿಂದ 4.76 ಕೋಟಿ ರೂ. ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ 8.64 ಕೋಟಿ ರೂ. ಅಡಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
    ಸರ್ಕಾರದ ಎಸ್‌ಎ್ಸಿ ವೇತನ ಅನುದಾನ 2.75 ಕೋಟಿ ರೂ. ಮತ್ತು 10.65 ಕೋಟಿ ರೂ. ಎಸ್‌ಎ್ಸಿ ವಿದ್ಯುತ್ ಅನುದಾನ ನಿರೀಕ್ಷಿಸಲಾಗಿದೆ. ಕುಡಿಯುವ ನೀರು ಮತ್ತು ಘನತಾಜ್ಯ ವಸ್ತು ನಿರ್ವಹಣೆಗೆ ಅಗತ್ಯ ಕ್ರಮಕೈಗೊಳ್ಳಲು 3.55 ಕೋಟಿ ರೂ. ಹಾಗೂ ರಸ್ತೆ-ಚರಂಡಿ ನಿರ್ವಹಣೆಗಾಗಿ 4 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts