More

    ಗುಂಡಿನ ದಾಳಿ ನಡೆಸಿ 26 ಜನರ ಸಾವಿಗೆ ಕಾರಣನಾದ ಸೇನಾ ಅಧಿಕಾರಿ; ಕಮಾಂಡೋ ದಾಳಿಯಿಂದ ಕೊನೆಯುಸಿರು

    ಥೈಲ್ಯಾಂಡ್: 26 ಜನರನ್ನು ಗುಂಡಿಕ್ಕಿ ಕೊಂದ ಸೈನಿಕನಿಗೆ ವೈಯಕ್ತಿಕ ಸಮಸ್ಯೆ ಇತ್ತು. ಹಾಗಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಥಾಯ್ ಪ್ರಧಾನ ಮಂತ್ರಿ ಪ್ರಯುತ್ ಚಾನ್ ಒ ಚಾ ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಶಾಪಿಂಗ್ ಮಾಲ್​ನಲ್ಲಿ ಗುಂಡಿಕ್ಕಿ 26 ಮಂದಿ ಸಾವಿಗೆ ಕಾರಣವಾದ ಆತನನ್ನು ಕಮಾಂಡೋಗಳು ಗುಂಡಿಕ್ಕಿದ್ದರು. ಇಂತಹ ಘಟನೆ ಥೈಲ್ಯಾಂಡ್​ನಲ್ಲಿ ಹಿಂದೆಂದೂ ನಡೆದಿರಲಿಲ್ಲ. ಇದೇ ಕೊನೆಯಾಗಲಿ ಎಂದು ನಾನು ಬಯಸುತ್ತೇನೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

    ಗುಂಡಿನ ದಾಳಿ ನಡೆದ ಮಾಲ್​ನ ಟರ್ಮಿನಲ್​ 21ರಲ್ಲಿ ಅಷ್ಟು ಜನ ಇದ್ದರು ಎಂದು ತಿಳಿದಿರಲಿಲ್ಲ. ಬ್ಯಾರಕ್‌ಗಳಿಂದ ಕದ್ದ ಶಸ್ತ್ರಾಸ್ತ್ರಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಅವನು ರಾತ್ರಿಯಿಡೀ ಹೊರಗೆ ಕಾಯುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

    ಗುಂಡಿನ ದಾಳಿ ನಡೆಸಿ 26 ಜನರ ಸಾವಿಗೆ ಕಾರಣನಾದ ಸೇನಾ ಅಧಿಕಾರಿ; ಕಮಾಂಡೋ ದಾಳಿಯಿಂದ ಕೊನೆಯುಸಿರುಗುಂಡಿನ ದಾಳಿ ನಡೆಸಿದವನು ಕಿರಿಯ ಸೇನಾಧಿಕಾರಿ ಸಾರ್ಜೆಂಟ್-ಮೇಜರ್ ಜಕ್ರಪಾಂತ್ ಥೋಮ್ಮ ಎಂದು ಗುರುತಿಸಲಾಗಿದೆ. ಮುಂಜಾನೆಯ ಹೊತ್ತಿಗೆ ಶಾಪಿಂಗ್​ ಮಾಲ್​ನ ನೆಲಮಹಡಿಯಲ್ಲಿ ಗುಂಡಿನ ಚಕಮಕಿ ನಡೆದಿದೆ. ತಕ್ಷಣ ಭದ್ರತಾ ಸೇವೆಗಳು ನೆಲ ಮಹಡಿಗೆ ನುಗ್ಗಿ, ಭಯಭೀತರಾದ ಸಾರ್ವಜನಿಕರನ್ನು ರಕ್ಷಿಸಿದ್ದಾರೆ.

    ಥಾಯ್​ ಪೊಲೀಸ್​ನ ಕಮಾಂಡೋಗಳು ಗುಂಡಿನ ದಾಳಿ ನಡೆಸಿದ ಸೇನಾ ಅಧಿಕಾರಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಕಾರ್ಯಚರಣೆಯಲ್ಲಿ ಭದ್ರತಾ ಪಡೆಯ ನೂರಾರು ಅಧಿಕಾರಿಗಳು ಭಾಗವಹಿಸಿದ್ದರು.

    ಭದ್ರತಾ ಪಡೆಗಳು ದಾಳಿ ನಡೆಸಿದ ತಕ್ಷಣ ಅವನು ಗಾಯಗೊಂಡನು. ಆದ್ದರಿಂದ ಮತ್ತೆ ಗುಂಡಿನ ದಾಳಿ ನಡೆಸಲಾಗಲಿಲ್ಲ. ವಾರದ ಕೊನೆ ದಿನವಾದ್ದರಿಂದ ಶಾಪಿಂಗ್​ ಮಾಲ್​ ತುಂಬಿತ್ತು. ಆದರೆ ಇಂತಹ ಭಯಾನಕ ಘಟನೆ ನಡೆದೇ ಹೋಯಿತು ಉಪ ಪ್ರಧಾನಿ ಅನುತಿನ್ ಚಾರ್ನ್ವಿರಾಕುಲ್ ವಿವರಿಸಿದರು.

    “ಇದು ಒಂದು ಕನಸಿನಂತಾಗಿತ್ತು. ನನ್ನ ಅದೃಷ್ಟ ಬದುಕಿಬಂದೆ” ಎನ್ನುತ್ತಾರೆ 48 ವರ್ಷದ ಸೊತ್ತಿಯಾನೀ ಉಂಚಾಲಿ. ಗುಂಡಿನ ಸದ್ದು ಕೇಳಿದ ತಕ್ಷಣ ನಾನು ಟಾಯ್ಲೆಟ್​ ಒಳಗೆ ಓಡಿದೆ. ಆದರೆ ಮೃತಪಟ್ಟವರ ಬಗ್ಗೆ ವಿಷಾದವಿದೆ ಎಂದಿದ್ದಾರೆ.

    ಥಾಯ್ಲೆಂಡ್​ ರಾಷ್ಟ್ರವು ವಿಶ್ವದಲ್ಲೇ ಅತಿ ಹೆಚ್ಚು ಬಂದೂಕು ಮಾಲೀಕತ್ವವನ್ನು ಹೊಂದಿರುವ ದೇಶ. ಕಳೆದ ವರ್ಷ ನಡೆದ ಹಲವು ಗುಂಡಿನ ದಾಳಿಗಳ ಪ್ರಕರಣಗಳ ಬಗ್ಗೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts