More

    27ಕ್ಕೆ ನೆಲಮಂಗಲದಲ್ಲಿ ಕನ್ನಡ ಹಬ್ಬ, ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಸ್ಮರಣಾರ್ಥ ಕಾರ್ಯಕ್ರಮ

    ನೆಲಮಂಗಲ: ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಸ್ಮರಣಾರ್ಥವಾಗಿ ನಗರದಲ್ಲಿ ಅ.27ರಂದು ಕನ್ನಡ ಹಬ್ಬ ಆಯೋಜಿಸಲಾಗಿದೆ ಎಂದು ಜಯಕರ್ನಾಟಕ ಸಂಘಟನೆ ಗ್ರಾಮಾಂತರ ಜಿಲ್ಲಾಧ್ಯಕ್ಷ ಟಿ.ರವಿಗೌಡ್ರು ತಿಳಿಸಿದರು.

    ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ಜಯಕರ್ನಾಟಕ ತಾಲೂಕು ಸಮಿತಿ ಆಯೋಜಿಸಿದ್ದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

    ಅ.27ರಂದು ಅದ್ದೂರಿ ಕನ್ನಡ ಹಬ್ಬ ಹಾಗೂ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪರೈ ಸ್ಮರಣಾರ್ಥ ಪಟ್ಟಣದಲ್ಲಿ ಎಂ.ಆರ್.ನೇತ್ರದಾನ ಕೇಂದ್ರ ಉದ್ಘಾಟಿಸಲಾಗುವುದು. ಕನ್ನಡ ಹಬ್ಬ ಕಾರ್ಯಕ್ರಮದ ನಿಮಿತ್ತ ನಗರದ ಮುಖ್ಯ ರಸ್ತೆಯಲ್ಲಿ ನಾಡಿನ ವಿವಿಧ ಜಾನಪದ ಕಲಾತಂಡಗಳಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

    ತಾಲೂಕು ಅಧ್ಯಕ್ಷ ಎ.ಎಸ್.ರಾಮಮೂರ್ತಿ ಮಾತನಾಡಿ, ನೇತ್ರದಾನ ಮಹಾ ದಾನವಾಗಿದ್ದು, ಸಂಘಟನೆಯಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತರು, ಮೃತ ನಂತರ ಕಣ್ಣುಗಳು ದಾನ ಮಾಡುವ ಉದ್ದೇಶದಿಂದ ಎಂ.ಆರ್.ನೇತ್ರದಾನ ಕೇಂದ್ರ ಆರಂಭಿಸಲಾಗಿದೆ ಎಂದರು.

    ಕಾರ್ಯಕ್ರಮಕ್ಕೆ ಮುತ್ತಪ್ಪರೈ ಅಣ್ಣನವರ ಪುತ್ರ ರಿಕ್ಕಿರೈ, ನಟ ಪುನೀತ್‌ರಾಜ್‌ಕುಮಾರ್ ಹಾಗೂ ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಆಗಮಿಸಲಿದ್ದಾರೆ. ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಎಸ್.ಜಗದೀಶ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಟಿ.ರವಿಗೌಡ್ರು, ರಾಜ್ಯ ಮುಖ್ಯ ಸಲಹೆಗಾರ ಪ್ರಕಾಶ್‌ರೈ, ಕಾರ್ಯಾಧ್ಯಕ್ಷ ಎಚ್.ರಾಮಚಂದ್ರಯ್ಯ ಭಾಗವಹಿಸಲಿದ್ದಾರೆ ಎಂದರು.

    ಬೈಕ್ ಮತ್ತು ಕಾರು ರ‌್ಯಾಲಿ: 1 ಸಾವಿರ ಬೈಕ್ ಹಾಗೂ 200 ಕಾರುಗಳಿಂದ ನಗರದ ಅರಿಶಿಣಕುಂಟೆಯಿಂದ ರ‌್ಯಾಲಿ ಹಮ್ಮಿಕೊಂಡು ನಂತರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪುಷ್ಪನಮನ ಮಾಡಲಾಗುವುದು. ತಾಲೂಕಿನಾದ್ಯಂತ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಾಲೂಕು ಅಧ್ಯಕ್ಷ ರಾಮಮೂರ್ತಿ ಮಾಹಿತಿ ನೀಡಿದರು.

    ಜಯಕರ್ನಾಟಕ ಸಂಘಟನೆ ಬೆಂಗಳೂರು ನಗರ ಜಿಲ್ಲಾ ನಿಕಪೂರ್ವ ಅಧ್ಯಕ್ಷ ಜಗದೀಶ್‌ಗೌಡ್ರು, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ರವಿಚಂದ್ರ, ಜಿಲ್ಲಾಕಾರ್ಯದರ್ಶಿ ನಾರಾಯಣ್‌ಸ್ವಾಮಿ, ಜಿಲ್ಲಾ ಸದಸ್ಯ ವಿ.ಗೋವರ್ಧನ್, ಜಂಟಿಕಾರ್ಯದರ್ಶಿ ಹನುಮಂತಕುಮಾರ್, ಎ.ಟಿ.ವೀರಪ್ಪ, ಬಿ.ಎ.ವಿನಯ್‌ಕುಮಾರ್, ಖಚಾಂಚಿ ಕೆ.ಮಂಜುನಾಥ, ನಗರ ಯುವಘಟಕ ಅಧ್ಯಕ್ಷ ರವಿಕಿರಣ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts