More

    26ರಿಂದ ಬಂಜಾರ ಬುಡಕಟ್ಟು ಸಂಸ್ಕೃತಿ ಉತ್ಸವ

    ಹರಪನಹಳ್ಳಿ: ಚಿತ್ರದುರ್ಗದಲ್ಲಿ ಅ.26 ಮತ್ತು 27ರಂದು ನಡೆಯಲಿರುವ ಬಂಜಾರ ಬುಡಕಟ್ಟು (ಲಂಬಾಣಿ) ಸಂಸ್ಕೃತಿ ಉತ್ಸವದಲ್ಲಿ ಅತಿ ಹಿಂದುಳಿದ ಸಮುದಾಯಗಳ ಸಮಾಲೋಚನಾ ಸಭೆ ಹಾಗೂ ಲೋಕಕಲ್ಯಾಣ್ಯಾರ್ಥ ಸಾಮೂಹಿಕ ಸಂಕಲ್ಪ ಪೂಜೆ ಆಯೋಜಿಸಲಾಗಿದೆ ಎಂದು ಚಿತ್ರದುರ್ಗದ ಬಂಜಾರ ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದರು.

    ಇದನ್ನೂ ಓದಿ: ಬಂಜಾರರಿಂದ ಕಾಯಕ ತತ್ವ ಪಾಲನೆ

    ಉತ್ಸವದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಶಿವರಾಜ ತಂಗಡಗಿ, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಸೇರಿ ಬಂಜಾರ ಸಮುದಾಯದ ಮಾಜಿ, ಹಾಲಿ ಶಾಸಕರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ರಾಜ್ಯ ಸರ್ಕಾರದ ಸಂಪುಟದಲ್ಲಿ ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ಸಿಗದೆ ಅನ್ಯಾಯವಾಗಿದೆ. ಮಂತ್ರಿ ಸ್ಥಾನ ನೀಡಬೇಕು.
    ಲೋಕಸೇವಾ ಆಯೋಗದಲ್ಲಿ ಸದಸ್ಯ ಸ್ಥಾನ, ವಿಶ್ವವಿದ್ಯಾಲಯದಲ್ಲಿ ಕುಲಪತಿಗಳ ನೇಮಕದಲ್ಲಿ ಅವಕಾಶ ನೀಡಬೇಕು.

    ತಾಂಡ ಅಭಿವೃದ್ಧಿ ನಿಗಮಕ್ಕೆ ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಜನಸಂಖ್ಯೆ ಅನುಗುಣವಾಗಿ ಸಮುದಾಯಕ್ಕೆ ಸ್ಥಾನಗಳನ್ನು ಹಂಚಿಕೆ ಮಾಡಬೇಕೆಂದು ಮನವಿ ಮಾಡಿದರು.

    ಪ್ರಮುಖರಾದ ಪಿ.ಶಿವಕುಮಾರ್ ನಾಯ್ಕ, ಚಂದ್ರಶೇಖರ ನಾಯ್ಕ, ಕೆ.ಡಿ.ನಾಯ್ಕ, ಹರೀಶ್ ನಾಯ್ಕ, ವೀರೇಶ ನಾಯ್ಕ, ಶಶಿಕುಮಾರ್ ನಾಯ್ಕ, ಮಲ್ಲೇಶ ನಾಯ್ಕ, ಶಾಂತ ನಾಯ್ಕ, ಹರಿಶ್ಚಂದ್ರ ನಾಯ್ಕ, ನೀಲಾ ನಾಯ್ಕ, ಚಂದ್ರ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts