More

    ಗ್ರಾಹಕರ 26.15 ಲಕ್ಷ ರೂ. ಗುಳುಂ ಮಾಡಿದ ಕ್ಯಾಷಿಯರ್

    ಯಳಂದೂರು: ಸಮೀಪದ ಸಂತೇಮರಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರಾಹಕರು ಜಮಾ ಮಾಡಿದ್ದ 26.15 ಲಕ್ಷ ರೂ.ಗಳನ್ನು ಕ್ಯಾಷಿಯರ್ ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.


    ಎಸ್‌ಬಿಐ ಬ್ಯಾಂಕಿನ ಕ್ಯಾಷಿಯರ್ ಮನೋರಂಜನ್ ಮುರ್ಮ ಕಳೆದ ಹಲವು ತಿಂಗಳಿಂದ ಕ್ಯಾಷಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವಿಕಾಸ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಡಿಯಲ್ಲಿ ಕೆಲವು ಸ್ವಸಹಾಯ ಸಂಘಗಳ ಸದಸ್ಯರಿಗೆ ಬ್ಯಾಂಕ್ ವತಿಯಿಂದ ಸಾಲ ನೀಡಲಾಗಿತ್ತು. ಅದರಂತೆ ಸದಸ್ಯರು ಹಣ ಕಟ್ಟುತ್ತಿದ್ದರು. ಆದರೆ ಈ ಬಗ್ಗೆ ವಿಕಾಸ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಮುದಾಯ ಅಭಿವೃದ್ಧಿ ಸಮಾಲೋಚಕಿ ಎಸ್.ಎಂ.ಲಕ್ಷ್ಮೀ ಅನುಮಾನಗೊಂಡು 2023ರ ಡಿ.2ರಂದು ಸಂಘದ ಸದಸ್ಯರ ಖಾತೆಗಳಿಗೆ ಹಣ ಹಣ ಜಮೆಯಾಗುತ್ತಿಲ್ಲ ಎಂದು ಬ್ಯಾಂಕಿನ ವ್ಯವಸ್ಥಾಪಕರಿಗೆ ದೂರು ಸಲ್ಲಿಸಿದ್ದರು.


    ಈ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕ ಚನ್ನಕೇಶವ, ಗ್ರಾಹಕರ ಖಾತೆಗಳನ್ನು ಪರಿಶೀಲಿಸಿದಾಗ ಕ್ಯಾಷಿಯರ್ ಮನೋರಂಜನ್ ಮುರ್ಮ ಗ್ರಾಹಕರ ಖಾತೆಗೆ ಹಣ ಹಾಕದೆ ಕೌಂಟರ್ ಚಲನ್ ನೀಡಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.


    ಒಟ್ಟು 26,15,920 ರೂ.ಗಳನ್ನು ಗ್ರಾಹಕರ ಖಾತೆಗಳಿಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡು ಕರ್ತವ್ಯಲೋಪ ಎಸಗಿರುವುದು ಬೆಳಕಿಗೆ ಬಂದಿದೆ. ಶುಕ್ರವಾರ ಬ್ಯಾಂಕಿನ ವ್ಯವಸ್ಥಾಪಕ ಚನ್ನಕೇಶವ ಅವರು ಸಂತೇಮರಳ್ಳಿ ಠಾಣೆಯಲ್ಲಿ ಕ್ಯಾಷಿಯರ್ ವಿರುದ್ಧ ದೂರು ನೀಡಿದ್ದಾರೆ.
    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts