More

    25 ರಂದು ಅಬ್ಬೆತುಮಕೂರಿನಲ್ಲಿ ವಿಶ್ವಾರಾಧ್ಯರ ಜಾತ್ರೆ

    ಯಾದಗಿರಿ: ತಾಲೂಕಿನ ಅಬ್ಬೆತುಮಕೂರಿನ ಅಣಿಮಾದಿ ಅಷ್ಟಸಿದ್ಧಿಗಳನ್ನು ಕಟ್ಟಿ ಮೆರೆದ ಜಗಜಟ್ಟಿ ಶ್ರೀ ವಿಶ್ವಾರಾಧ್ಯರ ಜಾತ್ರೆಗೆ ಶ್ರೀಮಠದಲ್ಲಿ ಸಿದ್ಧತೆ ಆರಂಭಗೊಂಡಿದೆ.

    ಉತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ಸಕಲ ವ್ಯವಸ್ಥೆಯೊಂದಿಗೆ ಸಜ್ಜುಗೊಳ್ಳುತ್ತಿದೆ. 25 ರಂದು ಸಂಜೆ 6.30 ಗಂಟೆಗೆ ವಿಶ್ವಾರಾಧ್ಯರ ಭವ್ಯ ರಥೋತ್ಸವ ಜರುಗಲಿದ್ದು, ಈ ಹಿನ್ನಲೆಯಲ್ಲಿ ಶ್ರೀಮಠದ ಆವರಣದ ತುಂಬ ಬೃಹತ್ತಾದ ಪೆಂಡಾಲ್ ಹಾಕುವ ಕಾರ್ಯ ನಡೆಯುತ್ತಿದೆ. ಶರಣ ಸಕ್ರೆಪ್ಪಗೌಡ ವೇದಿಕೆಯನ್ನು ಬಣ್ಣ-ಬಣ್ಣದ ಪರದೆಗಳಿಂದ ಅಲಂಕೃತಗೊಳಿಸಲಾಗಿದ್ದು, ಮಾನವ ಧರ್ಮ ಸಮಾವೇಶಕ್ಕೆ ವೇದಿಕೆ ನಿಮರ್ಾಣಗೊಳ್ಳುತ್ತಿದೆ. ಮಠದಿಂದ ಪಾದಗಟ್ಟೆಯವರೆಗೂ ಮತ್ತು ಮುದ್ನಾಳ್ ಹಾಗೂ ಯಾದಗಿರಿಯ ಮುಖ್ಯ ರಸ್ತೆಯಲ್ಲಿ ಬೃಹತ್ ಕಮಾನುಗಳನ್ನು ನಿಮರ್ಿಸಲಾಗಿದೆ.

    ಮಠದ ಮುಂಭಾಗ ಮತ್ತು ಅಕ್ಕ ಪಕ್ಕದ ಹೊಲಗಳನ್ನು ಶುಚಿಗೊಳಿಸಲಾಗಿದ್ದು, ದ್ವಿಚಕ್ರ, ತ್ರೀಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ನಿಲುಗಡೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಯಾದಗಿರಿ ಬಳಿಯ ವಿಶ್ವಾರಾಧ್ಯರ ವೃತ್ತ, ಮುದ್ನಾಳ ಗ್ರಾಮ, ಪಾದಗಟ್ಟೆ ಬಳಿ ಹೀಗೆ ಹಲವು ಕಡೆಗಳಲ್ಲಿ ಭಕ್ತರನ್ನು ಸ್ವಾಗತಿಸುವ ಬೃಹತ್ ದ್ವಾರ ಬಾಗಿಲುಗಳು ನಿಮರ್ಿಸಲಾಗಿದೆ. ಜಾತ್ರೆಯ ದಾಸೋಹಕ್ಕಾಗಿ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ದವಸ, ಧಾನ್ಯಗಳನ್ನು, ಕಾಯಿಪಲ್ಯೆಗಳನ್ನು, ರೊಟ್ಟಿ, ಸಿಹಿತಿನಿಸುಗಳು ಸೇರಿದಂತೆ ಬಗೆಬಗೆಯ ಭಕ್ಷ ಖಾಧ್ಯಗಳನ್ನು ಶ್ರೀಮಠಕ್ಕೆ ಸಲ್ಲಿಸುತ್ತಿದ್ದಾರೆ.

    ಮಠದಲ್ಲಿ ಧವಸ ಧಾನ್ಯಗಳನ್ನು ಸ್ವಚ್ಛಗೊಳಿಸುವ ಕಾರ್ಯ ನೂರಾರು ಮಹಿಳೆಯರಿಂದ ಭರದಿಂದ ಸಾಗಿದೆ. ಪೀಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳು ಜಾತ್ರೆಯ ಸಿದ್ದತೆಯ ಕಾರ್ಯಗಳಿಗೆ ಖುದ್ದಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.ಭಕ್ತರಿಗಾಗಿ 70-80 ಕ್ವಿಂಟಾಲ್ ಮಾಲದಿಯನ್ನು ಸಿದ್ದಪಡಿಸುವ ಕಾರ್ಯದಲ್ಲಿ ಗಂವ್ಹಾರದ ಭಕ್ತರು ತೊಡಗಿಸಿಕೊಂಡಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವು ವಿವಿಧ ಗ್ರಾಮಗಳ ವಿಶ್ವಾರಾಧ್ಯ ಸೇವಾ ಸಮಿತಿಯ ಸದಸ್ಯರುಗಳು ಪ್ರತ್ಯೇಕವಾಗಿ ದಾಸೋಹ ಮನೆಗಳನ್ನು ಪ್ರಾರಂಭಿಸುತ್ತಿದ್ದು, ಅವರುಗಳು ಕೂಡ ಸಿದ್ದತೆಯಲ್ಲಿ ತೊಡಗಿದ್ದಾರೆ. ಒಟ್ಟಾರೆ

    ಅಬ್ಬೆತುಮಕೂರಿನ ಶ್ರೀವಿಶ್ವಾರಾಧ್ಯರ ಜಾತ್ರೆ ದಿನ ಗಣನೆಯಲ್ಲಿದ್ದು, ಭಕ್ತರು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಶ್ರೀಗಳ ಮಾರ್ಗದರ್ಶನದಲ್ಲಿ ಮಹೋತ್ಸವದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts