More

    ತುಮಕೂರು ಜಿಲ್ಲೆಯಲ್ಲಿ 240 ಹೊಸ ಪ್ರಕರಣಗಳು ದೃಢ

    ತುಮಕೂರು: ಜಿಲ್ಲೆಯಲ್ಲಿ ಮತ್ತೆ ಕರೊನಾ ದ್ವಿಶತಕ ದಾಟಿದೆ ಮಂಗಳವಾರ 240 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು ನಾಲ್ವರು ಮಹಾಮಾರಿಗೆ ಬಲಿಯಾಗಿದ್ದಾರೆ.

    ಗುಣಮುಖರಾದ 223 ಜನರು ಆಸ್ಪತ್ರೆಯಿಂದ ಮನೆಗೆ ವಾಪಸಾಗಿದ್ದು ಈವರೆಗೆ 16249 ಜನರು ಕರೊನಾದಿಂದ ಗುಣಮುಖರಾದಂತಾಗಿದೆ, ಪ್ರಸ್ತುತ 1930 ಸಕ್ರಿಯ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ 108 ಜನರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಚಿಕ್ಕನಾಯಕನಹಳ್ಳಿ 31, ಗುಬ್ಬಿ 28, ಕೊರಟಗೆರೆ 7, ಕುಣಿಗಲ್ 8, ಮಧುಗಿರಿ 12, ಪಾವಗಡ 12, ಶಿರಾ 11, ತಿಪಟೂರು 53 ಹಾಗೂ ತುರುವೇಕೆರೆ 14 ಜನರಿಗೆ ಸೋಂಕು ತಗುಲಿದೆ. ತಿಪಟೂರು ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದು ಆತಂಕ ಹೆಚ್ಚಿಸಿದೆ. 138 ಪುರುಷರು, 102 ಮಹಿಳೆಯರಿಗೆ ಸೋಂಕು ದೃಢವಾಗಿದ್ದು ಐದು ವರ್ಷದೊಳಗಿನ ಒಂದು ಮಗು, 60 ವರ್ಷ ಮೇಲ್ಪಟ್ಟ 51 ಹಿರಿಯರು ಸೋಂಕು ದೃಢವಾಗಿದೆ.

    ನಾಲ್ವರು ಸಾವು: ಮಂಗಳವಾರ ಶಿರಾ ತಾಲೂಕು ಕಾಡಜ್ಜನಪಾಳ್ಯದ 49 ವರ್ಷದ ಮಹಿಳೆ, ಚಿಕ್ಕನಾಯಕನಹಳ್ಳಿಯ 65 ವರ್ಷದ ಪುರುಷ, ಶಿರಾ ತಾಲೂಕು ದೇವರಹಳ್ಳಿಯ 70 ವರ್ಷದ ವ್ಯಕ್ತಿ, ತುಮಕೂರು ಯಲ್ಲಾಪುರದ 56 ವರ್ಷದ ಮಹಿಳೆ ಮಹಾಮಾರಿಗೆ ಬಲಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts