More

    ಬೆಳೆ ಸಮೀಕ್ಷೆಗೆ 24 ಕೊನೆಯ ದಿನ

    ಹಿರೇಕೆರೂರ: ರೈತರಿಂದ ಬೆಳೆ ಸಮೀಕ್ಷೆಗೆ ಆ. 24 ಕೊನೆಯ ದಿನಾಂಕವಾಗಿದ್ದು, ಮೊಬೈಲ್ ಆಪ್ ಡೌನ್​ಲೋಡ್ ಮಾಡಿಕೊಂಡು ಈ ವಿನೂತನ ಯೊಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಪಟ್ಟಣದ ಸರ್ವಜ್ಞ ಸರ್ಕಲ್ ಬಳಿ ತಾಲೂಕು ಕೃಷಿ ಇಲಾಖೆ ವತಿಯಿಂದ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಪ್ರಚಾರ ವಾಹನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

    ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್​ಲೋಡ್ ಮಾಡುವ ಈ ಯೋಜನೆ ಅತ್ಯಂತ ಸರಳ ಹಾಗೂ ಉಪಯುಕ್ತವಾಗಿದೆ. ಈ ಯೋಜನೆ ದೇಶದಲ್ಲೇ ಮೊಟ್ಟ ಮೊದಲನೆಯದ್ದಾಗಿದೆ. ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕೃಷಿ ಅಧಿಕಾರಿಗಳು ಈ ಪ್ರಚಾರ ವಾಹನ ತಾಲೂಕಿನ ಎಲ್ಲ ಹಳ್ಳಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ, ಕಂದಾಯ, ತೋಟಗಾರಿಕೆ ಅಥವಾ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂರ್ಪಸಬೇಕು ಎಂದು ತಿಳಿಸಿದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಜಿಪಂ ಸದಸ್ಯ ಎನ್.ಎಂ. ಈಟೇರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ರವಿಶಂಕರ ಬಾಳಿಕಾಯಿ, ಈರಣ್ಣ ಚಿಟ್ಟೂರ, ರಾಣೆಬೆನ್ನೂರು ವಲಯದ ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್., ತಾಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಎಂ.ವಿ., ಸಿಪಿಐ ಮಂಜುನಾಥ ಪಂಡಿತ, ಪಿಎಸ್​ಐ ದೀಪು ಎಂ.ಟಿ. ಹಾಗೂ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts