More

    ಭಾರತದಲ್ಲೇ ನಡೆಯುತ್ತಾ 2022ರ ಐಪಿಎಲ್? ಬಿಸಿಸಿಐ ಉತ್ತರವೇನು ಗೊತ್ತೇ?

    ನವದೆಹಲಿ: ಕರೊನಾ ಭೀತಿಯಿಂದಾಗಿ ಕಳೆದ ವರ್ಷ ಸಂಪೂರ್ಣ ಐಪಿಎಲ್ ಯುಎಇಯಲ್ಲಿ ನಡೆದಿದ್ದರೆ, ಈ ವರ್ಷವೂ ಭಾರತದಲ್ಲಿ ಆರಂಭಗೊಂಡ ಟೂರ್ನಿ ಕರೊನಾ ಹಾವಳಿಯಿಂದಾಗಿ ಮೊಟಕುಗೊಂಡಿತ್ತು. ಬಳಿಕ ಟೂರ್ನಿಯನ್ನು ಅರಬ್ ನಾಡಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಮುಂದಿನ ವರ್ಷದ ಐಪಿಎಲ್ ಟೂರ್ನಿ ಸಂಪೂರ್ಣವಾಗಿ ಭಾರತದಲ್ಲೇ ಯಶಸ್ವಿಯಾಗಿ ಆಯೋಜನೆಗೊಳ್ಳುವ ವಿಶ್ವಾಸವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದಾರೆ.

    ‘ಐಪಿಎಲ್ ಭಾರತದ ಟೂರ್ನಿ. ಹೀಗಾಗಿ ಅದು ಭಾರತದಲ್ಲಿ ನಡೆದರೆ ಚೆನ್ನಾಗಿರುತ್ತದೆ. ಭಾರತದಲ್ಲಿ ಕಿಕ್ಕಿರಿದು ತುಂಬಿದ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸುವ ಅನುಭವವೇ ಭಿನ್ನವಾದುದು. ಮುಂದಿನ ಐಪಿಎಲ್‌ಗೆ ಇನ್ನೂ 7-8 ತಿಂಗಳ ಸಮಯವಿದ್ದು, ಭಾರತದಲ್ಲೇ ಶೇ. 100 ಪ್ರೇಕ್ಷಕರ ಹಾಜರಿಯಲ್ಲಿ ಟೂರ್ನಿ ನಡೆಯಬಹುದು’ ಎಂದು ಗಂಗೂಲಿ ಹೇಳಿದ್ದಾರೆ.

    ಮುಂದಿನ ವರ್ಷದ ಟೂರ್ನಿಗೆ ಮತ್ತೆರಡು ತಂಡಗಳು ಸೇರ್ಪಡೆಗೊಳ್ಳಲಿದ್ದು, ಐಪಿಎಲ್ ಟೂರ್ನಿ ಹಿಂದಿನಂತೆ ತವರು ಮತ್ತು ಎದುರಾಳಿ ತವರು ಮಾದರಿಯಲ್ಲಿ ನಡೆಯುವುದಾದರೆ ಭಾರತದಲ್ಲಿ ಕನಿಷ್ಠ 10 ನಗರಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ.

    4ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದರೂ ಸಿಎಸ್‌ಕೆ ಆಟಗಾರನಾಗಿ ಧೋನಿ ಭವಿಷ್ಯ ಅನಿಶ್ಚಿತ!

    PHOTOS: ಐಪಿಎಲ್ ಟ್ರೋಫಿ ಗೆಲುವಿನ ಬಳಿಕ ಕುಟುಂಬದ ಜತೆ ಸಿಎಸ್‌ಕೆ ಆಟಗಾರರ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts