More

    ಸಾವೇಹಕ್ಲಿನಲ್ಲಿ 200 ಮಿಮೀ ಮಳೆ

    ಹೊಸನಗರ: ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಮಾಣಿ ಜಲಾನಯನ ಪ್ರದೇಶದಲ್ಲಿ ಒಂದೇ ದಿನ 218 ಮಿಮೀ ಮಳೆ ಬಿದ್ದಿದೆ. ಸಾವೇಹಕ್ಲು ಜಲಾಶಯ ಪ್ರದೇಶದಲ್ಲಿ 200 ಮಿಮೀ ಮಳೆ ದಾಖಲಾಗಿದೆ. ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 190 ಮಿಮೀ, ಹುಲಿಕಲï ಪ್ರದೇಶದಲ್ಲಿ 180 ಮಿಮೀ, ಮಾಸ್ತಿಕಟ್ಟೆಯಲ್ಲಿ 170 ಮಿಮೀ, ಯಡೂರು ಭಾಗದಲ್ಲಿ 157 ಮಿಮೀ ಮಳೆಯಾಗಿದೆ. ಮಾಣಿ ಜಲಾನಯನ ಪ್ರದೇಶದಲ್ಲಿ ಜುಲೈ 23ರ ವರೆಗೆ 2330 ಮಿಮೀ, ಯಡೂರು ಭಾಗದಲ್ಲಿ 2128 ಮಿಮೀ, ಹುಲಿಕಲï ಪ್ರದೇಶದಲ್ಲಿ 2573 ಮಿಮೀ, ಮಾಸ್ತಿಕಟ್ಟೆ ಭಾಗದಲ್ಲಿ 2374 ಮಿಮೀ, ಚಕ್ರಾ ಜಲಾನಯನ ಪ್ರದೇಶದಲ್ಲಿ 2363 ಮಿಮೀ, ಸಾವೇಹಕ್ಲು ಜಲಾಶಯ ಪ್ರದೇಶದಲ್ಲಿ 2549 ಮಿಮೀ ಮಳೆ ದಾಖಲಾಗಿದೆ. ತಾಲೂಕಿನ ನಿಟ್ಟೂರು, ಸಂಪೇಕಟ್ಟೆ, ಅರಮನೆಕೊಪ್ಪ, ಅರೋಡಿ, ಕಾರಗಡಿ, ಕಾನುಗೋಡು, ಮೂಡುಗೊಪ್ಪ ಸೇರಿದಂತೆ ಶರಾವತಿ ಹಿನ್ನೀರು ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಹೋಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts