

ಮಂಡ್ಯ: 60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿದ ಯುವತಿ ಚೀಟಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಯುವತಿ ಮಂಡ್ಯದ ಪಾಂಡವಪುರ ಮೂಲದ ಅರ್ಚಕನಿಗೆ ಲಕ್ಷ ಲಕ್ಷ ಹಣ ಪಂಗನಾಮ ಹಾಕಿದ್ದಾಳೆ. ಅರ್ಚಕ ಈಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ ವಿಜಯ್ ಕುಮಾರ್ ಹಣ ಕಳೆದುಕೊಂಡಿದ್ದು, ಇದೀಗ ಪೂಜಾರಪ್ಪ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಂಡ್ಯ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ ವಿಜಯ್ ಕುಮಾರ್ ಕುಟುಂಬದಿಂದ ದೂರವಾಗಿ ಒಬ್ಬರೇ ವಾಸಿಸುತ್ತಿದ್ದು, ಇವರಿಗೆ ಕೆಲ ದಿನಗಳ ಹಿಂದೆ ಫೇಸ್ಬುಕ್ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿದ್ದಾಳೆ.
ಹೀಗಾಗಿ ಫೇಸ್ಬುಕ್ ಸುಂದರಿ ಸಿರಿ ಜೊತೆ ಪ್ರತಿ ದಿನ ಚಾಟಿಂಗ್ ಮಾಡುತ್ತಿದ್ದರು. ಅರ್ಚಕ ವಿಜಯ್ ಕುಮಾರ್ ಹಿನ್ನಲೆ ತಿಳಿದುಕೊಂಡ ಯುವತಿ ವಸತಿ, ಆರೋಗ್ಯ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಹೀಗೆ ಬರೋಬ್ಬರಿ 1 ಲಕ್ಷದ 40 ಸಾವಿರದಷ್ಟು ಹಣವನ್ನು ಲಪಟಾಯಿಸಿದ್ದಾಳೆ.
ಬಣ್ಣ ಬಣ್ಣದ ಮಾತುಗಳಿಂದ ಅರ್ಚಕ ವಿಜಯ್ ಕುಮಾರ್ನನ್ನು ಬಲೆ ಹಾಕಿದ ಸುಂದರಿ ಮಾತು ನಂಬಿ ಫೋನ್ ಪೇ ಮೂಲಕ. ಹಣ ಕೊಟ್ಟ ಬಳಿಕ ಭೇಟಿ ಆಗುವಂತೆ ಸುಂದರಿಗೆ ವಿಜಯ್ ಒತ್ತಾಯ ಹೇರಲಾರಂಭಿಸಿದ್ದಾಳೆ. ಆದರ ಇಂದು, ನಾಳೆ ಎಂದು ಫೇಸ್ಬುಕ್ ಬ್ಲಾಕ್ ಮಾಡಿ ಎಸ್ಕೆಪ್ ಆಗಿದ್ದಾಳೆ.
ಸುಂದರಿ ಮಾಯವಾದ ಬಳಿಕ ಮೋಸ ಹೋಗಿರುವ ಬಗ್ಗೆ ವಿಜಯ್ ಕುಮಾರ್ಗೆ ಮನವರಿಕೆಯಾಗಿದೆ. ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಮಂಡ್ಯದ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾಳೆ.