More

    20 ಕೆರೆ ಭರ್ತಿಗೆ ಸರ್ಕಾರ ಸಮ್ಮತಿ

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ

    ಗುರುಮಠಕಲ್ ಕ್ಷೇತ್ರದಲ್ಲಿನ 20 ಕೆರೆಗಳು ತುಂಬಿಸುವ 165 ಕೋಟಿ ರೂ. ಯೋಜನೆಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ದೊರೆತಿದೆ. ಮಹತ್ವಾಕಾಂಕ್ಷಿ ಈ ಯೋಜನೆ ಜಾರಿಗೆ ಎರಡೂವರೆ ವರ್ಷಗಳಿಂದ ಸರ್ಕಾರದೊಂದಿಗೆ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಮತ್ತವರ ಪುತ್ರ, ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ನಡೆಸುತ್ತಿದ್ದ ಹೋರಾಟಕ್ಕೆ ಫಲ ಸಿಕ್ಕಿದೆ.

    ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಯೋಜನೆಗೆ ಸಮ್ಮತಿ ನೀಡಿದ್ದರು. ಪಕ್ಕದ ಭೀಮಾ ನದಿಯಿಂದ ಕ್ಷೇತ್ರ ವ್ಯಾಪ್ತಿಯ 20 ಕೆರೆಗೆ ನೀರು ತುಂಬಿಸಲು ಬಜೆಟ್ನಲ್ಲಿ 165 ಕೋಟಿ ರೂ. ಅನುದಾನ ಘೋಷಿಸಿದ್ದರು. ಆದರೆ ಬದಲಾದ ವಿದ್ಯಮಾನಗಳಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಅನುದಾನಕ್ಕೆ ಬ್ರೇಕ್ ಬಿದ್ದಿತ್ತು. ಸತತ ಪ್ರಯತ್ನದ ಬಳಿಕ ಇದೀಗ ಸಂಪುಟ ಒಪ್ಪಿಗೆ ನೀಡಿದ್ದು, ನೀರಾವರಿ ಜತೆಗೆ ನೀರಿನ ಸಮಸ್ಯೆಗೆ ಮುಕ್ತಿ ನೀಡುವಲ್ಲಿ ಈ ಯೋಜನೆ ಪರಿಣಾಮಕಾರಿ ಎನಿಸಲಿದೆ.

    ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕರೊನಾ ನಿರ್ವಹಣೆಗೆ ಆಥರ್ಿಕ ಸಂಕಷ್ಟ ಎದುರಾದ ಕಾರಣ ಕೆರೆಗಳ ಭರ್ತಿಗೆ ಮೀಸಲಿಟ್ಟಿದಂಥ 165 ಕೋಟಿ ರೂ. ಅನುದಾನ ತಡೆ ಹಿಡಿದಿರುವುದಾಗಿ ಹೇಳಿದ್ದರು. ಇದು ಶಾಸಕ ನಾಗನಗೌಡ ಕಂದಕೂರ ಹಾಗೂ ಸಕರ್ಾರದ ಮಧ್ಯೆ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿತ್ತು. ಸರ್ಕಾರ ರಚನೆ ವೇಳೆ ಶಾಸಕ ನಾಗನಗೌಡ ಅವರಿಗೆ ಬಿಜೆಪಿಗೆ ಕರೆತರಲು ಅವರ ಪುತ್ರ ಶರಣಗೌಡಗೆ ದೇವದುರ್ಗದ ಪ್ರವಾಸಿ ಮಂದಿರದಲ್ಲಿ ನಡೆದಿದ್ದ ರಹಸ್ಯ ಸಭೆಯಲ್ಲಿ ಯಡಿಯೂರಪ್ಪ ಆಫರ್ ನೀಡಿದ್ದರೆನ್ನಲಾದ ಆಡಿಯೋ ಟೇಪ್ ಬಹಿರಂಗಗೊಂಡಿತ್ತು. ಇದು ರಾಜ್ಯವಲ್ಲದೆ, ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿತ್ತು. ಕೆರೆ ತುಂಬುವ ಯೋಜನೆಗೆ ಹಣ ನೀಡದಿದ್ದಕ್ಕೆ ಈ ಬೆಳವಣಿಗೆ ಸಹ ಥಳಕು ಹಾಕಿಕೊಂಡು ಕಿರಿಕಿರಿಗೆ ಕಾರಣವಾಗಿತ್ತು.

    ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಕುಮಾರಸ್ವಾಮಿ ಅವರು ಗುರುಮಠಕಲ್ಗೆ ನೀಡಿದ ಕೆರೆ ತುಂಬಿಸುವ ಯೋಜನೆ ಅನುದಾನವೂ ಸೇರಿ ಖಾಸಾ ಮಠದ ಅಭಿವೃದ್ಧಿ, ರಸ್ತೆಗಳ ನಿರ್ಮಾಣ ಹೀಗೆ ನಾನಾ ಯೋಜನೆಗಳ ಹಣಕ್ಕೆ ಯಡಿಯೂರಪ್ಪ ಕತ್ತರಿ ಹಾಕಿದ್ದರು. ಇದನ್ನು ವಿರೋಧಿಸಿ ದಳಪತಿಗಳು ಗುರುಮಠಕಲ್ನಲ್ಲಿ ಬೃಹತ್ ಹೋರಾಟ ನಡೆಸಿದ್ದರು. ಅಲ್ಲಿಂದ ಸರ್ಕಾರದೊಂದಿಗೆ ತಿಕ್ಕಾಟ ನಡೆಯುತ್ತಲೇ ಇತ್ತು. ಸ್ವತಃ ಕುಮಾರಸ್ವಾಮಿ ಅವರು ಗುರುಮಠಕಲ್ಗೆ ಘೋಷಿಸಿದ್ದ ಅನುದಾನ ನೀಡಲು ಯಡಿಯೂರಪ್ಪ ಅವರಿಗೆ ಮನವಿ ಸಹ ಮಾಡಿದ್ದರೂ ಫಲ ಸಿಗಲಿಲ್ಲ. ಶಾಸಕ ನಾಗನಗೌಡ, ಪುತ್ರ ಶರಣಗೌಡ ಅವರು ಕುಮಾರಸ್ವಾಮಿ ಅವರೊಂದಿಗೆ ಎರಡು ಸಲ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ಕೊನೆಗೂ ಇದಕ್ಕೆ ಸ್ಪಂದನೆ ಸಿಕ್ಕಿದೆ. ಕಂದಕೂರ ಹೋರಾಟದಿಂದ ಮತ್ತೆ ಬಂದ ಅನುದಾನದ ವಿಷಯ ಸ್ಥಳೀಯರ ಪ್ರಶಂಸೆಗೆ ಕಾರಣವಾಗಿದೆ.

    ಶರಣಗೌಡ ಮಾಸ್ಟರ್ ಪ್ಲಾನ್​ ಸಕ್ಸಸ್
    ಕೆರೆ
    ತುಂಬಿಸುವ ಯೋಜನೆ ಅನುದಾನಕ್ಕೆ ಸಂಪುಟ ಸಭೆ ಸಮ್ಮತಿ ಕೊಡಿಸುವಲ್ಲಿ ಶರಣಗೌಡ ಕಂದಕೂರ ಅವರ ಮಾಸ್ಟರ್ ಪಾ್ಲೃನ್ ಸಕ್ಸಸ್ ಆಗಿದೆ. ಜೆಡಿಎಸ್ ಸರ್ಕಾರದ ಉಳಿವಿಗಾಗಿ ದೊಡ್ಡ ಸವಾಲು ಮೈಮೇಲೆ ಹೊದ್ದುಕೊಂಡು ಆಡಿಯೋ ಬಾಂಬ್ ಸಿಡಿಸಿದ್ದ ಶರಣಗೌಡರ ಮೇಲೆ ಬಿಜೆಪಿ ಸೇಡಿನ ರಾಜಕೀಯ ನಡೆಸಿದ್ದರಲ್ಲಿ ಎರಡು ಮಾತಿಲ್ಲ. ಇದು ಕ್ಷೇತ್ರದ ಜೆಡಿಎಸ್ ಪಾಳಯದಲ್ಲಿನ ತಲ್ಲಣಕ್ಕೆ ಕಾರಣವಾಗಿತ್ತು. ಆದರೆ ಕಳೆದುಕೊಂಡಲ್ಲೇ ಹುಡುಕು ಎಂಬಂತೆ ಶರಣಗೌಡ ಅವರು ಸಾಕಷ್ಟು ಚಾಣಾಕ್ಷ ತಂತ್ರಗಾರಿಕೆಯಿಂದ ವಾಪಸ್ ಹೋಗಿದ್ದ ಅನುದಾನ ತರಿಸುವ ಮೂಲಕ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts