More

    ಮಹಿಳೆಯರಿಗೆ ಬ್ಲ್ಯಾಕ್​ಮೇಲ್​ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಉದ್ಯಮಿಗಳು ಅರೆಸ್ಟ್​; ಅವರ ಲ್ಯಾಪ್​ಟಾಪ್​ ಚೆಕ್​ ಮಾಡಿದ ಪೊಲೀಸರು ಕಂಗಾಲು…!

    ಕೋಲ್ಕತ್ತ: ಇವರಿಬ್ಬರೂ ತಕ್ಕಮಟ್ಟಿಗೆ ಹೆಸರು ಮಾಡಿದ್ದ ಉದ್ಯಮಿಗಳು. ಆದರೆ ಮಾಡಬಾರದ ಕೆಲಸ ಮಾಡಿ ಅರೆಸ್ಟ್ ಆಗಿರುವ ಇವರ ಲ್ಯಾಪ್​ಟಾಪ್ ಪರಿಶೀಲನೆ ಮಾಡಿದ ಪೊಲೀಸರೂ ಕೂಡ ಶಾಕ್​ ಆಗಿದ್ದಾರೆ.
    ಕೋಲ್ಕತ್ತದಲ್ಲಿ ಆದಿತ್ಯ ಅಗರ್​ವಾಲ್ ಹಾಗೂ ಅನೀಶ್ ಲೋಹರುಕಾ ಎಂಬ ಇಬ್ಬರು ಉದ್ಯಮಿಗಳು ಹಾಗೂ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದ ಉದ್ಯೋಗಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಆದಿತ್ಯ ಮತ್ತು ಅನೀಶ್​ ಮಹಿಳೆಯರ ಜತೆ ಸೆಕ್ಸ್​ ಮಾಡಿ ಅದನ್ನು ವಿಡಿಯೋ ಮಾಡುತ್ತಿದ್ದು. ಆದರೆ ಅವರು ವಿಡಿಯೋ ಮಾಡುತ್ತಿರುವುದು ಮಹಿಳೆಯರಿಗೆ ಗೊತ್ತಾಗುತ್ತಿರಲಿಲ್ಲ. ಹೀಗೇ ಹಲವು ಮಹಿಳೆಯರೊಟ್ಟಿಗೆ ಇಬ್ಬರೂ ಪ್ರತ್ಯೇಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರು. ಒಂದೇ ಮಹಿಳೆಯೊಂದಿಗೆ ಇಬ್ಬರೂ ಬೇರೆಬೇರೆ ಸಲ ಸೆಕ್ಸ್​ ಮಾಡಿದ್ದೂ ಇತ್ತು. ಒಟ್ಟಿನಲ್ಲಿ ಅದೆಲ್ಲವೂ ಗುಪ್ತವಾಗಿ ಚಿತ್ರೀಕರಣವಾಗುತ್ತಿತ್ತು.

    ಬಳಿಕ ಅದೇ ವಿಡಿಯೋಗಳನ್ನಿಟ್ಟುಕೊಂಡು ಮಹಿಳೆಯರನ್ನು ಬೆದರಿಸುತ್ತಿದ್ದರು. ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಕೇಳಿದಷ್ಟು ಹಣ ಕೊಡದೆ ಹೋದರೆ ವಿಡಿಯೋಗಳನ್ನು ವೈರಲ್​ ಮಾಡುತ್ತೇವೆ ಎಂದು ಹೆದರಿಸುತ್ತಿದ್ದರು. ಅದಕ್ಕೆ ಹೆದರಿ ಮಹಿಳೆಯರೂ ಹಣ ಕೊಡುತ್ತಿದ್ದರು.

    ಕಳೆದ ನವೆಂಬರ್​ನಲ್ಲಿ ತಮ್ಮ ಜತೆ ಸೆಕ್ಸ್​ ನಡೆಸಿದ ಮಹಿಳೆಯನ್ನು ಬ್ಲ್ಯಾಕ್​ಮೇಲ್​ ಮಾಡಿದ್ದರು. ಹೆದರಿದ ಮಹಿಳೆ 5 ಲಕ್ಷ ರೂಪಾಯಿ ನೀಡಿದ್ದರು. ಆದರೆ ಮತ್ತೆ 10 ಲಕ್ಷ ರೂಪಾಯಿ ನೀಡಬೇಕು ಎಂದು ಉದ್ಯಮಿಗಳು ಹೇಳಿದ್ದರಿಂದ ಆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಆಗಿನಿಂದಲೇ ಪೊಲೀಸರು ತನಿಖಾ ಕಾರ್ಯಾಚರಣೆ ನಡೆಸುತ್ತಿದ್ದರು.

    ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆದಿತ್ಯ ಅಗರ್​ವಾಲ್ ಹಾಗೂ ಅನೀಶ್ ಲೋಹರುಕಾ ಅವರನ್ನು ಮಂಗಳವಾರ ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ. ಅವರೊಟ್ಟಿಗೆ ಇನ್ನೋರ್ವ ಕೂಡ ಅರೆಸ್ಟ್​ ಆಗಿದ್ದಾನೆ.
    ಬಂಧಿತರಿಂದ ವಶಪಡಿಸಿಕೊಂಡ ಲ್ಯಾಪ್​ಟಾಪ್​ ಪರಿಶೀಲನೆ ಮಾಡಿದ ಪೊಲೀಸರು ಶಾಕ್​ ಆಗಿದ್ದಾರೆ. 2013ರಿಂದಲೇ ಚಿತ್ರೀಕರಿಸಲಾದ ಸುಮಾರು 182 ಅಶ್ಲೀಲ ವಿಡಿಯೋಗಳು ಇದ್ದವು.

    ಮಹಿಳೆಯ ದೂರಿನ ಅನ್ವಯ ಅನೀಶ್​ ಲೊಹರುಕಾನ ಅಡುಗೆ ಕೆಲಸದವನಾದ ಕೈಲಾಶ್ ಯಾದವ್​​ನನ್ನು ಕೋಲ್ಕತ್ತ ಪೊಲೀಸ್​ ಇಲಾಖೆಯ ಡಿಟೆಕ್ಟಿವ್​ ಡಿಪಾರ್ಟ್​ಮೆಂಟ್​ನವರು ಬಂಧಿಸಿದ್ದಾರೆ. ಅವನು ಅಗರ್​ವಾಲ್​ ಮತ್ತು ಲೊಹರುಕಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಎಂದು ಹಿರಿಯ ಪೊಲೀಸ್​ ಅಧಿಕಾರಿಯೋರ್ವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts