More

    2 ಕೋಟಿ ರೂಪಾಯಿ ಮೌಲ್ಯದ ಇಲೆಕ್ಟ್ರಿಕ್ ಉಪಕರಣ ಕಳ್ಳತನ

    ಬೆಳಗಾವಿ: ತಾಮ್ರ ಮತ್ತು ಆಲ್ಯೂಮಿನಿಯಂ ವೈರ್ ಹಾಗೂ ಗೇರ್ ಬಾಕ್ಸ್ ಮಾರಾಟ ಮಾಡುತ್ತಿದ್ದ ಇಲೆಕ್ಟ್ರಿಕಲ್ ಅಂಗಡಿಯ ಗೋದಾಮಿಗೆ ಕನ್ನ ಹಾಕಿರುವ ಖದೀಮರು 1.94 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಪರಿಕರ ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಸ್ತ್ರೀ ನಗರದ ನಿವಾಸಿ ಮೋಹನಲಾಲ್ ಗೇನಾಜಿ ಪರಮಾರ ಅವರ ಮಾಲೀಕತ್ವದ ಗೋದಾಮಿನಲ್ಲಿ ಈ ಕಳ್ಳತನ ನಡೆದಿದ್ದು, ಒಟ್ಟು 1,94,51,134 ರೂ.ಮೌಲ್ಯದ ತಾಮ್ರ ಮತ್ತು ಆಲ್ಯೂಮಿನಿಯಂ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.

    ಮೇ 31ರ ರಾತ್ರಿಯಿಂದ ಜೂನ್ 1 ರ ಬೆಳಗ್ಗೆ 9 ಗಂಟೆಯ ಅವಧಿಯಲ್ಲಿಯೇ ಕಳ್ಳತನ ನಡೆದಿದೆ ಎಂದು ದೂರು ನೀಡಿರುವ ಮಾಲೀಕರು ತಿಳಿಸಿದ್ದಾರೆ. ಮೂಲತಃ ರಾಜಸ್ಥಾನದ ಜಾಲೋರ ಜಿಲ್ಲೆಯ ಲಾಹೋರ ತಾಲೂಕಿನ ಜೋಗಾವಾ ಗ್ರಾಮದ ನಿವಾಸಿಯಾಗಿದ್ದ ಮೋಹನ್‌ಲಾಲ್ ಕಳೆದ 27 ವರ್ಷಗಳಿಂದ ನಗರದ ಪುಲ್‌ಬಾಗ್ ಗಲ್ಲಿಯಲ್ಲಿ ಇಲೆಕ್ಟ್ರಿಕಲ್ ಗೋದಾಮು ಹಾಗೂ ಫೋರ್ಟ್ ರಸ್ತೆಯಲ್ಲಿ ಮೋಹನ್‌ಲಾಲ್ ಕೇಬಲ್ ಹೌಸ್ ಅಂಗಡಿ ನಡೆಸುತ್ತಿದ್ದಾರೆ.

    ಮೇ 31 ರಂದು ವ್ಯಾಪಾರ ಮುಗಿಸಿ ಮನೆಗೆ ತೆರಳಿ, ಮರುದಿನ ಬೆಳಗ್ಗೆ ಗೋದಾಮಿಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. 1 ಹಾಗೂ 1.5 ಮತ್ತು 2.5 ಸ್ಕ್ವೇರ್ ಎಂಎಂ ವೈರ್ ಬಂಡಲ್‌ಗಳು, ಅರ್ಥಿಂಗ್ ವೈರ್ ಮತ್ತು ಕಾಪರ್ ವೈರ್ ಬಂಡಲ್‌ಗಳು, ಹಾವೇಲ್ಸ್, ಪೋಲಿಕ್ಯಾಬ್, ಆರ್‌ಆರ್ ಕೇಬಲ್, ವಿ-ಗಾರ್ಡ್ ಹಾಗೂ ಫಿನೋಲೆಕ್ಸ್ ಉಪಕರಣ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts