ಐಪಿಎಲ್​ ಹರಾಜಿನಲ್ಲಿ 23 ಭಾರತೀಯ ಕ್ರಿಕೆಟಿಗರಿಗೆ 2 ಕೋಟಿ ರೂ. ಮೂಲಬೆಲೆ; ಪೃಥ್ವಿ ಷಾ, ಸರ್ಫ್ರಾಜ್​ ಬೆಲೆ ಕುಸಿತ!

web ind ipl
Published on

ನವದೆಹಲಿ: ತಂಡಗಳಿಂದ ರಿಲೀಸ್​ ಆಗಿರುವ ರಿಷಭ್​ ಪಂತ್​ (ಡೆಲ್ಲಿ), ಕನ್ನಡಿಗ ಕೆಎಲ್​ ರಾಹುಲ್​ (ಲಖನೌ), ಶ್ರೇಯಸ್​ ಅಯ್ಯರ್​ (ಕೆಕೆಆರ್​), ಆರ್​. ಅಶ್ವಿನ್​, ಯಜುವೇಂದ್ರ ಚಾಹಲ್​ (ರಾಜಸ್ಥಾನ), ಅರ್ಷದೀಪ್​ ಸಿಂಗ್​ (ಪಂಜಾಬ್​), ಇಶಾನ್​ ಕಿಶನ್​ (ಮುಂಬೈ), ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮೊಹಮದ್​ ಶಮಿ (ಗುಜರಾತ್​) ಗರಿಷ್ಠ ಎರಡು ಕೋಟಿ ರೂ. ಮೂಲಬೆಲೆಯೊಂದಿಗೆ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

2 ಕೋಟಿ ರೂ. ಮೂಲಬೆಲೆಯ ಇತರ ಭಾರತೀಯ ಕ್ರಿಕೆಟಿಗರೆಂದರೆ ವೆಂಕಟೇಶ್​ ಅಯ್ಯರ್​, ಆವೇಶ್​ ಖಾನ್​, ಖಲೀಲ್​ ಅಹ್ಮದ್​, ದೀಪಕ್​ ಚಹರ್​, ಮುಕೇಶ್​ ಕುಮಾರ್​, ಭುವನೇಶ್ವರ್​ ಕುಮಾರ್​, ಪ್ರಸಿದ್ಧ ಕೃಷ್ಣ, ಟಿ. ನಟರಾಜನ್​, ದೇವದತ್​ ಪಡಿಕ್ಕಲ್​, ಕೃನಾಲ್​ ಪಾಂಡ್ಯ, ಹರ್ಷಲ್​ ಪಟೇಲ್​, ವಾಷಿಂಗ್ಟನ್​ ಸುಂದರ್​, ಮೊಹಮದ್​ ಸಿರಾಜ್​, ಶಾರ್ದೂಲ್​ ಠಾಕೂರ್​, ಉಮೇಶ್​ ಯಾದವ್​.

ಪೃಥ್ವಿ, ಸರ್ಫ್ರಾಜ್​ ಮೂಲಬೆಲೆ ಇಳಿಕೆ

ಡೆಲ್ಲಿ ತಂಡದಲ್ಲಿ ರಿಟೇನ್​ ಆಗದ ಪೃಥ್ವಿ ಷಾ ಮತ್ತು ಕಳೆದ ಹರಾಜಿನಲ್ಲಿ ಸೇಲಾಗದ ಸರ್ಫ್ರಾಜ್​​ ಖಾನ್​ ಈ ಬಾರಿ ಐಪಿಎಲ್​ ಹರಾಜಿಗೆ ಮೂಲಬೆಲೆ ಇಳಿಕೆ ಮಾಡಿಕೊಂಡಿದ್ದಾರೆ. ಈ ಇಬ್ಬರು ಮುಂಬೈ ಬ್ಯಾಟರ್​ಗಳು ತಲಾ 75 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಪೃಥ್ವಿ ಷಾ ಸದ್ಯ ಫಿಟ್ನೆಸ್​-ಅಶಿಸ್ತಿನ ಕಾರಣಕ್ಕೆ ಮುಂಬೈ ರಣಜಿ ತಂಡದಿಂದಲೂ ಹೊರಗಿದ್ದರೆ, ಸರ್ಫ್ರಾಜ್​​ ಖಾನ್​ ಭಾರತ ಟೆಸ್ಟ್​ ತಂಡದ ಆಟಗಾರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net