More

    ಅಕ್ರಮವಾಗಿ ಸಾಗಿಸುತ್ತಿದ್ದ 18 ಎತ್ತು ವಶ

    ಬಂಕಾಪುರ: ಲಾರಿ ಕಂಟೈನರ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 18 ಎತ್ತುಗಳನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದು ಗೋಶಾಲೆಗೆ ಕಳುಹಿಸಿದ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಭಾನುವಾರ ರಾತ್ರಿ ನಡೆದಿದೆ.

    ಭಾನುವಾರ ರಾತ್ರಿ ಗಸ್ತು ಕರ್ತವ್ಯದ ಮೇಲೆ ಇದ್ದ ಪಿಎಸ್​ಐ ಪರಶುರಾಮ ಕಟ್ಟಿಮನಿ, ಸವಣೂರ ಕಡೆಯಿಂದ ಬರುತ್ತಿದ್ದ ಒಂದು ಲಾರಿ ಕಂಟೈನರ್ ತಡೆದು ಪರಿಶೀಲಿಸಿದಾಗ ಅದರಲ್ಲಿ 18 ಎತ್ತುಗಳನ್ನು ಹಿಂಸೆ ಆಗುವ ರೀತಿಯಲ್ಲಿ ತುಂಬಿ ಸಾಗಿಸುತ್ತಿರುವುದು ಕಂಡುಬಂದಿದೆ. ಲಾರಿ ಚಾಲಕನನ್ನು ವಿಚಾರಣೆಗೊಳಪಡಿಸಿದಾಗ ಅಕ್ರಮವಾಗಿ ಎತ್ತುಗಳನ್ನು ಸಾಗಿಸುತ್ತಿರುವುದು ತಿಳಿದುಬಂದಿದೆ.

    ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕಂಟೈನರ್ ಮತ್ತು ತುಮಕೂರ ಜಿಲ್ಲೆ ಕೊರಟಗೇರಿಯ ಆರೋಪಿ ಚಾಲಕ ಸಿ. ಸೋಮಶೇಖರನನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ನಾಲ್ಕು ಜನ ಆರೋಪಿಗಳು ಪರಾರಿಯಾಗಿದ್ದಾರೆ. ವಶಕ್ಕೆ ಪಡೆದ 18 ಎತ್ತುಗಳನ್ನು ಹಾವೇರಿ ಜಿಲ್ಲೆ ಸಂಗೂರಿನ ಬಸವೇಶ್ವರ ಗೋಶಾಲೆಗೆ ಬಿಡಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಿಎಸ್​ಐಗಳಾದ ಪರಶುರಾಮ ಕಟ್ಟಿಮನಿ, ಬಿ.ಜಿ. ದೊಡ್ಡಮನಿ, ಸಿಬ್ಬಂದಿ ಡಿ.ಎನ್. ಕೂಡಲ, ಎ.ಕೆ. ನದಾಫ, ಕಾಶಿನಾಥ ಗಾಮನಗಟ್ಟಿ, ರಮೇಶ ಕುರಿ, ಎಂ.ಬಿ. ಮೇಟಿ, ಎಸ್.ಸಿ. ಕುರಬರ, ಜಬಿವುಲ್ಲಾ ದೊಡ್ಡಮನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆ ಬಗ್ಗೆ ಎಸ್​ಪಿ ಕೆ. ಹನುಮಂತರಾಯ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts