More

    18 ಲಕ್ಷ ಜನರಿಗೆ 1,140 ರೂ. ಕೋಟಿ ನೆರವು

    ಗದಗ: ಕೋವಿಡ್-19 ಸಂದರ್ಭದಲ್ಲಿ ಯಾವೊಬ್ಬ ಕಾರ್ವಿುಕ ಹಸಿವಿನಿಂದ ಬಳಲಬಾರದು ಎಂಬ ಸದುದ್ಧೇಶದಿಂದ ಎಲ್ಲ ವಲಯದ ಕಾರ್ವಿುಕರಿಗೆ ವಸತಿ, ಆಹಾರ ಕಿಟ್, ಆರೋಗ್ಯ ಕಿಟ್ ನೀಡುವ ಮೂಲಕ ರಾಜ್ಯದ 18 ಲಕ್ಷ ಜನರಿಗೆ 1,140 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದು ಕಾರ್ವಿುಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 27 ಲಕ್ಷ ಸಂಘಟಿತ ಹಾಗೂ ಅಸಂಘಟಿತ ವಲಯದ 85 ಲಕ್ಷ ಕಾರ್ವಿುಕರಿದ್ದಾರೆ. ಸರ್ಕಾರದ ತಾತ್ಕಾಲಿಕ ಪರಿಹಾರದಿಂದ ಕಾರ್ವಿುಕರ ಕಷ್ಟ ಪರಿಹಾರವಾಗದಿದ್ದರೂ, ಕಾರ್ವಿುಕರ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದೆ ಎಂದರು.

    ರಾಜ್ಯದಲ್ಲಿ ಈಗಾಗಲೇ ಶೇ. 80ರಷ್ಟು ಕಾರ್ಖಾನೆಗಳು ಪುನರಾರಂಭಗೊಂಡು ಶೇ. 75ರಷ್ಟು ಕಾರ್ವಿುಕರು ಉದ್ಯೋಗಕ್ಕೆ ಮರಳಿದ್ದಾರೆ. ಕಾರ್ವಿುಕರಿಗೆ ಒಂದು ಬಾರಿಗೆ ನೀಡಲಾಗುತ್ತಿರುವ 5 ಸಾವಿರ ರೂ. ಸಹಾಯಧನ ಪಡೆಯಲಿದ್ದ ಕೆಲ ಅಡೆತಡೆಗಳನ್ನು ಸರಳೀಕರಣಗೊಳಿಸಲಾಗಿದ್ದು, ನೇರವಾಗಿ ಕಾರ್ವಿುಕರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ ಎಂದರು.

    ಸರ್ಕಾರದ ಅನುದಾನ ಸಮರ್ಪಕ ಬಳಕೆ ಆಗಬೇಕು. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಕಾರ್ವಿುಕ ಕಾರ್ಡ್ ಮಾಡಿಸಲು ಯಾರೊಬ್ಬರಿಗೂ ದುಡ್ಡು ಕೊಡುವ ಅವಶ್ಯಕತೆ ಇಲ್ಲ ಎಂದರು.

    ಗದಗ-ಬೆಟಗೇರಿ ನಗರದ ಗಾಂಧಿ ನಗರದಲ್ಲಿನ ಕಾರ್ವಿುಕ ಕಲ್ಯಾಣ ಮಂಡಳಿಯ ಸಮುದಾಯ ಭವನದಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸುವ ಹಾಗೂ ವಲಸೆ ಕಾರ್ವಿುಕರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲೊಂದು ವಸತಿ ಗೃಹ ನಿರ್ವಿುಸಲು ಸೂಕ್ತ ನಿವೇಶನ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.

    ಇದೇ ಸಂದರ್ಭದಲ್ಲಿ ವಿವಿಧ ವಲಯದ ಕಾರ್ವಿುಕರಿಗೆ ಸಚಿವರು ಚೆಕ್ ವಿತರಿಸಿದರು. ಶಾಸಕ ರಾಮಣ್ಣ ಲಮಾಣಿ, ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಪಂ ಸಿಇಒ ಡಾ.ಆನಂದ್ ಕೆ., ಕಾರ್ವಿುಕ ಇಲಾಖೆಯ ಅಧಿಕಾರಿ ಸುಧಾ ಗರಗ ಸೇರಿದಂತೆ ಅಧಿಕಾರಿಗಳು, ವಿವಿಧ ವಲಯದ ಕಾರ್ವಿುಕರು ಸಭೆಯಲ್ಲಿ ಇದ್ದರು.

    ಸೂಕ್ತ ಜಾಗ ನೀಡಿದರೆ ಸುಸಜ್ಜಿತ ಇಎಸ್​ಐ ಆಸ್ಪತ್ರೆ

    ರಾಜ್ಯದಲ್ಲಿರುವ ಕಾರ್ವಿುಕ ರಾಜ್ಯ ವಿಮಾ ಚಿಕಿತ್ಸಾಲಯ(ಇಎಸ್​ಐ)ಗಳಲ್ಲಿ ಔಷಧಗಳಿಗೆ ಕೊರತೆ ಇಲ್ಲ. ಕಾರ್ವಿುಕ ಕಾರ್ಡ್ ಹೊಂದಿದವರಿಗೆ ಮಾತ್ರ ಚಿಕಿತ್ಸೆ ನೀಡದೇ, ಬಡತನದಲ್ಲಿರುವ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಬೇಕು. ಕಾರ್ವಿುಕ ಚಿಕಿತ್ಸಾಲಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಇಎಸ್​ಐ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು 150 ವೈದ್ಯರನ್ನು ನೇಮಕ ಮಾಡಲಾಗಿದೆ. ಅದರಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಎಸ್​ಐ ಹಾಗೂ ಗದಗನ ಸಿಎಸ್​ಐ ಆಸ್ಪತ್ರೆಗಳ ನಡುವೆ ಒಪ್ಪಂದಕ್ಕೆ ಪ್ರಸ್ತಾವನೆ ಇದ್ದು, ಕ್ರಮ ವಹಿಸಲಾಗುವುದು. ನಗರ ಮಧ್ಯೆ ಸೂಕ್ತ ಜಾಗ ನೀಡಿದರೆ ಸುಸಜ್ಜಿತ ಇಎಸ್​ಐ ಆಸ್ಪತ್ರೆ ನಿರ್ವಿುಸಲಾಗುವುದು ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಕಾರ್ವಿುಕ ಹಾಗೂ ಸಕ್ಕರೆ ಇಲಾಖೆಗಳು ಕೋವಿಡ್​ನಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರೂ ರಾಜ್ಯದ ಕಾರ್ವಿುಕರು ಹಾಗೂ ರೈತರ ಹಿತದೃಷ್ಟಿಯಿಂದ ರಾಜ್ಯದ ಕಬ್ಬು ಬೆಳೆಗಾರರ ಒಟ್ಟು 10,900 ಕೋಟಿ ರೂ.ಗಳಲ್ಲಿ 10,736 ಕೋಟಿ ರೂ.ಗಳನ್ನು ರೈತರಿಗೆ ಪಾವತಿಸಲಾಗಿದೆ. ಇನ್ನುಳಿದ ಬಾಕಿ ಹಣವನ್ನು ಶೀಘ್ರವೇ ಪಾವತಿಸಲಾಗುವುದು.

    | ಶಿವರಾಮ ಹೆಬ್ಬಾರ ಕಾರ್ವಿುಕ ಸಚಿವ

    ಕೋವಿಡ್-19 ಸಂದರ್ಭದಲ್ಲಿ ವಿವಿಧ ವಲಯದ ಕಾರ್ವಿುಕರಿಗೆ 5 ಸಾವಿರ ರೂ. ಪರಿಹಾರ ಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 25,080 ಕಟ್ಟಡ ಕಾರ್ವಿುಕರಿದ್ದು, 23,377 ಕಾರ್ವಿುಕರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗಿದೆ. ಅಗಸ ಮತ್ತು ಕ್ಷೌರಿಕರು 5 ಸಾವಿರ ರೂ. ಪರಿಹಾರಕ್ಕಾಗಿ ಒಟ್ಟು 3,239 ಅರ್ಜಿಗಳು ಸಲ್ಲಿಕೆ ಆಗಿವೆ. ಅದರಲ್ಲಿ 2,528 ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ.

    | ವೆಂಕಟೇಶ್ ಸಿಂದಿಹಟ್ಟಿ ಉಪ ಆಯುಕ್ತ, ಬೆಳಗಾವಿ ವಿಭಾಗದ ಕಾರ್ವಿುಕ ಇಲಾಖೆ

    ಆಪಾದನೆ ಮಾಡುವುದರಲ್ಲೇ ಕಾಲಹರಣ

    ಲಕ್ಷೆ್ಮೕಶ್ವರ: ಬಿಜೆಪಿ ಸರ್ಕಾರ ಎಲ್ಲ ಹಂತದಲ್ಲೂ ಜನಹಿತ ಕಾರ್ಯದ ಮೂಲಕ ಜನಮನ್ನಣೆ ಗಳಿಸಿದೆ. ಆದರೆ, ಕಾಂಗ್ರೆಸ್ ಮಾತ್ರ ಕೇವಲ ಆಪಾದನೆ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತಿದೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದೆ ಎಂದು ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಪಟ್ಟಣದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಬುಧವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಲಕ್ಷೆ್ಮೕಶ್ವರ ಎಪಿಎಂಸಿ ಪ್ರಾಂಗಣದಲ್ಲಿ ಶ್ರಮಿಕರ ಭವನ ನಿರ್ವಿುಸಲು ಅನುದಾನ ಕಲ್ಪಿಸುವಂತೆ ಹಮಾಲರ ಸಂಘದಿಂದ ಮನವಿ ಸಲ್ಲಿಸಲಾಯಿತು. ಪಟ್ಟಣದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪುಲಿಗೆರೆ ಆರಾಧ್ಯದೈವ ಶ್ರೀ ಸೋಮೇಶ್ವರನ ಭಾವಚಿತ್ರ ನೀಡಿ ಗೌರವಿಸಿದರು.

    ಹೆಬ್ಬಾರ ಅಭಿಮಾನಿ ಬಳಗದ ನವೀನ ಬೆಳ್ಳಟ್ಟಿ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಚಂಬಣ್ಣ ಬಾಳಿಕಾಯಿ, ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ, ತಾಪಂ ಅಧ್ಯಕ್ಷ ಪರಶುರಾಮ ಇಮ್ಮಡಿ, ನಾರಾಯಣಪ್ಪ ಬೇವಿನಮರದ, ತಾಲೂಕು ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಸತೀಶ ಬೊಮಲೆ, ಸೋಮಣ್ಣ ಉಪನಾಳ, ಶ್ರೀಕಾಂತ ಪೂಜಾರ, ಸಿದ್ದು ದುರಗಣ್ಣವರ, ಶಂಕರ ಸಜ್ಜನ, ವಿನಯ ಪಾಟೀಲ, ಅರುಣ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts