More

    16ನೇ ಸ್ಥಾನ ಗಳಿಸುವಲ್ಲಿ ಕೆಎಲ್‌ಇ ಪಾತ್ರ ಮುಖ್ಯ

    ಗೋಕಾಕ: ದ್ವಿತೀಯ ಪಿಯುಸಿ ಪರೀಕ್ಷೆ ಲಿತಾಂಶದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೆ 16ನೇ ಸ್ಥಾನ ಪಡೆಯುವಲ್ಲಿ ಕೆಎಲ್‌ಇ ಸಂಸ್ಥೆ ಪಾತ್ರ ಮಹತ್ವದ್ದು ಎಂದು ಚಿಕ್ಕೋಡಿ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಪಾಂಡುರಂಗ ಭಂಡಾರಿ ಹೇಳಿದರು.

    ನಗರದ ಕೆಎಲ್‌ಇ ಸಂಸ್ಥೆಯ ಸಿಎಸ್ ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ಸಾಧಕರಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿ, ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಸಂಸ್ಥೆಗೆ ಹಾಗೂ ಇಲಾಖೆಗೆ ಕೀರ್ತಿ ತಂದಿದ್ದ್ದಾರೆ ಎಂದರು.

    ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿಸಲು ಶ್ರಮಿಸಲಾಗುತ್ತಿದೆ. ವಾರ್ಷಿಕ ನಗರದ ಕೆಎಲ್‌ಇ ಪಿಯು ಕಾಲೇಜಿನ ಹತ್ತು ಮೆಡಿಕಲ್ ಹಾಗೂ 50 ಇಂಜನಿಯರಿಂಗ್ ಪ್ರವೇಶಾತಿ ಪಡೆಯುವಂತೆ ಸಿದ್ಧಗೊಳಿಸ ಲಾಗುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದರು.

    ರಾಜ್ಯಮಟ್ಟದ ವಿಜ್ಞಾನ ವಿಭಾಗದಲ್ಲಿ ಅನುಕ್ರಮವಾಗಿ 10, 12, 22, 23, 25ನೇ ಸ್ಥಾನ ಪಡೆದ ಎಂ. ಸುಭಿಕ್ಷಾ, ವೈಷ್ಣವಿ ಪಾಟೀಲ, ವೈಷ್ಣವಿ ಬರಗಾಲಿ, ರೋಹಿಣಿ ಮಾಳವಾಡ, ಲಕ್ಷ್ಮೀಕಾಂತ ಮಾಳ್ಯಾಗೋಳ, ಹಾಗೂ ವಾಣಿಜ್ಯ ವಿಭಾಗದಲ್ಲಿ 25ನೇ ಸ್ಥಾನ ಪಡೆದ ತೃಪ್ತಿ ಲಿಂಬಾಣಿ, ಕಲಾ ವಿಭಾಗದಲ್ಲಿ ಅನುಕ್ರಮವಾಗಿ 21, 22ನೇ ಸ್ಥಾನ ಪಡೆದ ಕೋಮಲ ಕಟ್ಟಿಮನಿ, ಸಿದ್ದಪ್ಪ ಮುರಗಜ್ಜನವರ ಇತರರನ್ನು ಸತ್ಕರಿಸಲಾಯಿತು.

    ಅಮಿತ ಸೌಂದಲಗೇರಕರ, ರೂಪಾ ಮುನವಳ್ಳಿ, ಪ್ರೊ.ಚಂದ್ರಶೇಖರ ಅಕ್ಕಿ, ಓಂಪ್ರಕಾಶ ಅಂಗಡಿ, ಆಡಳಿತಾಧಿಕಾರಿ ಜಿ.ಎಂ. ಅಂದಾನಿ, ಪ್ರಾಚಾರ್ಯರಾದ ಕೆ.ಬಿ.ಮೇವುಂಡಿಮಠ, ಎಂ.ಎ. ಪಾಟೀಲ, ನಂದಾ ಚುನಮರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts