More

    ತುಮಕೂರು ಜಿಲ್ಲೆಯಲ್ಲಿ 155 ಪ್ರಕರಣ ಪತ್ತೆ

    ತುಮಕೂರು: ಜಿಲ್ಲೆಯಲ್ಲಿ ಮತ್ತೆ ಕರೊನಾ ವ್ಯಾಪಿಸಲಾರಂಭಿಸಿದ್ದು, ಬುಧವಾರ ಒಂದೇ ದಿನ 155 ಜನರಿಗೆ ಸೋಂಕು ದೃಢಪಟ್ಟಿದೆ.

    ಚಿಕ್ಕನಾಯಕನಹಳ್ಳಿ 11, ಗುಬ್ಬಿ, ಕೊರಟಗೆರೆಯಲ್ಲಿ 4, ಕುಣಿಗಲ್ 10, ಮಧುಗಿರಿ 11, ಪಾವಗಡ 6, ಶಿರಾ 14, ತಿಪಟೂರು 27, ತುರುವೇಕೆರೆ 13 ಹಾಗೂ ತುಮಕೂರು ತಾಲೂಕಿನ 55 ಜನರಿಗೆ ಸೋಂಕು ತಗುಲಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 942ಕ್ಕಿಳಿದಿದೆ. 103 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ವಾಪಸಾಗಿದ್ದಾರೆ.

    102 ಪುರುಷರು, 53 ಮಹಿಳೆಯರಿಗೆ ಸೋಂಕು ಪತ್ತೆಯಾಗಿದ್ದು, ಇವರ ಪೈಕಿ ಒಂದು ಮಗು ಹಾಗೂ 60 ವರ್ಷ ಮೇಲ್ಪಟ್ಟ 29 ಹಿರಿಯರಿಗೆ ಸೋಂಕು ತಗುಲಿದೆ. ಒಟ್ಟು ಪ್ರಕರಣಗಳ ಸಂಖ್ಯೆ 20279ಕ್ಕೇರಿದ್ದು ಆಯುಧಪೂಜೆ ಹಾಗೂ ಉಪಚುನಾವಣೆ ಎಫೆಕ್ಟ್ ಮುಂದಿನ ದಿನಗಳಲ್ಲಿ ಗೋಚರಿಸಲಾರಂಭಿಸಲಿದೆ.

    ಈವರೆಗೆ ಜಿಲ್ಲೆಯಲ್ಲಿ 2.32 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 1.92 ಲಕ್ಷ ಜನರು ವರದಿ ನೆಗೆಟಿವ್ ಬಂದಿದೆ, ಉಪಚುನಾವಣೆಯ ಜನಜಾತ್ರೆ ಮುಗಿಸಿರುವ ಶಿರಾ ತಾಲೂಕಿನಲ್ಲಿ ಸಾಮೂಹಿಕ ಕರೊನಾ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು ಪ್ರಕರಣಗಳು ಮತ್ತಷ್ಟು ಹೆಚ್ಚಾದರೂ ಆಶ್ಚರ್ಯ ಪಡುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts