More

    ಪಶ್ಚಿಮ ಬಂಗಾಳದಲ್ಲಿ 15 ದಿನ ಸಂಪೂರ್ಣ ಲಾಕ್​ಡೌನ್​

    ಕೊಲ್ಕತ : ಪಶ್ಚಿಮ ಬಂಗಾಳದಲ್ಲಿ ಏರುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮೇ 16 ರಿಂದ 30 ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗಿದೆ. ಈ ಲಾಕ್​ಡೌನ್​ ನಾಳೆ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಸೀಮಿತ ಅವಕಾಶವಿರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

    ಶುಕ್ರವಾರದಂದು ಬಂಗಾಳದಲ್ಲಿ 20,846 ಹೊಸ ಕರೊನಾ ಕೇಸುಗಳು ದಾಖಲಾಗಿವೆ ಮತ್ತು 136 ಜನ ಕರೊನಾ ಸಂಬಂದವಾಗಿ ಸಾವಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರಸ್ತುತ ಸಾಂಕ್ರಾಮಿಕ ಸನ್ನಿವೇಶದಿದಂದಾಗಿ ಎಲ್ಲಾ ಖಾಸಗಿ, ಸರ್ಕಾರಿ ಕಛೇರಿಗಳನ್ನು ಮುಚ್ಚಲಾಗುವುದು ಮತ್ತು ತುಂಬಾ ತುರ್ತು ಪರಿಸ್ಥಿತಿ ಬಂದರೆ ಮಾತ್ರ ಕಾರ್ಯನಿರ್ವಹಿಸುವುವು ಎಂದು ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂದ್ಯೋಪಾಧ್ಯಾಯ್​ ಹೇಳಿದ್ದಾರೆ.

    ಇದನ್ನೂ ಓದಿ: ಭೀಕರ ಕರೊನಾ ವೈರಸ್​ ಹುಟ್ಟು ಇನ್ನೂ ಸ್ಪಷ್ಟವಾಗಿಲ್ಲ : ವಿಜ್ಞಾನಿಗಳ ಅಸಮಾಧಾನ

    ಶಾಲೆಗಳು, ಕಾಲೇಜುಗಳು, ದೋಣಿ ಸೇವೆಗಳು, ಜಿಮ್‌ಗಳು, ಸಿನೆಮಾ ಹಾಲ್‌ಗಳು, ಸಲೂನ್‌ಗಳು, ಈಜುಕೊಳಗಳು, ಸ್ಥಳೀಯ ರೈಲುಗಳು, ಮೆಟ್ರೋ ಮತ್ತು ಅಂತರರಾಜ್ಯ ಬಸ್/ರೈಲು ಸೇವೆಗಳು ಸಹ ಮುಚ್ಚಲ್ಪಡುತ್ತವೆ ಎಂದಿದ್ದಾರೆ. ಖಾಸಗಿ ಕಾರು, ಟ್ಯಾಕ್ಸಿ, ಆಟೋರಿಕ್ಷಾಗಳ ಸಂಚಾರದ ಮೇಲೂ ನಿರ್ಬಂಧ ಹೇರಲಾಗಿದೆ.

    ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಕಾಲಾವಕಾಶ ಮಾಡಿಕೊಟ್ಟಿದ್ದು, ಹಣ್ಣು, ತರಕಾರಿ, ಹಾಲು, ಬ್ರೆಡ್​​ನಂತಹ ಅಗತ್ಯ ವಸ್ತುಗಳನ್ನು ಮಾರುವ ಮಾರುಕಟ್ಟೆಗಳು ಈ ಸಮಯದಲ್ಲಿ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಬ್ಯಾಂಕ್​ಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಅಗತ್ಯ ಸೇವೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಓಡಾಟ ಹೊರತುಪಡಿಸಿ, ರಾತ್ರಿ ಕರ್ಫ್ಯೂ ಮುಂದುವರಿಯಲಿದೆ.

    ಇದನ್ನೂ ಓದಿ: ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್​… ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !

    ರಾಜ್ಯದಲ್ಲಿ ಯಾವುದೇ ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಜನ ಸೇರಲು ಅವಕಾಶ ಇರುವುದಿಲ್ಲ. ಮದುವೆಗಳಿಗೆ 50 ಜನರಿಗೆ ಮಾತ್ರ ಅವಕಾಶವಾದರೆ, ಅಂತ್ಯಕ್ರಿಯೆಯಲ್ಲಿ 20 ಜನ ಭಾಗವಹಿಸಬಹುದು ಎಂದು ಸರ್ಕಾರ ಆದೇಶಿಸಿದೆ. (ಏಜೆನ್ಸೀಸ್)

    ‘ಹೆಚ್ಚು ಮಲಗಿದ್ದಕ್ಕೆ ಸಾರಿ’ ಎಂದು ಸಾವಿನ ವದಂತಿಯನ್ನು ಅಲ್ಲಗಳೆದ ನಟ

    VIDEO | ವಲಸೆ ಅಪರಾಧಿಗಳೆಂದು ಭಾರತೀಯರ ಬಂಧನ… ಬಿಡುಗಡೆ ಕೋರಿ ರಸ್ತೆಗಿಳಿದ ಸ್ಥಳೀಯರು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts