More

    ಸ್ವಾಭಿಮಾನ ಬಿಟ್ಟು ಬದುಕಬಾರದು

    ಅಥಣಿ ಗ್ರಾಮೀಣ, ಬೆಳಗಾವಿ: ಗಂಜಿ ಕುಡಿದರೂ ಚಿಂತೆಯಿಲ್ಲ, ಅಂಜಿ ಬದುಕಬಾರದು. ಸ್ವಾಭಿಮಾನ ಬಿಡಬಾರದು ಎಂದು ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಹೇಳಿದರು.
    ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಪಲ್ಲಕ್ಕಿ ಹಾಗೂ ಕುಂಭೋತ್ಸವಕ್ಕೆ ಚಾಲನೆ ನೀಡಿ, ಬಳಿಕ ಜರುಗಿದ ಪ್ರವಚನ ಮಹಾಮಂಗಲೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

    ಶ್ರೀಮಂತ ಹಣ ಗಳಿಸುವುದರಲ್ಲಿ ಮಾನವೀಯತೆ ಮರೆತರೆ, ಬಡವ ತನ್ನ ಹೊಟ್ಟೆ ತುಂಬಿಕೊಳ್ಳುವುದರಲ್ಲಿ ಮಾನವೀಯತೆಯಿಂದ ದೂರಾಗುತ್ತಿದ್ದಾನೆ. ಕಾಗದದ ತುಂಡು ಗಳಿಸುವುದರಲ್ಲಿ ಮನುಷ್ಯ ನಿರತನಾಗಿದ್ದಾನೆ. ದೇವರು, ಧರ್ಮ ಎಂಬುದನ್ನು ಮರೆತು ಮೃಗದಂತೆ ವರ್ತಿಸುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು. ರಟಕಲ್‌ನ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಹಣ, ಅಧಿಕಾರ ಹಾಗೂ ಆಸ್ತಿ ಕ್ಷಣಿಕ ಸುಖ ನೀಡುತ್ತವೆ. ಜ್ಞಾನ, ಸಂಸ್ಕಾರ ಅನಂತ ಫಲ ಕೊಡುತ್ತವೆ. ವಿವೇಕದಿಂದ ಜೀವನ ಸಾಗಿಸಬೇಕು. ತುಳಿದು ಜೀವನ ಮಾಡದೆ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂದರು.

    ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಜರುಗಿತು. ಗುರುಮೂರ್ತಯ್ಯ ಕಾಡದೇವರಮಠ, ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿದರು. ವೀರೇಶ್ವರ ಶರಣರು, ವಿಶಾಲ ದೇಸಾಯಿ, ಮಲ್ಲಿಕಾರ್ಜುನ ಹಿರೇಮಠ, ಸುಭಾಷ ಸೋನಕರ, ಗುಳಪ್ಪ ಪೂಜಾರಿ, ಜಾಯಪ್ಪ ದೇಸಾಯಿ, ಕಾಂತು ಮಾದರ, ಶಿವಗೌಡ ನೇಮಗೌಡ, ಹನುಮಂತ ಬಡಿಗೇರ, ಅರುಣ ಮುದಕಣ್ಣವರ, ಮಲ್ಲಪ್ಪ ನೇಮಗೌಡ, ರಮೇಶ ಮುದಕಣ್ಣವರ, ಅಪ್ಪು ನಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts