More

    ಅಥಣಿ ಗ್ರಾಮೀಣ, ಬೆಳಗಾವಿ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದಿಂದ ತುಬಚಿ ಕ್ರಾಸ್‌ವರೆಗಿನ 6 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

    ಅಥಣಿ, ಮಹಾರಾಷ್ಟ್ರದ ಮಿರಜ, ಜತ್ತ, ಕೊಲ್ಲಾಪುರ ಭಾಗದ ಜನರು, ಅಥಣಿ ತಾಲೂಕಿನ ಸಕ್ಕರೆ ಕಾರ್ಖಾನೆಗಳಿಂದ ಸರಕು ಸಾಗಿಸುವ ವಾಹನಗಳು ಹಾಗೂ ಬಾಗಲಕೋಟೆ, ರಾಯಚೂರ ಸೇರಿ ಆಂಧ್ರ ಪ್ರದೇಶದ ಕಡೆಗೆ ತೆರಳಲು ಇದೇ ರಸ್ತೆಯನ್ನು ಬಳಸುತ್ತಾರೆ. ಹೀಗಾಗಿ ದಿನನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಇದರಿಂದ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾಗಿದೆ. ಲೋಕೋಪಯೋಗಿ ಇಲಾಖೆಗೆ ಒಳಪಡುವ ಈ ರಸ್ತೆಯು 2 ವರ್ಷಗಳ ಹಿಂದೆ ಮೇಲ್ಪದರು (ಎಸ್.ಡಿ.ಬಿ.ಸಿ) ಡಾಂಬರ್ ಹಾಗೂ ಕೆಳಗಿನ ಒಂದು ಲೇಯರ್ (ಬಿ.ಎಂ) ಡಾಂಬರ್ ಹಾಕದೇ ರಸ್ತೆ ಮಾಡಿದ್ದರಿಂದ ಕಾಮಗಾರಿ ಕಳಪೆಯಾಗಿದೆ. ಆದ್ದರಿಂದ ರಸ್ತೆ ಮಧ್ಯದಲ್ಲಿಯೇ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ಹರಸಾಹಸ ಪಡಬೇಕಾಗಿದೆ.

    ಈ ಕುರಿತು ಸಂಬಂಧಿಸಿದವರನ್ನು ವಿಚಾರಿಸಿದಾಗ ಈ ರಸ್ತೆ ಮಾಡಿದ ಗುತ್ತಿಗೆದಾರ ರಾಜಕೀಯ ಹಾಗೂ ಪ್ರಭಾವಿ ವ್ಯಕ್ತಿಗಳ ಹೆಸರು ಹೇಳಿ ನಮ್ಮನ್ನು ಹೆದರಿಸುತ್ತಿದ್ದಾನೆ ಎಂದು ದೂರಿದರು. ಏನೇ ಇರಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ರಸ್ತೆಯಲ್ಲಿರುವ ತಗ್ಗು ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನರ ಒತ್ತಾಸೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts