More

    ಶ್ರೀ ಉಮಾಮಹೇಶ್ವರ ಸ್ವಾಮಿ 125ನೇ ವರ್ಷದ ವಾರ್ಷಿಕೋತ್ಸವ

    ಕಡೂರು: ಪಟ್ಟಣದ ಛತ್ರದ ಬೀದಿಯ ವಾಸವಿ ದೇವಾಲಯದಲ್ಲಿ ನೆಲೆಸಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ 125ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ 12,13 ಮತ್ತು 14 ರಂದು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಕೆ.ಎಸ್.ನಾಗೇಂದ್ರ ಗುಪ್ತ ತಿಳಿಸಿದರು.
    ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಧಾರ್ಮಿಕ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತನ್ನದೇ ಐತಿಹಾಸಿಕ ಇತಿಹಾಸ ಹೊಂದಿರುವ ದೇವಾಲಯದಲ್ಲಿ ಶತಮಾನೋತ್ಸವದ ಸಂಭ್ರಮವನ್ನು 1999ರಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಇದೀಗ 125 ವರ್ಷದ ವಾರ್ಷಿಕ ಮಹೋತ್ಸವದಲ್ಲಿ ೆ.13ರ ಬೆಳಗ್ಗೆ ಶ್ರೀ ಮಹಾರುದ್ರಪಾರಾಯಣ ಚಂಡಿಕಾಹೋಮ, ಪೂರ್ಣಹುತಿ, ಸಂಜೆ ಶ್ರೀರಾಮ ಪಟ್ಟಾಭಿಷೇಕ 13 ದ್ರವ್ಯಗಳಿಂದ ಶ್ರೀರಾಮತಾರಕ ಹೋಮ ನಡೆಯಲಿದೆ ಎಂದು ತಿಳಿಸಿದರು.
    ೆ.14ರಂದು ಬೆಳಗ್ಗೆ ರುದ್ರಪಾರಾಯಣ ನಂತರ ಮಹಾರುದ್ರ ಹೋಮ ಎಲ್ಲಾ ದೇವತೆಗಳ ಸನ್ನಿಧಿಯಲ್ಲಿ ಕಲಾ ಹೋಮ, ಸಂತಾನ ಅಪೇಕ್ಷೆಗಳಿಗಾಗಿ ಪುತ್ರಕಾಮೇಷ್ಠಿಯಾಗ ನಂತರ ಉಮಾ ಮಹೇಶ್ವರ ಸ್ವಾಮಿ ಹಾಗೂ ವಾಸವಿ ಅಮ್ಮನವರ ಗೋಪುರಗಳಿಗೆ ಕುಂಭಾಭಿಷೇಕ, ಪೂರ್ಣಹುತಿ ನಡೆಯಲಿದೆ. ಮತ್ತೂರಿನ ಕೇಶವ ಅವಧಾನಿಗಳು ಮತ್ತು ತಂಡದವರಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದರು.
    14ರ ಸಂಜೆ 5 ಗಂಟೆಗೆ ವಾಸವಿ ಕಲ್ಯಾಣ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಸಮಾರಂಭದ ಉದ್ಘಾಟಿಸಲಿದ್ದು, ವಿಶೇಷ ಅತಿಥಿಗಳಾಗಿ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಭಾಗವಹಿಸಲಿದ್ದಾರೆ. ಗೌರವಾಧ್ಯಕ್ಷ ಕೆ.ಎಸ್. ಸುದರ್ಶನ್, ಟಿ.ಡಿ.ಸತ್ಯನ್ ಸೇರಿದಂತೆ ಆರ್ಯವೈಶ್ಯ ಸಮಾಜದ ಬಂಧುಗಳು, ಪದಾಧಿಕಾರಿಗಳು ಮಹಿಳಾ ಸದಸ್ಯರು ಭಾಗಿಯಾಗಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts