More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ಪಾರ್ಟಿಯ ನೆಪದಲ್ಲಿ ಅಪ್ರಾಪ್ತೆಯನ್ನು ಮನೆಗೆ ಕರೆದು ಏಳು ವಿದ್ಯಾರ್ಥಿಗಳಿಂದ ನೀಚ ಕೃತ್ಯ

    ತೇಜ್​ಪುರ್​: ಕೆಲ ದಿನಗಳ ಹಿಂದಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದ್ದ ಏಳು ವಿದ್ಯಾರ್ಥಿಗಳು 12 ವರ್ಷದ ಅಪ್ರಾಪ್ತ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಮರಕ್ಕೆ ನೇಣು ಹಾಕಿದ ಆರೋಪದಲ್ಲಿ ಭಾನುವಾರ ಬಂಧನಕ್ಕೆ ಒಳಗಾಗಿರುವುದು ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ.

    ಈ ಭಯಾನಕ ಘಟನೆ ಅಸ್ಸಾಂನ ತೇಜ್​ಪುರ್​ ಪಟ್ಟಣದ ಗೊಹಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಚಕ್ಲಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಎಲ್ಲ ಆರೋಪಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಬಳಿಕ ಅಪರಾಧವೆಸಗಿ ಪರಾರಿಯಾಗಿದ್ದ ಅವರನ್ನು ಪೊಲೀಸರು ಹಿಡಿದು ತಂದಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪರೀಕ್ಷೆ ಮುಗಿಸಿದ್ದ ಖುಷಿಯಲ್ಲಿ ಸಂತ್ರಸ್ತೆಯನ್ನು ಪಾರ್ಟಿಯ ನೆಪದಲ್ಲಿ ಮನೆಗೆ ಕರೆದು ಕೃತ್ಯವೆಸಗಿದ್ದಾರೆ. ಶುಕ್ರವಾರ ರಾತ್ರಿ ಅತ್ಯಾಚಾರ ನಡೆದಿದ್ದು, ಹತ್ತಿರ ಅರಣ್ಯದ ಮರಕ್ಕೆ ನೇಣು ಹಾಕಲಾಗಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಮೃತದೇಹ ಶನಿವಾರ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts