More

    ಬಿಡಿಸಿಸಿ ಬ್ಯಾಂಕ್‌ಗೆ ೧೨ ಕೋಟಿ ರೂ. ಲಾಭ: ಕೆ.ತಿಪ್ಪೇಸ್ವಾಮಿ

    ಹೊಸಪೇಟೆ:ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಕಳೆದ ೪೭ ವರ್ಷಗಳಿಂದ ಲಾಭ ಹಾದಿಯಲ್ಲಿ ಸಾಗುತ್ತಿದ್ದು, ೨೦೨೨-೨೩ನೇ ಸಾಲಿಗೆ ಒಟ್ಟು ೧೨.೩೧ ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಪ್ರಭಾರ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೯.೫೬ ಕೋಟಿ ರೂ. ಇದ್ದ ಲಾಭ ಈ ವರ್ಷ ೧೨.೩೧ ಲಾಭ ಗಳಿಸಿದ್ದು, ೩ ಕೋಟಿ ರೂ. ಲಾಭ ಹೆಚ್ಚಾಗಿದೆ ಎಂದರು.

    ೨೦೨೨-೨೩ ನೇ ಸಾಲಿಗೆ ಬ್ಯಾಂಕಿನ ಒಟ್ಟು ದುಡಿಮೆಯ ಬಂಡವಾಳ ೨೩೬೨.೮೭ ಕೋಟಿ ರೂ. ಹೊಂದಿತ್ತು. ೧೨೫.೫೩ ಕೋಟಿ ರೂ. ಷೇರು ಬಂಡವಾಳ, ೨೦೯.೦೪ ಕೋಟಿ ರೂ. ಸ್ವಂತ ಬಂಡವಾಳ, ೧೪೩೭.೧೧ ಕೋಟಿ ರೂ. ಠೇವಣಿ ಬಂದಿದ್ದು, ೧೪೪೦.೫೪ ಕೋಟಿ ರೂ. ಸಾಲ ವಿತರಿಸಲಾಗಿದೆ. ಆ ಪೈಕಿ ಕೃಷಿ , ಕೃಷಿತೇರರ ಸೇರಿದಂತೆ ಒಟ್ಟಾರೆ ಸಾಲ ವಸೂಲಾತಿಯಲ್ಲಿ ಶೇ.೯೪.೧೨ ಪ್ರಗತಿ ಸಾಧಿಸಿದೆ. ಎನ್‌ಪಿಎ ೪.೧೫ ರಷ್ಟಿದ್ದು, ಇನ್ನುಳಿದಂತೆ ಬ್ಯಾಂಕ್ ವ್ಯವಹಾರದಲ್ಲಿ ೧೨.೩೧ ಕೋಟಿ ರೂ. ಲಾಭ ಗಳಿಸಿದೆ ಎಂದು ವಿವರಿಸಿದರು.

    ಬಳ್ಳಾರಿ ೫, ವಿಜಯನಗರ ಜಿಲ್ಲೆಯ ೬ ಸೇರಿದಂತೆ ಒಟ್ಟು ೧೧ ತಾಲೂಕು ವ್ಯಾಪ್ತಿಯಲ್ಲಿ ೩೩ ಶಾಖೆಗಳಲ್ಲಿ ೨೯೪ ನೌಕರರಿದ್ದು, ಸಿಬಿಎಸ್ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ದೊರೆಯುವ ಬಹುತೇಕ ಸೇವೆಗಳನ್ನು ಬಿಡಿಸಿಸಿ ಒದಗಿಸುತ್ತಿದೆ. ಈ ಮೂಲಕ ಅವಳಿ ಜಿಲ್ಲೆಯ ಗ್ರಾಹಕರ ವಿಶ್ವಾಸ ಉಳಿಸಿಕೊಂಡಿದ್ದು, ಯಶಸ್ಸಿನ ಹಾದಿಯಲ್ಲಿ ಸಾಗಿದೆ ಎಂದು ಹೇಳಿದರು.

    ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಆನಂದ ಸಿಂಗ್ ಸಲ್ಲಿಸಿದ್ದ ರಾಜೀನಾಮೆ ಅಂಗೀಕಾರವಾಗಿದೆ. ಈಗಾಗಲೇ ಬ್ಯಾಂಕ್‌ನ ಚುನಾವಣೆ ವೇಳಾ ಪಟ್ಟಿಯೂ ಬಂದಿದೆ. ಆದರೂ, ಮುಂದಿನ ಕ್ರಮಕ್ಕಾಗ ಸಹಕಾರ ಇಲಾಖೆ ಗಮನಕ್ಕೆ ತರಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಬ್ಯಾಂಕ್‌ನ ಸಿಇಒ ಬಿ.ಎಸ್.ಹರಿಶ್, ನಿರ್ದೇಶಕರಾದ ಜೆ.ಎಂ.ವೃಷಬೇAದ್ರಯ್ಯ, ಟಿ.ಎಂ.ಚAದ್ರಶೇಖರಯ್ಯ, ಡಿ.ಭೋಗಾರೆಡ್ಡಿ, ಎಂ.ಗುರುಸಿದ್ಧನಗೌಡ, ಕೋಳೂರು ಮಲ್ಲಿಕಾರ್ಜುನ ಗೌಡ, ಎಲ್.ಎಸ್. ಆನಂದ, ಕೆ.ರವೀಂದ್ರನಾಥ, ಚಿದಾನಂದ ಐಗೋಳ, ಬಿ.ಕೆ.ಪ್ರಕಾಶ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts