More

    113ನೇ ಭಾಗವತ್ ಸಪ್ತಾಹ – ರಾಜ್ಯ-ಹೊರರಾಜ್ಯದ ಭಕ್ತರು ಭಾಗಿ

    ತೇರದಾಳ: ಅಹೋರಾತ್ರಿ ರಾಮನಾಮ ಸ್ಮರಣೆ ಮಾಡುತ್ತ ನಿರಂತರ ಏಳು ದಿನಗಳವರೆಗೆ ನಡೆಯುವ ಭಾಗವತ್ ಸಪ್ತಾಹದಲ್ಲಿ ರಾಜ್ಯ-ಹೊರರಾಜ್ಯದ ಭಕ್ತರು ಭಾಗಿಯಾಗಿ ಸೇವೆ ಸಲ್ಲಿಸುವ ವಿಶೇಷ ಕಾರ್ಯಕ್ರಮವು ಪಟ್ಟಣದ ದತ್ತಾತ್ರೆಯ ಮಂದಿರದಲ್ಲಿ ಈಗಾಗಲೇ ಆರಂಭವಾಗಿದ್ದು, ಸೆ.10ರ ವರೆಗೆ ನಡೆಯಲಿದೆ.

    113ನೇ ಭಾಗವತ್ ಸಪ್ತಾಹದ ಅಂಗವಾಗಿ ಮಂದಿರದಲ್ಲಿ ದತ್ತ ಸ್ವಾಮಿಯ ಮುಂಭಾಗದಲ್ಲಿ ನಾಲ್ಕು ಜನ ಭಕ್ತರು ಕಟ್ಟಿಗೆಯ ಮನೆ ಮೇಲೆ ನಿಂತು ತಾಳ ಬಾರಿಸುತ್ತ ರಾಮನಾಮ ಸ್ಮರಣೆ ನಡೆಸುತ್ತಾರೆ. ಸರದಿಯಲ್ಲಿ ಭಕ್ತರು ಭಾಗಿಯಾಗುವ ಮೂಲಕ ಏಳು ದಿನಗಳ ಮಂತ್ರಪಠಣ ನಿರಂತರವಾಗಿರುತ್ತದೆ. ತನ್ನಿಮಿತ್ಯವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯ ನಡೆಯುತ್ತಿವೆ. ಭಾಗವತ್, ಗುರುಚರಿತ್ರೆ, ಶಾಸೋಕ್ತ ಹಾಗೂ ಗೊಂದೊಲಕರ ಮಹಾರಾಜರ ಚರಿತ್ರ ಪಾರಾಯಾಣ ಮತ್ತು ಸಂಗೀತ ಸೇವೆಗಳು ನಡೆಯುತ್ತಿವೆ. ನಿತ್ಯ ಪೂಜೆ, ಜ್ಞಾನ ಹಾಗೂ ಸೇವೆಗಳ ನಂತರ ಮಧ್ಯಾಹ್ನ ಮಹಾಪ್ರಸಾದವನ್ನೂ ಏರ್ಪಡಿಸಲಾಗಿದೆ.

    ದತ್ತ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗುರುರಾಜ ಕುಲಕರ್ಣಿ, ಬಾಳಾಸಾಹೇಬ ದೇಶಪಾಂಡೆ, ಅರ್ಚಕ ಅನಂತ ಅಗ್ನಿಹೋತ್ರಿ, ಟ್ರಸ್ಟಿಗಳಾದ ಗುಂಡು ದೇಶಪಾಂಡೆ, ಉಪೇಂದ್ರ ದೇಶಪಾಂಡೆ, ಬಾಗೇಶಾ ಕುಲಕರ್ಣಿ, ಗಿರೀಶ ಕುಲಕರ್ಣಿ ಸೇರಿ ಬ್ರಾಹ್ಮಣ ಸಮಾಜದವರು ಭಾಗಿಯಾಗಿದ್ದರು.

    ಸಪ್ತಾಹ ಕಾರ್ಯಕ್ರಮಕ್ಕೆ ಪಟ್ಟಣ ಸೇರಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಹಾಗೂ ಮಹಾರಾಷ್ಟ್ರದ ಪುಣೆ, ಮುಂಬೈ, ಕೊಲ್ಹಾಪುರ ಸೇರಿ ವಿವಿಧ ನಗರಗಳಿಂದ ಭಕ್ತರು ಆಗಮಿಸಿ, ಭಾಗಿಯಾಗಿರುವುದು ವಿಶೇಷವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts