More

    ಕುವೆಂಪು ವಿವಿಯಲ್ಲಿ 105 ಯೂನಿಟ್ ರಕ್ತ ಸಂಗ್ರಹ

    ಶಿವಮೊಗ್ಗ: ಒಂದು ಬಾರಿ ರಕ್ತದಾನ ಮಾಡುವುದರಿಂದ ನಾಲ್ಕು ಜೀವಗಳನ್ನು ಉಳಿಸಬಹುದು. 20 ನಿಮಿಷಗಳಲ್ಲಿ ಮಾಡಬಹುದಾದ ದೊಡ್ಡ ಸಮಾಜಸೇವೆ ಎಂದರೆ ಅದು ರಕ್ತದಾನ ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ. ಎಸ್.ವೆಂಕಟೇಶ್ ಹೇಳಿದರು.

    ಕುವೆಂಪು ವಿವಿಯಲ್ಲಿ ಯುವ ರೆಡ್‌ಕ್ರಾಸ್ ಘಟಕ, ಶಿವಮೊಗ್ಗದ ಆಶಾ ಜ್ಯೋತಿ ಸಂಜೀವಿನಿ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರಗಳ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಯೂನಿಟ್ ರಕ್ತವನ್ನು ಕೆಂಪು, ಬಿಳಿರಕ್ತಕಣಗಳು, ಪ್ಲೇಟ್‌ಲೆಟ್‌ಗಳು ಮತ್ತು ಪ್ಲಾಸ್ಮಾ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿ ಅವಶ್ಯವಿರುವವರಿಗೆ ನೀಡಲಾಗುತ್ತದೆ ಎಂದರು.
    ಮನುಷ್ಯನ ದೇಹದಲ್ಲಿ ಪ್ರತಿದಿನ 100 ಎಂಎಲ್ ರಕ್ತ ಉತ್ಪಾದನೆಯಾಗುತ್ತದೆ. 120 ದಿನಗಳ ನಂತರ ಆ ರಕ್ತಕಣಗಳು ಸಾಯುತ್ತವೆ. ರಕ್ತದಾನ ಮಾಡುವುದರಿಂದ ರಕ್ತಕಣಗಳು ವ್ಯರ್ಥವಾಗುವುದನ್ನು ತಡೆಯಬಹುದು. ಜತೆಗೆ ಹೊಸ ರಕ್ತ ಉತ್ಪಾದನೆಗೆ ಸಹಾಯವಾಗುತ್ತದೆ ಎಂದರು.
    ವಿವಿಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಎಸ್.ಎಂ.ರವೀಂದ್ರಗೌಡ, ಡಾ. ಎನ್.ಡಿ.ವಿರೂಪಾಕ್ಷ, ಡಾ. ಗಜಾನನ ಪ್ರಭು, ಉಪನ್ಯಾಸಕರಾದ ಶಂಕರ್‌ಗುರು, ಸತ್ಯನಾರಾಯಣ್, ಸಂಪತ್‌ಕುಮಾರ್ ಮುಂತಾದವರಿದ್ದರು. ವಿವಿಯ ಅಧ್ಯಾಪಕ, ಅಧ್ಯಾಪಕೇತರ ವರ್ಗ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ರಕ್ತದಾನದಲ್ಲಿ ಭಾಗವಹಿಸಿದ್ದರು. 105 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts