More

    100ರ ಕೆಳಗಿಳಿಯದ ಕರೊನಾ

    ಹಾವೇರಿ: ವೈದ್ಯ, ನರ್ಸ್, ಪೊಲೀಸ್, ಆಶಾ ಕಾರ್ಯಕರ್ತೆ, ಕೆಎಸ್​ಆರ್​ಟಿಸಿ ಕಂಟ್ರೋಲರ್ ಸೇರಿ ಜಿಲ್ಲೆಯಲ್ಲಿ ಬುಧವಾರ 126 ಜನರಿಗೆ ಕರೊನಾ ದೃಢಪಟ್ಟಿದೆ. 139 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

    ಈವರೆಗೆ 3,794 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 2,398 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 87 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 1,309 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 852 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 457 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ಹಾವೇರಿ ತಾಲೂಕಿನಲ್ಲಿ 42, ಬ್ಯಾಡಗಿ ಹಾಗೂ ರಾಣೆಬೆನ್ನೂರ ತಲಾ 20, ಹಾನಗಲ್ಲ 18, ಹಿರೇಕೆರೂರ 10, ಸವಣೂರ ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ತಲಾ 8 ಜನರಿಗೆ ಬುಧವಾರ ಸೋಂಕು ದೃಢಪಟ್ಟಿದೆ.

    ಬುಧವಾರ ಸವಣೂರ 5, ಶಿಗ್ಗಾಂವಿ 9, ರಾಣೆಬೆನ್ನೂರ 38, ಹಾವೇರಿ 46, ಬ್ಯಾಡಗಿ 3, ಹಾನಗಲ್ಲ 2 ಹಾಗೂ ಹಿರೇಕೆರೂರು ತಾಲೂಕಿನ 36 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ.

    ಇಬ್ಬರ ಸಾವು: ಹಾವೇರಿ ವಿದ್ಯಾ ನಗರದ 73 ವರ್ಷದ ಪುರುಷ ಹಾಗೂ ಶಿಗ್ಗಾಂವಿ ತಾಲೂಕಿನ ಹುಲಗೂರಿನ 55 ವರ್ಷದ ಮಹಿಳೆ ಮೃತಪಟ್ಟಿದ್ದು, ಉಸಿರಾಟದ ತೊಂದರೆ ಹಿನ್ನೆಲೆ ಯಲ್ಲಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕೋವಿಡ್ ದೃಢಪಟ್ಟಿತ್ತು. ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

    ಪಿಪಿಇ ಕಿಟ್ ಧರಿಸಿ ಪರೀಕ್ಷೆ ಬರೆದ ಇಂಜಿನಿಯರಿಂಗ್ ವಿದ್ಯಾರ್ಥಿ

    ಕಾರವಾರ: ಕರೊನಾ ಇರುವ ವಿದ್ಯಾರ್ಥಿಯೊಬ್ಬ ಇಂಜಿನಿಯರಿಂಗ್ ಪರೀಕ್ಷೆ ಬರೆದ ಘಟನೆ ಇಲ್ಲಿನ ಮಾಜಾಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ನಡೆದಿದೆ. 8ನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿದ್ದ ಹಾವೇರಿ ಮೂಲದ ವಿದ್ಯಾರ್ಥಿಯೊಬ್ಬನಿಗೆ ಮಂಗಳವಾರ ಅನಾರೋಗ್ಯ ಉಂಟಾಗಿತ್ತು. ಗಂಟಲ ದ್ರವದ ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ಖಚಿತವಾಗಿದೆ. ವಿದ್ಯಾರ್ಥಿ ಪರೀಕ್ಷೆ ಬರೆಯಲು ಇಚ್ಛಿಸಿದ್ದ. ಇದರಿಂದ ಆತನಿಗೆ ಶಾಸಕಿ ರೂಪಾಲಿ ನಾಯ್ಕ ಅವರ ಸೂಚನೆಯ ಮೇರೆಗೆ ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಮಾಹಿತಿ ನೀಡಿ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿಯಲ್ಲಿ ಪಿಪಿಇ ಕಿಟ್ ತೊಡಿಸಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. ಆಗಸ್ಟ್ 27 ರಂದು ಇನ್ನೊಂದು ಪರೀಕ್ಷೆ ಇದ್ದು, ಅದನ್ನೂ ಸುರಕ್ಷಾ ಕ್ರಮದೊಂದಿಗೆ ಬರೆಯಲು ವಿದ್ಯಾರ್ಥಿಗೆ ವ್ಯವಸ್ಥೆ ಮಾಡಿಕೊಡಲಾಗುವುದು. ವಿದ್ಯಾರ್ಥಿ ಆರೋಗ್ಯವಾಗಿದ್ದು, ಆತನ ಕೊಠಡಿಯಲ್ಲಿ ಈ ಮೊದಲು ಪರೀಕ್ಷೆ ಬರೆದ ಎಲ್ಲ 40 ವಿದ್ಯಾರ್ಥಿಗಳನ್ನು 27 ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದು. ಆತ ವಾಸ್ತವ್ಯ ಮಾಡಿದ ಬಿಸಿಎಂ ಹಾಸ್ಟೇಲ್​ನ ವಿದ್ಯಾರ್ಥಿಗಳಿಗೂ ಕರೊನಾ ಪರೀಕ್ಷೆ ಮಾಡಿಸಲು ಮನವಿ ಮಾಡಲಾಗಿದೆ ಎಂದು ಕಾಲೇಜ್​ನ ಪ್ರಾಂಶುಪಾಲೆ ಶಾಂತಲಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts